ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ; ಕೆಎಟಿ ಮಹತ್ವದ ಆದೇಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ 1998 ಮತ್ತು 1999ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಕೆಪಿಎಸ್‌ಸಿ 2019ರಲ್ಲಿ ಹೊರಡಿಸಿದ್ದ ಎರಡೂ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದೆ.

Recommended Video

Congress ನಾಯಕರ ಜೊತೆ Ragini ಹಾಗು Sanjjanaa - BJP tweet | Oneindia Kannada

ಕರ್ನಾಟಕ ಲೋಕಸೇವಾ ಆಯೋಗ 2019ರ ಜ.25 ಮತ್ತು ಆ.22ರಂದು ಹೊರಡಿಸಿದ್ದ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದೆ. 2002ರಲ್ಲಿ ಅಂದಿನ ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಅವರಿದ್ದ ಪೀಠ ನೀಡಿದ ಆದೇಶದ ಅನ್ವಯ ಹೊಸ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಸೂಚನೆ ನೀಡಿದೆ.

ಕೆಪಿಎಸ್‌ಸಿ ನೇಮಕಾತಿ; ಪದವಿ ಪೂರ್ವ ವಿದ್ಯಾರ್ಹತೆ ಹುದ್ದೆಗಳ ವಿವರ ಕೆಪಿಎಸ್‌ಸಿ ನೇಮಕಾತಿ; ಪದವಿ ಪೂರ್ವ ವಿದ್ಯಾರ್ಹತೆ ಹುದ್ದೆಗಳ ವಿವರ

ಎಸ್. ಎಸ್. ಮಧುಕೇಶ್ವರ್ ಮತ್ತಿತ್ತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೆಎಟಿ ಅಧ್ಯಕ್ಷ ಡಾ. ಕೆ. ಭಕ್ತವತ್ಸಲ ಹಾಗೂ ಸದಸ್ಯ ಎಸ್. ಕೆ. ಪಟ್ನಾಯಕ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಮಂಗಳವಾರ ಈ ಅರ್ಜಿಯ ತೀರ್ಪು ಪ್ರಕಟಿಸಲಾಗಿದೆ.

1998ರ ನೇಮಕಾತಿ ವಿವಾದ; ಯಥಾಸ್ಥಿತಿಗೆ ಕೆಎಟಿ ಆದೇಶ 1998ರ ನೇಮಕಾತಿ ವಿವಾದ; ಯಥಾಸ್ಥಿತಿಗೆ ಕೆಎಟಿ ಆದೇಶ

KAT Cancelled KPSC 2019 Selection List

2016ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನ ಒಂದನೇ ಅಂಶವನ್ನು ಸರ್ಕಾರ ಜಾರಿಗೊಳಿಸಿಲ್ಲ. ಅದರಿಂದ ಹೊರ ಬರಲು ಹೊಸ ಕಾಯ್ದೆ ಜಾರಿಗೊಳಿಸಿದೆ. 2 ಮತ್ತು 3ನೇ ಮೌಲ್ಯ ಮಾಪನದಲ್ಲಿ 20 ಅಂಕಗಳ ವ್ಯತ್ಯಾಸ ಬಂದರೆ ಅಂತಹ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಮತ್ತೆ ಮೌಲ್ಯ ಮಾಪನ ಮಾಡಬೇಕು ಎಂಬ ಆದೇಶ ಪಾಲಿಸಿಲ್ಲ ಎಂದು ವಾದಿಸಲಾಗಿತ್ತು.

ಕಂದಾಯ ಭವನಕ್ಕೆ ಕೊರೊನಾ; ಕೆಎಟಿ ಕಲಾಪ ಬಂದ್ ಕಂದಾಯ ಭವನಕ್ಕೆ ಕೊರೊನಾ; ಕೆಎಟಿ ಕಲಾಪ ಬಂದ್

ಹೈಕೋರ್ಟ್ ಆದೇಶದಂತೆ 91 ಉತ್ತರ ಪ್ರತ್ರಿಕೆಗಳ ಮರು ಮೌಲ್ಯಮಾಪನದ ಅಂಕಗಳಗಳನ್ನು ಪರಿಗಣನೆ ಮಾಡಬೇಕಿತ್ತು. ಆದರೆ, ಅಭ್ಯರ್ಥಿಗಳ ಅಂಕಪಟ್ಟಿ ಮಾತ್ರ ಪರಿಗಣಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದರು. 2016ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು.

English summary
Karnataka administrative tribunal cancelled KPSC selection list of 2019. Directed to announce fresh list on the order of Karnataka high court on 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X