ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಮಾದರಿಯಲ್ಲಿ ರಾಜ್ಯ ರೈತರ ಸಾಲಮನ್ನಾ, ಕರಡು ಪ್ರತಿ ಸಿದ್ಧ: ಮೊಯಿಲಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 21: ಕರ್ನಾಟಕದಲ್ಲಿ, ಪಂಜಾಬ್‌ ರಾಜ್ಯದ ಮಾದರಿಯಲ್ಲಿ ಸಾಲಮನ್ನಾ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದು, ಕರಡು ಪ್ರತಿ ಸಿದ್ಧವಾಗಿದೆ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದ್ದಾರೆ.

ನಿನ್ನೆ ರಾತ್ರಿ ಒಂದುವರೆಗಂಟೆಗಳ ಸುಧೀರ್ಘ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಸಾಲಮನ್ನಾ ಯಶಸ್ವಿಯಾಗಿದೆ ಇಲ್ಲಿಯೂ ಅದೇ ರೀತಿಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದರು.

ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ

ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಯ ಪ್ರಥಮ ಕರಡು ಪ್ರತಿ ಸಹ ಸಿದ್ಧವಾಗಿದ್ದು ಬಜೆಟ್‌ನಲ್ಲಿ ಘೋಷಣೆಗಳು ಹೊರಬೀಳಲಿವೆ ಎಂಬ ಸುಳಿವನ್ನು ವೀರಪ್ಪ ಮೋಯ್ಲಿ ನೀಡಿದರು.

Karnataka will follow Punjab government way in farmer loan waive off

ಮೊದಲ ಹಂತದಲ್ಲಿ ಸಹಕಾರಿ ವಲಯದಲ್ಲಿ ರೈತರು ಮಾಡಿರುವ 9 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಇದರಿಂದ 40 ಲಕ್ಷ ರೈತರು ಅನುಕೂಲ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಸಾಲ ಮನ್ನಾ ಮಾಡಲು ಸಂಪೂರ್ಣ ಬದ್ಧ: ಕುಮಾರಸ್ವಾಮಿ ಪುನರುಚ್ಚಾರಸಾಲ ಮನ್ನಾ ಮಾಡಲು ಸಂಪೂರ್ಣ ಬದ್ಧ: ಕುಮಾರಸ್ವಾಮಿ ಪುನರುಚ್ಚಾರ

ಹಿರಿಯ ನಾಗರೀಕರಿಗೆ 6 ಸಾವಿರ ಮಾಸಾಶನ ನೀಡುವ ಬಗ್ಗೆ ಜೆಡಿಎಸ್ ನಾಯಕರು ಪ್ರಸ್ತಾಪ ಮಾಡಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೊಯ್ಲಿ ಮಾಹಿತಿ ನೀಡಿದರು.

English summary
Karnataka government planing to fallow Punjab government way in waive off farmers loan says MP Veerappa Moily. He said draft counter of loan waive off is almost ready.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X