ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ : ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ವಂಚಿಸಿದ ಕಂಪನಿ

By ದೇವರಾಜ್ ನಾಯಕ್
|
Google Oneindia Kannada News

ಕಾರವಾರ, ಸೆಪ್ಟೆಂಬರ್ 24 : ಉದ್ಯೋಗ ಮೇಳದ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣ ಕಾರವಾರಲ್ಲಿ ಬೆಳಕಿಗೆ ಬಂದಿದೆ. ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ 2016ರಲ್ಲಿ ನಡೆದಿದ್ದ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ ಸಂದರ್ಶನ ನಡೆಸಿದ ಕಂಪನಿ ಅಭ್ಯರ್ಥಿಗಳಿಗೆ ಕೆಲಸ ಕೊಟ್ಟಿಲ್ಲ. ಆದರೆ, ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದೆ.

ಉತ್ತರ ಕನ್ನಡ ಜಿಲ್ಲಾಡಳಿತವು ನವೆಂಬರ್ 12 ಮತ್ತು 13 ರಂದು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು.

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

jobs

ಜಿಲ್ಲೆಯಿಂದ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ, ಸಂದರ್ಶನ ನೀಡಿದ್ದರು. ಅದರಲ್ಲಿ, ಕೆಲವು ಕಂಪೆನಿಗಳು ಮೊದಲು ತರಬೇತಿ ನೀಡಿ ಬಳಿಕ ನೇಮಕಾರಿ ಮಾಡಿಕೊಳ್ಳುವ ಭರವಸೆಯನ್ನು ನೀಡಿದ್ದವು.

ಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೆರಿಡಿಯನ್ ಕಂಪೆನಿ : ಬೆಳಗಾವಿಯ ಮೆರಿಡಿಯನ್ ಅಕಾಡೆಮಿ ಆಫ್ ಕಮರ್ಷಿಯಲ್ ಶಿಪ್ಪಿಂಗ್ ಎಂಡ್ ಲಾಜಿಸ್ಟಿಕ್ ಎಂಬ ಕಂಪೆನಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿತ್ತು. ಈಗ ಕಂಪನಿ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಸತಾಯಿಸುತ್ತಿರುವ ಬಗ್ಗೆ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಉದ್ಯೋಗ ಮೇಳದಲ್ಲಿ ಸಂದರ್ಶನ ಎದುರಿಸಿದ ಕಾರವಾರ, ಅಂಕೋಲಾ, ಶಿರಸಿ, ಕುಮಟಾ, ಭಟ್ಕಳ, ಯಲ್ಲಾಪುರ ಹಾಗೂ ಹುಬ್ಬಳ್ಳಿಯ ಸುಮಾರು 25 ಅಭ್ಯರ್ಥಿಗಳನ್ನು ಕಂಪೆನಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇವರಿಗೆ ಉದ್ಯೋಗ ನೀಡದೆ ಕಂಪನಿ ವಂಚನೆ ಮಾಡಿದೆ.

ಬೆಂಗಳೂರು: ಅಕ್ಟೋಬರ್‌ನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ಕೌಶಲ್ಯ ಶಿಬಿರಬೆಂಗಳೂರು: ಅಕ್ಟೋಬರ್‌ನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ಕೌಶಲ್ಯ ಶಿಬಿರ

15 ಸಾವಿರ ಹಿಂತಿರುಗಿಸಲು ವಿಳಂಬ : 15 ದಿನ ತರಬೇತಿ ನೀಡಿದ ಬಳಿಕ ಉದ್ಯೋಗ ನೀಡುವುದಾಗಿ ತಿಳಿಸಿದ್ದ ಕಂಪನಿ ಆಯ್ಕೆಯಾದ ಪ್ರತಿಯೊಬ್ಬರಿಂದ 15 ಸಾವಿರ ಕಟ್ಟಿಸಿಕೊಂಡಿದೆ. ಆದರೆ, ಇದೀಗ ಒಂದು ವರ್ಷ ಕಳೆದರು ಉದ್ಯೋಗವನ್ನೂ ನೀಡದೆ, ಹಣವನ್ನೂ ಮರಳಿಸದೆ ಕಂಪನಿ ಸತಾಯಿಸುತ್ತಿದೆ.

ಅಧಿಕೃತ ಮೊಹರಿಲ್ಲದ ಪ್ರಮಾಣ ಪತ್ರ : ಬೆಳಗಾವಿಯಲ್ಲಿ 15 ದಿನ ತರಬೇತಿ ನೀಡಿದ ಕಂಪೆನಿ ಈವರೆಗೂ ಉದ್ಯೋಗ ನೀಡಿಲ್ಲ. ಈ ಬಗ್ಗೆ ಕಂಪೆನಿಯವರನ್ನು ಕೇಳಿದರೆ ನಾವು ಉದ್ಯೋಗ ಈಗ ಕೊಡಲು ಆಗುವುದಿಲ್ಲ. ನಿಮ್ಮ ಹಣವನ್ನು ವಾಪಸ್ಸು ಮಾಡುವುದಿಲ್ಲ ಎನ್ನುತ್ತಾರೆ.

'ಅಲ್ಲದೆ ಫೋನ್ ಮಾಡಿದಾಗಲೆಲ್ಲ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ವರ್ಷದ ಹಿಂದೆ ತರಬೇತಿ ಪಡೆದ ಪ್ರಮಾಣ ಪತ್ರವನ್ನು ವಾರದ ಹಿಂದೆ ಕಳುಹಿಸಿದ್ದು, ಅದರಲ್ಲಿ ಕೂಡ ಯಾವುದೇ ಅಧಿಕೃತವಾದ ಮೊಹರು ಇಲ್ಲ. ಇದೀಗ ನಮಗೆ ಬೇರೆ ಕಡೆ ಉದ್ಯೋಗಕ್ಕೆ ತೆರಳುವುದು ಕಷ್ಟವಾಗಿದೆ' ಎನ್ನುತ್ತಾರೆ ತರಬೇತಿ ಪಡೆದ ಕಾರವಾರದ ವಿಶಾಲ್.

ಈ ಅನ್ಯಾಯದ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬೆಳಗಾವಿಯಲ್ಲಿ ಕಂಪೆನಿ ಇರುವುದರಿಂದ ಅಲ್ಲಿಗೆ ತೆರಳಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಆದರೆ, ಉದ್ಯೋಗ ಮೇಳ ನಡೆದಿರುವುದು ಕಾರವಾರದಲ್ಲಿ ಆದ್ದರಿಂದ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಸ್ಪಂದನೆ : 'ಉದ್ಯೋಗ ಮೇಳದಲ್ಲಿ ಸಂದರ್ಶಿಸಿದ ಕಂಪೆನಿ ಉದ್ಯೋಗ ನೀಡದಿರುವ ಬಗ್ಗೆ ದೂರು ಬಂದಿದ್ದು, ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ' ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

English summary
In Karwar a company cheated job aspirants by conducting job fair. Company conducted interview in 2016 at Karwar Medical Science College. But not appointed any person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X