ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ತಿರುಮಲದಲ್ಲಿ ಆರಂಭ

|
Google Oneindia Kannada News

ತಿರುಪತಿ, ಆಗಸ್ಟ್ 3: ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ತಿರುಮಲದ ಶ್ರೀ ಕಾಶೀಮಠದ ಶಾಖಾಮಠದಲ್ಲಿ ಪ್ರಾರಂಭವಾಯಿತು.

ಗೌಡ ಸಾರಸ್ವತ ಸಮಾಜದ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ತಿರುಪತಿ ತಿರುಮಲ ಬೆಟ್ಟದಲ್ಲಿರುವ ಕಾಶೀಮಠ ಸಂಸ್ಥಾನದ ಶಾಖಾ ಮಠದಲ್ಲಿ ಗುರುವಾರದಂದು (ಆ 2) ಮೃತಿಕಾ ಪೂಜನೆಯೊಂದಿಗೆ ಪ್ರಾರಂಭವಾಯಿತು.

ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀದೇವರುಗಳ ಬಿಂಬಗಳಿಗೆ ಪಂಚಾಮೃತ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ ಬಳಿಕ ಪವಮಾನ ಅಭಿಷೇಕಗಳು ಶ್ರೀಗಳವರ ದಿವ್ಯ ಹಸ್ತಗಳಿಂದ ನೆರವೇರಿದವು, ಬಳಿಕ ನೆರೆದ ಸಮಾಜ ಬಾಂಧವರಿಗೆ ತಪ್ತ ಮುದ್ರಾಧಾರಣೆ ನಡೆಯಿತು. ಸಾಯಂಕಾಲ ಮೃತಿಕಾ ಪೂಜನೆ ಬಳಿಕ ಸಭಾ ಕಾರ್ಯಕ್ರಮ ಜರಗಿತು.

Kashi Matadhipathi Samyamindra Thirtha Seer Chathurmas Vratha started in Thirumala on August 02

ಚಾತುರ್ಮಾಸ್ಯ ವೃತದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜುಲೈ 18 ರಂದು ತಿರುಮಲೆ ತಲಪಿದ್ದರು. ಆ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಳದ ವೈದಿಕರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಗಿತ್ತು.

ಸೆಪ್ಟಂಬರ್ 24ರಂದು ಮೃತಿಕಾ ವಿಸರ್ಜನೆ, ಸೀಮೋಲ್ಲಂಘನೆ ಮೂಲಕ ಕಾಶಿಶ್ರೀಗಳ ಚಾತುರ್ಮಾಸ ಕೊನೆಗೊಳ್ಲಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರವಚನ, ಪಾರಾಯಣಗಳು ನಡೆಯಲಿವೆ. ಆಗಸ್ಟ್ ಎರಡರಂದು ಸಂಜೆ ಆರುಗಂಟೆಗೆ ಮುದ್ರಾಧಾರಣೆ ನಡೆಯಲಿದೆ.

ಆಗಸ್ಟ್ 15ರಂದು ನಾಗಪಂಚಮಿ, ಮಾಧವೇಂದ್ರ ಸ್ವಾಮಿ ಪುಣ್ಯತಿಥಿ, ಆಗಸ್ಟ್ 25ರಂದು ಖುಗೋಪಕರ್ಮ, ಸೆಪ್ಟಂಬರ್ 2ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ ಸಮಿತಿ, ತಿರುಮಲದ ಕಾಶಿಮಠದ ಶಾಖಾಮಠದಲ್ಲಿ ಆಯೋಜಿಸಿದೆ.

ಇದಲ್ಲದೇ ಸೆಪ್ಟಂಬರ್ 13-19ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 23ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ವಿಶೇಷ ಪಾರಾಯಣಕ್ಕಾಗಿ ಸಮಾಜದ ವಿದ್ವತ್ ವೈದಿಕರು ಕೆಲದಿನಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಚಾತುರ್ಮಾಸ ಸಮಿತಿ ವಿನಂತಿಸಿಕೊಂಡಿದೆ. (ಚಿತ್ರ : ಮಂಜು ನೀರೇಶ್ವಾಲ್ಯ)

English summary
Kashi Matadhipathi Samyamindra Thirtha Seer Chathurmas Vratha started in Thirumala on August 02. This religious event will conclude on September 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X