ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಕರ್ನಾಟಕ ಲೋಕಸಭೆ ಚುನಾವಣೆಗೆ ಇಂದು ನಡೆದ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, 14 ಕ್ಷೇತ್ರಗಳಲ್ಲಿ 67.21% ಮತದಾನವಾಗಿದೆ.

ವಿಶೇಷ ಪುಟ

ಐದು ಗಂಟೆ ವೇಳೆಗೆ 59.29% ಆಗಿದ್ದ ಕೊನೆಯ ಒಂದು ಗಂಟೆಯಲ್ಲಿ ಬಿರುಸು ಪಡೆದುಕೊಂಡ ಕಾರಣ ಒಟ್ಟಾರೆ ಮತದಾನ ಶೇಕಡಾವಾರು ಹೆಚ್ಚಾಗಿ 67.21% ಆಗಿದೆ. ಮೊದಲ ಹಂತದ ಮತದಾನದಲ್ಲಿ 68.80% ಮತದಾನವಾಗಿತ್ತು. ರಾಜ್ಯದ ಒಟ್ಟು ಮತದಾನ ಪ್ರಮಾಣ 68% ಆಗಿದೆ.

ಸಂಜೆ ಐದು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?ಸಂಜೆ ಐದು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಇಂದು ಮತದಾನವಾಗುತ್ತಿರುವ 14 ಕ್ಷೇತ್ರಗಳ ಪೈಕಿ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಮತದಾನದ ಅಂತ್ಯಕ್ಕೆ 76.26% ಮತದಾನವಾಗಿದೆ. ಚಿಕ್ಕೋಡಿಯಲ್ಲೂ ಉತ್ತಮವಾಗಿ ಮತದಾನವಾಗಿದ್ದು ಅಲ್ಲಿ 74.09% ಮತದಾನವಾಗಿದೆ.

karnatakas second poling lok sabha constituencie voting percentage

ಬೀದರ್‌ನಲ್ಲಿ ಶೇ 62.00% ಮತದಾನವಾಗಿದೆ. ಕೊಪ್ಪಳದಲ್ಲಿ 68.43%, ಬಳ್ಳಾರಿಯಲ್ಲಿ 66.07%, ಹಾವೇರಿಯಲ್ಲಿ 71.23%, ಧಾರವಾಡದಲ್ಲಿ 70.04% ಮತದಾನವಾಗಿದೆ, ದಾವಣಗೆರೆಯಲ್ಲಿ 72.57% ಮತದಾನವಾಗಿದೆ. ಉತ್ತರ ಕನ್ನಡದಲ್ಲಿ 74.57% ಮತದಾನವಾಗಿದೆ.

ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಬೆಳಗಾವಿಯಲ್ಲಿ 66.59%, ಚಿಕ್ಕೋಡಿ 74.09%, ಬಾಗಲಕೋಟೆಯಲ್ಲಿ 69.40%, ಕಲಬುರಗಿಯಲ್ಲಿ 57.63% , ವಿಜಯಪುರ 60.28% ಮತದಾನವಾಗಿದೆ ಮತ್ತು ಈ ವರೆಗೆ ಅತ್ಯಂತ ಕಡಿಮೆ ಮತದಾನವಾಗಿರುವುದು ರಾಯಚೂರಿನಲ್ಲಿ, ಅಲ್ಲಿ ಕೇವಲ 57.85% ಮಾತ್ರವೇ ಮತದಾನವಾಗಿದೆ.

English summary
Karnataka second poling of lok sabha elections 2019 ends today. Karnataka mark 64.14% overall voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X