ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಕ್ಕಟ್ಟು: ಕರ್ನಾಟಕದ 300 ಪ್ರಿ ಸ್ಕೂಲ್‌ಗಳಿಗೆ ಬೀಗ ಬೀಳುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮೇ 28: ಕೊರೊನಾವೈರಸ್ ಭಯದಿಂದಾಗಿ ರಾಜ್ಯದಲ್ಲಿ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವ ಕಾರಣ 300ಕ್ಕೂ ಅಧಿಕ ಪ್ರಿ ಸ್ಕೂಲ್‌ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

300ಕ್ಕೂ ಹೆಚ್ಚು ಶಾಲೆಗಳನ್ನು ಮಾರಾಟ ಮಾಡುವ ಸ್ಥಿತಿಗೆ ಆಡಳಿತ ಮಂಡಳಿ ಬಂದಿದೆ. ಸರ್ಕಾರದ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲು ಯಾವಾಗ ಅನುಮತಿ ನೀಡಲಿದೆ ಎಂಬುದೇ ತಿಳಿದಿಲ್ಲ.

'ಕೊರೊನಾ ನಡುವೆ ಕಲಿಕೆ': ಶಾಲಾ ಆರಂಭದ ಬಗ್ಗೆ ಸುರೇಶ್ ಕುಮಾರ್ ಮಾಹಿತಿ'ಕೊರೊನಾ ನಡುವೆ ಕಲಿಕೆ': ಶಾಲಾ ಆರಂಭದ ಬಗ್ಗೆ ಸುರೇಶ್ ಕುಮಾರ್ ಮಾಹಿತಿ

ಅಲ್ಲಿಯವರೆಗೆ ಶಾಲಾ ಕಟ್ಟಡದ ಬಾಡಿಗೆ, ಸಿಬ್ಬಂದಿ ವೇತನ, ನಿರ್ವಹಣೆ,ಬ್ಯಾಂಕ್ ಸಾಲ, ಬಡ್ಡಿ ಪಾವತಿಸುವುದು ಕಷ್ಟವಾಗುವ ಕಾರಣ ಆಡಳಿತ ಮಂಡಳಿ ಶಾಲೆಗಳನ್ನು ಮಾರಾಟ ಮಾಡಲು ಮುಂದಾಗಿದೆ.

Karnatakas 300 Pre Schools Worry They May Never Reopen

ಡೇ-ಕೇರ್, ಪ್ಲೇ ಹೋಂ ನಡೆಸುತ್ತಿರುವ ಸಾವಿರಾರು ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡಲು ಮೇ ಮುಗಿಯುತ್ತಾ ಬಂದರೂ ಪಾಲಕರು ಮುಂದೆ ಬರುತ್ತಿಲ್ಲ. ಒಂದು ವೇಳೆ ಮಕ್ಕಳನ್ನು ಸೇರ್ಪಡೆ ಮಾಡಿದರೂ ಪುಟ್ಟ ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಮುಂತಾದ ಸುರಕ್ಷತಾ ಕ್ರಮ ಕೈಗೊಳ್ಳುವುದು ಸುಲಭದ ಮಾತಾಗಿಲ್ಲ.

ಬೆಂಗಳೂರು ನಗರದಲ್ಲೇ ಸುಮಾರು 35 ಸಾವಿರಕ್ಕೂ ಹೆಚ್ಚಿನ ನರ್ಸರಿ, ಡೇ ಕೇರ್, ಪ್ಲೇ ಹೋಂಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಿವೆ. ಬಹುತೇಕ ಶಾಲೆಗಳು ಕೊರೊನಾ ಸೋಂಕು ಹರಡುತ್ತಿರುವ ಪರಿಣಾಮ ಬಂದ್ ಮಾಡಿರುವುದರಿಂದ ನಷ್ಟ ಅನುಭವಿಸಿವೆ.

ಕಳೆದ ಮಾರ್ಚ್‌ನಿಂದ ಬೇಸಿಗೆ ಶಿಬಿರಗಳು, ಡೇ ಕೇರ್ ತರಗತಿಗಳು ಸೇರಿದಂತೆ ಯಾವುದೇ ರೀತಿಯಲ್ಲಿ ಶಾಲೆಗಳನ್ನು ನಡೆಸಲು ಸಾಧ್ಯವಾಗಿಲ್ಲ.

English summary
Coronavirus Effect Karnataka's 300 Pre Schools Worry They May Never Reopen. They don't have Money To Give salary of the teachers, They are suffering from Loan Crisis Also so Administration decided to sell their schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X