ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹವಾಮಾನ ವರದಿ: ಮಲೆನಾಡಿನಲ್ಲಿ ಉತ್ತಮ ಮಳೆ

|
Google Oneindia Kannada News

ಬೆಂಗಳೂರು, ಜುಲೈ 6: ರಾಜ್ಯದ ಹಲವೆಡೆ ಮುಂಗಾರು ಚುರುಕಾಗಿದ್ದು, ಮಲೆನಾಡಿನ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ , ಕೊಪ್ಪ, ಎನ್‌ಆರ್ ಪುರ, ಕಳಸ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಚಾರ್ಮಾಡಿ ಘಾಟ್ ಮಾರ್ಗ, ಗಿರಿಶ್ರೇಣಿ, ಇತರೆಡೆ ಜಲಪಾತ, ಹಳ್ಳಕೊಳ್ಳಗಳು ಮೈದುಂಬಿವೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಬಂಟ್ವಾಳ, ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ. ಕಾಪು ತಾಲೂಕಿನಲ್ಲಿ ಕಡಲ್ಕೊರೆತ ಆರಂಭವಾಗಿದೆ. ಗಾಳಿ-ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹಾಗೆಯೇ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ತೆಂಕ, ಎರ್ಮಾಳು, ನಡಿಪಟ್ಣ, ಪಡುಬಿದಿರೆಯಲ್ಲಿ ಕಡಲ್ಕೊರೆತ ಉಂಟಾಗಿದೆ.

ಹವಾಮಾನ ವರದಿಯ ಪ್ರಕಾರ ಈವರೆಗೆ ಹಲವಾರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿಲ್ಲ. ಮುಂಗಾರು ಮಳೆ ಈ ವರ್ಷ ಕೈಕೊಟ್ಟಿದೆ. ಆದರೆ, ಮುಂಗಾರು ಕೈಕೊಟ್ಟರೂ ಸಹ ಹಿಂಗಾರು ರೈತರ ಕೈಹಿಡಿಯುವ ನಿರೀಕ್ಷೆ ಇದೆ.

ಜುಲೈ 5ರವರೆಗೆ ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆಜುಲೈ 5ರವರೆಗೆ ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆ

ಒಂದು ಈ ವರ್ಷ ಹಿಂಗಾರು ಮಾರುತಗಳೂ ಸಹ ರಾಜ್ಯದಲ್ಲಿ ಉತ್ತಮ ಮಳೆ ಸುರಿಸದಿದ್ದರೆ, ಪರಿಸ್ಥಿತಿ ಕೈಮೀರಲಿದೆ. ಹಲವಾರು ತಾಲೂಕುಗಳು ಬರ ಪೀಡಿತವಾಗಲಿವೆ ಎನ್ನಲಾಗುತ್ತಿದೆ.

ಎಲ್ಲೆಲ್ಲಿ ಸಾಧಾರಣ ಮಳೆ

ಎಲ್ಲೆಲ್ಲಿ ಸಾಧಾರಣ ಮಳೆ

ದಾವಣಗೆರೆ ನಗರ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ, ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಸುಂಟಿಕೊಪ್ಪದಲ್ಲಿ ಧಾರಾಕಾರ ಮಳೆಯಾಗಿದೆ. ಹಾಸನ ನಗರದ ಸುತ್ತಮುತ್ತ, ಸಕಲೇಶಪುರದಲ್ಲಿ ತುಂತುರು ಮಳೆ ಬಿದ್ದಿದೆ.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಕಮಲಾಪುರ ಮತ್ತು ಚಿತ್ತಾಪುರ ತಾಲೂಕಿನ ಕೆಲವೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ಬೆಳಗ್ಗೆ ಸಾಧಾರಣ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ

ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ

ದಕ್ಷಿಣ ಒಳನಾಡು ಪ್ರದೇಶಗಳಾದ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಈವೇಳೆಗಾಗಲೇ ಸರಾಸರಿಯಾಗಿ ಕನಿಷ್ಟ 80 ಮಿಮೀ ನಿಂದ ಗರಿಷ್ಠ 132 ಮಿ.ಮೀ ವರೆಗೆ ಮಳೆ ಆಗಬೇಕಿತ್ತು. ಆದರೆ, ಈ ಜಿಲ್ಲೆಗಳ ಪೈಕಿ ಈವರೆಗೆ ಬೆಂಗಳೂರು ನಗರ ಭಾಗದಲ್ಲಿ ದಾಖಲಾಗಿರುವ 132 ಮಿ.ಮೀ ಅತ್ಯಧಿಕ ಮಳೆಯಾಗಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಶೇ.40 ರಿಂದ ಶೇ.50 ರಷ್ಟು ಮಳೆ ಕಡಿಮೆಯಾಗಿದೆ.

ಉತ್ತರ ಒಳನಾಡಿನಲ್ಲಿ ಎಷ್ಟು ಮಳೆಯಾಗಿದೆ?

ಉತ್ತರ ಒಳನಾಡಿನಲ್ಲಿ ಎಷ್ಟು ಮಳೆಯಾಗಿದೆ?

ಉತ್ತರ ಒಳನಾಡು ಭಾಗಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ಈ ವೇಳೆಗೆ ಕನಿಷ್ಟ ಶೇ.75 ಮಿಮೀ ನಿಂದ ಗರಿಷ್ಟ ಶೇ.146 ಮಿ.ಮೀ ಇಲ್ಲಿನ ಸರಾಸರಿ ಮಳೆಯ ಪ್ರಮಾಣ. ಆದರೆ, ಕಲಬುರ್ಗಿಯಲ್ಲಿ 139 ಮಿಮೀ, ಯಾದಗಿರಿಯಲ್ಲಿ 143 ಮಿಮೀ ಮಳೆಯಾದದ್ದು ಬಿಟ್ಟರೆ ಉಳಿದ ಜಿಲ್ಲೆಗಳು ತೀವ್ರ ಮಳೆಯ ಅಭಾವವನ್ನು ಎದುರಿಸುತ್ತಿವೆ. ಇನ್ನೂ ಬಳ್ಳಾರಿಯ ಹಲವಾರು ಭಾಗದಲ್ಲಿ ಮಳೆಯಾಗದೆ ಇರುವುದು ಬರದ ಮುನ್ಸೂಚನೆಯನ್ನು ನೀಡಿದೆ.
ಮುಂದಿನ 2 ದಿನ ಎಲ್ಲೆಲ್ಲಿ ಮಳೆ?

ಮುಂದಿನ 2 ದಿನ ಎಲ್ಲೆಲ್ಲಿ ಮಳೆ?

ಮುಂದಿನ ಎರಡು ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

English summary
Monsoon Is Prevalent in many parts of the Karnataka, with good rainfall in parts of Malenadu Region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X