ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮಾಯವಾದ ಮಳೆ, ಮತ್ತೆ ಒಣ ಹವೆ

By Madhusoodhan
|
Google Oneindia Kannada News

ಬೆಂಗಳೂರು, ಮೇ 23: ಮುಂಗಾರು ಪೂರ್ವ ಮಳೆ ಆರ್ಭಟ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಮತ್ತೆ ಬಿಸಿಲಿನ ತಾಪ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲೂ ವಾತಾವರಣ ಕಾವೇರಿದೆ.

ಅಬ್ಬರಿಸುವ ಸೂಚನೆ ನೀಡಿದ್ದ ರೋನು ಚಂಡಮಾರುತ ದಯರ್ಬಲಗೊಂಡಿದೆ. ದೇಶದ ಪೂರ್ವ ಕರಾವಳಿಯನ್ನು ಪ್ರವೇಶ ಮಾಡಿ ಆಂಧ್ರ ಪ್ರದೇಶ, ಒಡಿಶಾ, ಮತ್ತು ತೆಲಂಗಾಣದಲ್ಲಿ ಮಳೆ ಸುರಿಸಿತ್ತು.[ಮುಂಗಾರು ಪ್ರವೇಶ ಒಂದು ವಾರ ವಿಳಂಬ]

rain
Photo Credit:

ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗಲಿದ್ದು ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಈ ಬಾರಿ ಒಂದು ವಾರ ತಡವಾಗಿ ಕೇರಳಕ್ಕೆ ಪ್ರವೇಶ ಮಾಡಲಿದ್ದು ಮಳೆಗಾಲ ಜೂನ್ 15 ರ ನಂತರವಷ್ಟೇ ಆರಂಭವಾಗಲಿದೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]

ಕಲಬುರಗಿಯಲ್ಲಿ 41.2 ಡಿಗ್ರಿ ಉಷ್ಣತೆ ದಾಖಲಾಗಿತ್ತು. ಉಳಿದಂತೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡದ ಕೆಲ ಭಾಗದಲ್ಲಿ ತುಂತುರು ಮಳೆಯಾಗಿದೆ. ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದ್ದು ಮಳೆಯಾಗುವ ಸಂಭವವಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Karnataka Weather Report: Rainfall occurred at isolated places over Coastal Karnataka. Dry weather prevailed over Interior Karnataka. Maximum temperatures rose at most places being appreciably so at a few places over North Interior Karnataka and rose at a few places over Coastal Karnataka & South Interior Karnataka. Bengaluru city and neighborhood will had Partly cloudy sky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X