ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಶಾಕ್ ನೀಡಿದ ಎಂಸಿಐ:1,200 ಮೆಡಿಕಲ್ ಸೀಟ್ ಖೋತಾ

By Nayana
|
Google Oneindia Kannada News

ಬೆಂಗಳೂರು, ಜೂನ್ 7: ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ನೀಡದಿರುವುದರಿಂದ ಈ ಶೈಕ್ಷಿಣಿಕ ವರ್ಷದಲ್ಲಿ ರಾಜ್ಯಕ್ಕೆ 1200 ಪದವಿ ಕೋರ್ಸ್ ವೈದ್ಯ ಸೀಟು ಕೈತಪ್ಪುವ ಸಾಧ್ಯತೆ ಇದೆ. ಇದು ವೈದ್ಯ ಕೋರ್ಸ್ ಪ್ರವೇಶ ನಿರೀಕ್ಷೆಯಲ್ಲಿರುವವರಿಗೆ ಆತಂಕ ಉಂಟುಮಾಡಿದೆ.

ರಾಜ್ಯದಲ್ಲಿ ಒಟ್ಟು 8 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಂಡಳಿ ಮಾನ್ಯತೆ ನೀಡಿಲ್ಲ, ಇನ್ನೂ ಎಂಟು ಹಳೆಯ ಕಾಲೇಜುಗಳಿಗೆ ಮಾನ್ಯತೆ ನವೀಕರಿಸಿಲ್ಲ, ಈ ಕಾರಣದಿಂದ ಇಷ್ಟು ಸೀಟುಗಳು ಕೈತಪ್ಪಲಿವೆ ಎಂದು ಎಂಸಿಐ ಮೂಲಗಳ ಪ್ರಕಾರ ತಿಳಿದುಬಂದಿದೆ.

ದಾಖಲಾತಿ ಕಡಿಮೆ ಆದರೆ ಶಿಕ್ಷಕರಿಗೆ ಶಿಕ್ಷೆ: ಶಿಕ್ಷಣ ಇಲಾಖೆ ಎಚ್ಚರಿಕೆದಾಖಲಾತಿ ಕಡಿಮೆ ಆದರೆ ಶಿಕ್ಷಕರಿಗೆ ಶಿಕ್ಷೆ: ಶಿಕ್ಷಣ ಇಲಾಖೆ ಎಚ್ಚರಿಕೆ

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ ಮಂಡಳಿ ಮಾನ್ಯತೆ ನವೀಕರಿಸಿಲ್ಲ, ಮೂಲ ಸೌಕರ್ಯಗಳ ಕೊರತೆ ಹಾಗೂ ಪ್ರಾಧ್ಯಾಪಕರ ನೇಮಕ ವಿಳಂಬದಿಂದ ಈ ಸಂಸ್ಥೆಗೆ ಮಾನ್ಯತೆ ಸಿಗದಿರಲು ಕಾರಣ ಎಂದು ಮೂಲಗಳು ತಿಳಿಸಿವೆ.

Karnataka will miss 1,200 medical seats this year

ಈ ನಡುವೆ ಚಿಕ್ಕಮಗಳೂರು ವೈದ್ಯ ಕಾಲೇಜು, ಬಾಗಲಕೋಟೆ, ಚಿತ್ರದುರ್ಗ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯ ಕಾಲೇಜಿಗೆ ಮಾನ್ಯತೆ ನೀಡಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅನುಮತಿ ಸಿಕ್ಕಿಲ್ಲ.

ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಸರ್ಕಾರಿ ವೈದ್ಯ ಕಾಳೇಜುಗಳಾಗಿದ್ದು ಈ ಕಾಲೇಜುಗಳಲ್ಲಿ ತಲಾ 150 ಸೀಟುಗಳು ಲಭ್ಯವಾಗಲಿವೆ ಎಂದಬ ನಿರೀಕ್ಷೆ ಇತ್ತು. ಖಾಸಗಿ ಸೇರಿ ಈ ವರ್ಷ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡದ ಎಂಸಿಐನ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೆಟ್ಟಿಲೇರುವುದಾಗಿ ಸರ್ಕಾರ ತಿಳಿಸಿದೆ.

ಭಾರತೀಯ ವೈದ್ಯಕೀಯ ಮಂಡಳಿ ಮೊದಲೇ ಎಚ್ಚರಿಸಿದ್ದರೂಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಕ್ರಮಕ್ಕೆ ಸರ್ಕಾರ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

English summary
As Medical Council of India has not been given recognition for new eight medical colleges and not been renewed recognition of eight old colleges, the state will miss around 1200 medical seats in this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X