ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಆತ್ಮಹತ್ಯೆ ಪ್ರಕರಣ: ಭೀಮಾ ನಾಯ್ಕ್ ಬಂಧನ

By Ramesh
|
Google Oneindia Kannada News

ಬೆಂಗಳೂರು, ಡಿಸೆಂಬರ್. 11 : ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆಗೆ ಸರಿ ಸುಮಾರು 100 ಕೋಟಿ ರು ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಿ ಕೊಟ್ಟಿದ್ದಾರೆಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ಅವರನ್ನು ಪೊಲೀಸರು ಭಾನುವಾರ ಬೆಳಗ್ಗೆ ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಬೆಂಗಳೂರು ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾ ನಾಯ್ಕ್ ಅವರ ಕಚೇರಿಯಲ್ಲಿ ಕಾರು ಚಾಲಕ ಆಗಿರುವ ರಮೇಶ್ ಗೌಡ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದು, 17 ಪುಟಗಳ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪ ಮಾಡಿದ್ದರು. [ರಮೇಶ್ ಗೌಡ ಬರೆದ ಡೆತ್ ನೋಟ್ ನಲ್ಲಿ ಏನಿದೆ?]

KAS officer Bheema Naik arrested in money laundering case

ಡಿಸೆಂಬರ್ 6 ರಿಂದ ಭೀಮಾನಾಯಕ್ ನಾಪತ್ತೆಯಾಗಿದ್ದರು. ಜನಾರ್ದನ ರೆಡ್ಡಿಯ ಸುಮಾರು 100 ಕೋಟಿ ರೂಪಾಯಿಯಷ್ಟು ಕಪ್ಪು ಹಣವನ್ನು ಭೀಮಾ ನಾಯ್ಕ್ ಅವರು ಶೇ.20ರಷ್ಟು ಕಮಿಷನ್ ಪಡೆದು ವೈಟ್ ಆಗಿ ಮಾಡಿಕೊಟ್ಟಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದರು. ಆ ಬಳಿಕ ಭೀಮಾ ನಾಯ್ಕ ತಲೆ ಮರೆಸಿಕೊಂಡಿದ್ದರು. ['ಇಲ್ಲಿ ನೂರು ಕೋಟಿ, ಅಲ್ಲಿನ 70 ಕೋಟಿ ಜನಾ ರೆಡ್ಡಿಯದೇ'

English summary
KAS officer Bheema Naik was arrested on Sunday at Kalaburagi, days after his driver committed suicide. In his letter, the driver had claimed that the officer had laundered states mining giant and ex-BJP leader Janardhana Reddy’s black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X