ಕಾಸರಗೋಡಿನ ಸಂಶೋಧನಾ ಸಂಸ್ಥೆಗೆ ಶತಮಾನೋತ್ಸವ ಸಂಭ್ರಮ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಮಾರ್ಚ್ 11 : ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಶತಮಾನೋತ್ಸವದ ಸಂಭ್ರಮದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾರ್ಚ್‌ನಿಂದ ಡಿಸೆಂಬರ್ ಕೊನೆಯತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಸಿಆರ್‌ಐ ನಿರ್ದೇಶಕ ಡಾ.ಪಿ.ಎಚ್ ಚೌಡಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಾರ್ಚ್ 12ರ ಶನಿವಾರ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಬರುವ ನೂರಾರು ಕೃಷಿಕರು ಶತಮಾನೋತ್ಸವದ ನೆನಪಿಗಾಗಿ 100 ತಳಿಯ ತೆಂಗಿನ ಗಿಡಗಳನ್ನು ಈ ಸಂಶೋಧನಾ ಸಂಸ್ಥೆ ಆವರಣದಲ್ಲಿ ನೆಡಲಿದ್ದಾರೆ' ಎಂದರು. [ಕೃಷಿಯ ಬಗ್ಗೆ ಮಂಡ್ಯ ರೈತರಿಗೆ ವಿದ್ಯಾರ್ಥಿಗಳ ಪಾಠ]

agriculture

'ಕಿಸಾನ್ ಮೇಳ ಏರ್ಪಡಿಸಲಿದ್ದು, ವಿವಿಧ ರಾಜ್ಯಗಳಿಂದ 4000ಕೃಷಿಕರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ತೆಂಗು, ಅಡಿಕೆ, ಕೊಕ್ಕೋ ಕೃಷಿ ಮಾಡುವ 96 ವಿದೇಶಿ ರಾಷ್ಟ್ರಗಳ ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಮಾರ್ಚ್ 12 ರಂದು ಬೆಳಗ್ಗೆ 10ಕ್ಕೆ ಶತಮಾನೋತ್ಸವ ಸಿಪಿಸಿಆರ್‌ಐ ಉಪ ನಿರ್ದೇಶಕ ಡಾ.ಕೆ.ಕೃಷ್ಣಪ್ಪ ಕುಮಾರ್ ಉದ್ಘಾಟಿಸಲಿದ್ದಾರೆ. [ಕರಿಮೆಣಸು ಬೆಳೆಗಾರನ ಕಂಗೆಡಿಸಿದ 'ಸೊರಗುರೋಗ']

ಕೃಷಿಕರಿಗೆ ವಿವಿಧ ಕೃಷಿಗಳ ಬಗ್ಗೆ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಬೃಹತ್ ಸಾವಯವ ಗೊಬ್ಬರದ ತಳಿ ಇಲ್ಲಿದ್ದು, ಕೃಷಿಕರಿಗೆ ಗೊಬ್ಬರ ಒದಗಿಸುತ್ತದೆಯಲ್ಲದೆ ಗೊಬ್ಬರ ನಿರ್ಮಾಣ ಹಾಗೂ ಸಾವಯವ ಕೃಷಿ ನಿರ್ಮಾಣ ಹಾಗೂ ಸಾವಯವ ಕೀಟ ನಾಶಕಗಳ ವಿಧಾನದ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಇವುಗಳ ಹೊರತಾಗಿ ಆಡು, ದನ, ಮೊಲ, ಜೇನು ಸಾಕಣೆ, ಹುಲ್ಲಿನ ಕೃಷಿ, ಅಣಬೆ ಕೃಷಿ ಸಹಿತ ಸಾಮಾನ್ಯ ವರ್ಗದವರಿಗೂ ಅತ್ಯಂತ ಕಡಿಮೆ ಬಂಡವಾಳದಲ್ಲಿ ತೊಡಗಬಹುದಾದ ವ್ಯವಸಾಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Plantation Crop Research Institute (CPCRI) Kasaragod gears up for century celebration. Celebration programme will be held on Saturday, March 11, 2016.
Please Wait while comments are loading...