ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜಲಾಶಯಗಳ ಶನಿವಾರದ ನೀರಿನ ಮಟ್ಟ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09 : ರಾಜ್ಯದೆಲ್ಲೆಡೆ ಅತ್ಯುತ್ತಮವಾಗಿ ಮಳೆಯಾಗುತ್ತಿದ್ದು, ಕರ್ನಾಟಕದ ಬಹುತೇಕ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದು ತಲುಪಿವೆ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರಾದರೂ ಹಿಂಗಾರು ಮಳೆ ಕೊಂಚ ರೈತರಲ್ಲಿ ಸಂತಸ ತಂದಿದೆ.

ನಿರಂತರ ಮಳೆ, ಬಂಡೀಪುರ ಅರಣ್ಯದ ಕೆರೆಗಳಿಗೆ ಜೀವ ಕಳೆನಿರಂತರ ಮಳೆ, ಬಂಡೀಪುರ ಅರಣ್ಯದ ಕೆರೆಗಳಿಗೆ ಜೀವ ಕಳೆ

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜನರನ್ನು ಕಂಗೆಡಿಸಿದೆ. ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ ಸುರಿದ ಮಳೆ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಶಿವಾನಂದ ಸರ್ಕಲ್ ಬಳಿ ಯುವಕನೊಬ್ಬ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮಿನರ್ವ ಸರ್ಕಲ್ ಬಳಿ ಮರವೊಂದು ಕಾರೊಂದರ ಮೇಲೆ ಉರುಳಿಬಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Karnataka water level of rivers and rain details

ಇನ್ನು ಉತ್ತರ ಕರ್ನಾಟಕದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ, ವರದಾ ನದಿ ಸೇರಿದಂತೆ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ.

ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ! ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!

ಕೆಲ ಜಲಾಶಯಗಳ ಒಳ ಹರಿವು ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಲಬುರಗಿಯ ಬೆಣ್ಣೆತೋರ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಯಲ್ಲಿ ಅಲ್ಲಿನ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಇರುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕೆಳಗಿನಂತಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1,795.10
ಸುಪಾ 1849.92 1793.18
ವಾರಾಹಿ 1949.50 1923.82
ಹಾರಂಗಿ 2859.00 2857.10
ಹೇಮಾವತಿ 2922.00 2,890.75
ಕೆಆರ್‌ಎಸ್ 124.80 102.65
ಕಬಿನಿ 2284.00 2.278.45
ಭದ್ರಾ 2158.00 2134.33
ತುಂಗಭದ್ರಾ 1633.00 1624.89
ಘಟಪ್ರಭಾ 2175.00 2153.45
ಮಲಪ್ರಭಾ 2079.50 2054.90
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1614.84
English summary
Karnataka water level of dams and rain details, major reservoir level information, karnataks state natural disaster management centre,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X