ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹುಡುಕಲು ನೆರವಿಗೆ ಬಂತು ಪಶುಸಂಗೋಪನೆ ಇಲಾಖೆ

|
Google Oneindia Kannada News

ಬೀದರ್, ಮೇ 6: ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಪತಾಸಣೆ ಮಾಡುವ ದೃಷ್ಟಿಯಿಂದ ರಾಜ್ಯ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.

Recommended Video

BSY 1610 ಕೋಟಿ ಪ್ಯಾಕೇಜ್ ಘೋಷಣೆ , ಕೊರೊನ ಪರಿಹಾರದಲ್ಲಿ ರಾಜ್ಯವೇ ನಂಬರ್ ಒನ್ | Yediyurappa | Karnataka

ಇದೀಗ ಕೋವಿಡ್ ಪತ್ತೆ ಹಚ್ಚುವ ಕಾರ್ಯದಲ್ಲಿ ಆರೋಗ್ಯ ಇಲಾಖೆಗೆ ನೆರವಿನ ಹಸ್ತ ಚಾಚಲು ಪಶುಸಂಗೋಪನೆ ಇಲಾಖೆ ಮುಂದಾಗಿದೆ. ರಾಜ್ಯದ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿರುವ ಆರ್‌ಟಿ-ಪಿಸಿಆರ್ ಉಪಕರಣಗಳು (ವೈರಾಣು ಪರೀಕ್ಷಾ ಕಿಟ್) ಆರೋಗ್ಯ ಇಲಾಖೆಯ ಲ್ಯಾಬ್‌ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಆಸ್ಪತ್ರೆಯಿಂದ ಕೊರೊನಾ ರೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆ? ಆಸ್ಪತ್ರೆಯಿಂದ ಕೊರೊನಾ ರೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆ?

ಕೋವಿಡ್-19 ಪತ್ತೆ ಹಚ್ಚುವಲ್ಲಿ ಲ್ಯಾಬ್‌ಗಳ ಪಾತ್ರ ಪ್ರಮುಖವಾಗಿದ್ದು, ರಾಜ್ಯದ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿರುವ ಆರ್‌ಟಿ-ಪಿಸಿಆರ್ ಉಪಕರಣಗಳು (ವೈರಾಣು ಪರೀಕ್ಷಾ ಕಿಟ್) ಆರೋಗ್ಯ ಇಲಾಖೆಯ ಲ್ಯಾಬ್‌ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪಣೆ, ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಸರ್ಕಾರ ಆದೇಶ ಹೊರಡಿಸಿದೆ

ಸರ್ಕಾರ ಆದೇಶ ಹೊರಡಿಸಿದೆ

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಕೊವಿಡ್-19 ಸೊಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು ರೋಗ ಪತ್ತೆ ಹಚ್ಚುವಲ್ಲಿ ಬಳಸಲಾಗುವ ಆರ್.ಟಿ ಪಿಸಿಆರ್ ಉಪಕರಣಗಳು ಪಶುಸಂಗೋಪನೆ ಇಲಾಖೆಯ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಲ್ಯಾಬ್‌ಗಳಲ್ಲಿ ಲಭ್ಯವಿದ್ದು, ಈ ಉಪಕರಣಗಳನ್ನು ಸಹ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ ಈ ಉಪಕರಣಗಳನ್ನು ಕೊವಿಡ್-19 ಪತ್ತೆಗೆ ಬಳಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ ಎಂದಿದ್ದಾರೆ.

ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ

ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ

ಆರ್.ಟಿ ಪಿಸಿಆರ್ ಬಳಸಿಕೊಳ್ಳುವುದರಿಂದ ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ. ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್.ಟಿ ಪಿಸಿಆರ್ ಉಪಕರಣಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ

ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ

ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ , ಧಾರವಾಡದ ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಹಾಗೂ ಧಾರವಾಡದ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆಯ ಉಪಕರಣಗಳನ್ನು ಸಹ ಕೊವಿಡ್-19 ಪತ್ತೆಗೆ ಬಳಸಿಕೊಳ್ಳಲು ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ ಉಪಕರಣಗಳನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದ್ದಾರೆ.

10,000 ಟೆಸ್ಟಗಳನ್ನು ಮಾಡಬಹುದಾಗಿದೆ

10,000 ಟೆಸ್ಟಗಳನ್ನು ಮಾಡಬಹುದಾಗಿದೆ

ಕೊವಿಡ್-19ರ ಪರೀಕ್ಷೆ ಜೈವಿಕ ಸುರಕ್ಷತಾ ಮಟ್ಟ-2ರಲ್ಲಿ ಮಾಡಬೇಕಾಗಿರುವುದರಿಂದ ಸಾಕಷ್ಟು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸಧ್ಯ ಈ ಎಲ್ಲ ಉಪಕರಣಗಳನ್ನು ಬಳಸಿಕೊಂಡಿದ್ದಾದಲ್ಲಿ ಅಂದಾಜು ಸುಮಾರು 10,000 ಟೆಸ್ಟಗಳನ್ನು ಮಾಡಬಹುದಾಗಿದೆ. ಅಲ್ಲದೆ ಉಪಕರಣಗಳ ಮೇಲೆ ಕಾರ್ಯ ನಿರ್ವಹಿಸುವ ನುರಿತ ತಂತ್ರಜ್ಞರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

English summary
Karnataka Veterinary Department Helps For Covid19 Battle Karnataka helath department. Veterinary Department providing the RT-PCR Kits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X