ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಸ್ತಿ ಮದ್ಯ, ಕಮ್ಮಿ ಬೀರ್ ಹೀರಿ ಅಂತಾಯಿದೆ ಕರ್ನಾಟಕ!

By Madhusoodhan
|
Google Oneindia Kannada News

ಬೆಂಗಳೂರು, ಜೂನ್ , 22: "ಬೀರ್ ಕುಡಿಯುವುದನ್ನು ಕಡಿಮೆ ಮಾಡಿ, ಆ ಜಾಗದಲ್ಲಿ ಮದ್ಯವನ್ನೇ ಒಳಗೆ ಬಿಟ್ಟುಕೊಳ್ಳಿ" ಅರೇ ಇದೇನು ಕುಡುಕರಿಗೆ ಸಲಹೆ ನೀಡುತ್ತಿದ್ದಾರಲ್ಲಾ ಅಂಥ ತಲೆಕೆರೆದುಕೊಳ್ಳುವ ಅಗತ್ಯ ಇಲ್ಲ.

ಇದು ನಾವು ಕುಡುಕರಿಗೆ ಹೇಳುತ್ತಿರುವ ಮಾತಲ್ಲ. ಬದಲಾಗಿ ಕರ್ನಾಟಕ ಸರ್ಕಾರ, ಅಬಕಾರಿ ಇಲಾಖೆ ಹೇಳುತ್ತಿರುವ ಮಾತು. ನೀವು ಬೀರ್ ಕುಡಿಯವ ಮನಸ್ಸು ಮಾಡಿಕೊಂಡು ರೆಸ್ಟೋರೆಂಟ್ ತೆರಳಿದರೆ ವೇಟರ್ ಬಂದು ಸಾರ್ ಬೀರ್ ಖಾಲಿಯಾಗಿದೆ ಎಂದು ಹೇಳಿದರೂ ಆಶ್ಚರ್ಯವಿಲ್ಲ.[ಬಜೆಟ್ 2016 : ಕುಡುಕರ ಜೇಬಿಗೆ ಕತ್ತರಿ ಗ್ಯಾರಂಟಿ]

karnataka

ಅಬಕಾರಿ ಅಧಿಕಾರಿಗಳು ರೆಸ್ಟೋರೆಂಟ್ ಗಳಿಗೆ ಮತ್ತು ಮದ್ಯದ ಮಳಿಗೆಗಳಿಗೆ ನಮ್ಮ ದೇಶದಲ್ಲಿ ತಯಾರಾದ ವಿದೇಶಿ ಮದ್ಯ ಕುಡಿಸುವಂತೆ ಆದೇಶ ನೀಡಿದ್ದಾರೆ.

ಸರ್ಕಾರಕ್ಕೆ ಅಬಕಾರಿ ಸುಂಕ ಬಹುದೊಡ್ಡ ಆದಾಯ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. 2013-14ರಲ್ಲಿ ಶೇ. 15.89 ರಷ್ಟಿದ್ದ ಆದಾಯ 2014-15 ಕ್ಕೆ ಶೇ. 7.58 ಕ್ಕೆ ಇಳಿದಿದೆ. ಪರಿಣಾಮ ಸರ್ಕಾರಕ್ಕೆ ಬರುತ್ತಿರುವ ಆದಾಯವೂ ಕಡಿಮೆಯಾಗಿದೆ.[ಮಂಗಳೂರಲ್ಲಿ ಹಾಲು ಸಿಗದಿದ್ರು, ಆಲ್ಕೊಹಾಲ್ ಮಾತ್ರ ಪಕ್ಕಾ ಸಿಗುತ್ತೆ]

ಹೆಚ್ಚಿನ ಆದಾಯದ ಕಾರಣಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವೈನ್ ಫೆಡರೇಶನ್ ಸದಸ್ಯ ನಾಗೇಶ್ ಬಾಬು ಹೇಳುತ್ತಾರೆ.

ಕರ್ನಾಟಕ ರಾಜ್ಯ ಪಾನೀಯ ಮಂಡಳಿಯೂ ಈ ಬಗ್ಗೆ ಸಭೆ ನಡೆಸಿದೆ. ಅಬಕಾರಿ ಇಲಾಖೆ ಗುರಿ ಆದಾಯವನ್ನು ಹೆಚ್ಚು ಮಾಡುವುದೇ ಆಗಿದೆ. ಆರೋಗ್ಯದ ದೃಷ್ಟಿಯಲ್ಲಿ ಬೀರ್ ಗೆ ಹೋಲಿಕೆ ಮಾಡಿದರೆ ಉಳಿದ ಮದ್ಯ ಹಾನಿಕಾರಕ. ಆದಾಯದ ಲೆಕ್ಕದಲ್ಲಿ ಬೀರ್ ಗಿಂತ ಮದ್ಯ ಲಾಭದಾಯಕ. ಅಬಕಾರಿ ಇಲಾಖೆಗೆ ಬೇಕಿರುವುದು ಆದಾಯ![ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಇಲ್ಲ]

ಯುವಜನರ ಒಲವು ಬೀರ್ ಕಡೆ ಇದೆ. ಜನರು ಬೀರನ್ನು ಕೇಳುತ್ತಿದ್ದರೆ ಇಲಾಖೆ ಅಸದರ ಬದಲು ಮದ್ಯ ಹಂಚಿಕೆ ಮಾಡಲು ಆದೇಶ ನೀಡುತ್ತಿದೆ ಎಂದು ಬೆಂಗಳೂರು ಬ್ರಿಗೇಡ್ ರಸ್ತೆ ಬಾರ್ ಮಾಲೀಕರೊಬ್ಬರು ಹೇಳುತ್ತಾರೆ.

ಬೇಸಿಗೆಯಲ್ಲಿ ಜನರು ಬೀರ್ ಕಡೆ ವಾಲಿದ್ದರೆ ಉಳಿದ ಸಮಯ ಮದ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬೀರ್ ಕಂಪನಿಗಳು ವಿಶೇಷ ಕೊಡುಗೆಗಳನ್ನು ನೀಡುತ್ತಿವೆ. ಆದರೆ ನಾವು ಎರಡನ್ನು ಸಮತೋಲಿತವಾಗಿ ಮಾರಾಟ ಮಾಡಲು ಹೇಳಿದ್ದೇವೆ ಎಂದು ಅಬಕಾರಿ ಇಲಾಖೆ ಆಯುಕ್ತ ಎಸ್ ಆರ್ ಉಮಾಶಂಕರ್ ಹೇಳುತ್ತಾರೆ.

English summary
Duty on liquor is one of the biggest revenue-earners for the state government. IML sales registered a 15.89% increase in 2013-14 but dropped by 7.58% in 2014-15. As the expected revenues did not flow in, there is apparently "pressure from the government" to get excise licence holders to sell more IML.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X