ಕೆಪಿಎಸ್ಸಿ ನೇಮಕಾತಿ; ಕೆಎಟಿ ಮಹತ್ವದ ಆದೇಶ
ಬೆಂಗಳೂರು, ಸೆಪ್ಟೆಂಬರ್ 09: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ 1998 ಮತ್ತು 1999ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಕೆಪಿಎಸ್ಸಿ 2019ರಲ್ಲಿ ಹೊರಡಿಸಿದ್ದ ಎರಡೂ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದೆ.
ಕರ್ನಾಟಕ ಲೋಕಸೇವಾ ಆಯೋಗ 2019ರ ಜ.25 ಮತ್ತು ಆ.22ರಂದು ಹೊರಡಿಸಿದ್ದ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದೆ. 2002ರಲ್ಲಿ ಅಂದಿನ ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಅವರಿದ್ದ ಪೀಠ ನೀಡಿದ ಆದೇಶದ ಅನ್ವಯ ಹೊಸ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಸೂಚನೆ ನೀಡಿದೆ.
ಕೆಪಿಎಸ್ಸಿ ನೇಮಕಾತಿ; ಪದವಿ ಪೂರ್ವ ವಿದ್ಯಾರ್ಹತೆ ಹುದ್ದೆಗಳ ವಿವರ
ಎಸ್. ಎಸ್. ಮಧುಕೇಶ್ವರ್ ಮತ್ತಿತ್ತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೆಎಟಿ ಅಧ್ಯಕ್ಷ ಡಾ. ಕೆ. ಭಕ್ತವತ್ಸಲ ಹಾಗೂ ಸದಸ್ಯ ಎಸ್. ಕೆ. ಪಟ್ನಾಯಕ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಮಂಗಳವಾರ ಈ ಅರ್ಜಿಯ ತೀರ್ಪು ಪ್ರಕಟಿಸಲಾಗಿದೆ.
1998ರ ನೇಮಕಾತಿ ವಿವಾದ; ಯಥಾಸ್ಥಿತಿಗೆ ಕೆಎಟಿ ಆದೇಶ
2016ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ಒಂದನೇ ಅಂಶವನ್ನು ಸರ್ಕಾರ ಜಾರಿಗೊಳಿಸಿಲ್ಲ. ಅದರಿಂದ ಹೊರ ಬರಲು ಹೊಸ ಕಾಯ್ದೆ ಜಾರಿಗೊಳಿಸಿದೆ. 2 ಮತ್ತು 3ನೇ ಮೌಲ್ಯ ಮಾಪನದಲ್ಲಿ 20 ಅಂಕಗಳ ವ್ಯತ್ಯಾಸ ಬಂದರೆ ಅಂತಹ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಮತ್ತೆ ಮೌಲ್ಯ ಮಾಪನ ಮಾಡಬೇಕು ಎಂಬ ಆದೇಶ ಪಾಲಿಸಿಲ್ಲ ಎಂದು ವಾದಿಸಲಾಗಿತ್ತು.
ಕಂದಾಯ ಭವನಕ್ಕೆ ಕೊರೊನಾ; ಕೆಎಟಿ ಕಲಾಪ ಬಂದ್
ಹೈಕೋರ್ಟ್ ಆದೇಶದಂತೆ 91 ಉತ್ತರ ಪ್ರತ್ರಿಕೆಗಳ ಮರು ಮೌಲ್ಯಮಾಪನದ ಅಂಕಗಳಗಳನ್ನು ಪರಿಗಣನೆ ಮಾಡಬೇಕಿತ್ತು. ಆದರೆ, ಅಭ್ಯರ್ಥಿಗಳ ಅಂಕಪಟ್ಟಿ ಮಾತ್ರ ಪರಿಗಣಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದರು. 2016ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು.