ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈ

|
Google Oneindia Kannada News

ಬೆಂಗಳೂರು, ಮೇ 31: ಕರ್ನಾಟಕದ ಒಟ್ಟು 61 ಕನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು(ಮೇ 31) ಪ್ರಕಟವಾಗಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಪುರ ಸಭೆ ಮತ್ತು ನಗರಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಹೆಚ್ಚು ಸ್ಥಾನ ಗೆದ್ದಿದೆ.

ಒಟ್ಟು 1221 ವಾರ್ಡ್ ಗಳ ಪೈಕಿ 509 ರಲ್ಲಿ ಕಾಂಗ್ರೆಸ್, 366 ರಲ್ಲಿ ಬಿಜೆಪಿ, 174 ರಲ್ಲಿ ಜೆಡಿಎಸ್, 172 ರಲ್ಲಿ ಇತರರು ಜಯಗಳಿಸಿದ್ದಾರೆ.

63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ

ಪುರಸಭೆಯ 714 ವಾರ್ಡ್ ಗಳಲ್ಲಿ 184 ರಲ್ಲಿ ಬಿಜೆಪಿ, 322 ರಲ್ಲಿ ಕಾಂಗ್ರೆಸ್ ಮತ್ತು 102 ರಲ್ಲಿ ಜೆಡಿಎಸ್, 106 ರಲ್ಲಿ ಇತರರು ಗೆಲುವು ಸಾಧಿಸಿದ್ದಾರೆ.

ನಗರಸಭೆಯ 217 ವಾರ್ಡ್ ಗಳಲ್ಲಿ ಬಿಜೆಪಿ 56, ಕಾಂಗ್ರೆಸ್ 90, ಜೆಡಿಎಸ್ 38, ಇತರರು 33 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

Karnataka Urban Local bodies election result announces today

ಇನ್ನು ಪಟ್ಟಣ ಪಂಚಾಯಿತಿಯ 290 ವಾರ್ಡ್ ಗಳಲ್ಲಿ 126 ರಲ್ಲಿ ಬಿಜೆಪಿ, 94 ರಲ್ಲಿ ಕಾಂಗ್ರೆಸ್, 37 ರಲ್ಲಿ ಜೆಡಿಎಸ್ ಮತ್ತು ಇತರರು 33 ರಲ್ಲಿ ಗೆಲುವು ಸಾಧಿಸಿದ್ದಾರೆ.

8 ನಗರಸಭೆ, 32 ಪುರಸಭೆ ಮತ್ತು 21 ಪಟ್ಟಣ ಪಂಚಾಯಿತಿಗಳ ಒಟ್ಟು 1326 ವಾರ್ಡ್ ಗಳಲ್ಲಿ ಚುನಾವಣೆ ನಡೆದಿತ್ತು.

ಒಟ್ಟು 4360 ಮಂದಿ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ 1125 ಮಂದಿ ಕಣದಲ್ಲಿದ್ದಾರೆ. ಅದರಲ್ಲಿ ಈಗಾಗಲೇ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ 1125 ಮಂದಿ ಕಣದಲ್ಲಿದ್ದರೆ, ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ನಿಂದ 780 ಮಂದಿ ಕಣಕ್ಕಿಳಿದಿದ್ದರೆ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಎಸ್ಪಿಯಿಂದ 103 ಅಭ್ಯರ್ಥಿಗಳು ಕಣಕ್ಕಿಳಿಸಿದ್ದು, ಪಕ್ಷೇತರರಾಗಿ 1056 ಮಂದಿ ಕಣಕ್ಕಿಳಿದಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದ ಬೆಳವಣಿಗೆಗಳ ಅಪ್ಡೇಟ್ಸ್ ಇಲ್ಲಿದೆ...

* ತುಮಕೂರು ನಗರದ 22ನೇ ವಾರ್ಡ್ (ಬಟವಾಡಿ) ಉಪಚುನಾವಣೆಯಲ್ಲಿ‌ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸ ಮೂರ್ತಿಯವರು ಭರ್ಜರಿ ಗೆಲುವು

*ಬಳ್ಳಾರಿಯಲ್ಲಿ
ಕಮಲಾಪುರ ಪಟ್ಟಣ ಪಂಚಾಯಿತಿ : 20ವಾಡ್೯ ಕಾಂಗ್ರೆಸ್ -14 ಪಕ್ಷೇತರ -05 ಬಿಜೆಪಿ -1

ಹೂವಿನಹಡಗಲಿ ಪುರಸಭೆ- 23ವಾಡ್೯ ಕಾಂಗ್ರೆಸ್ - 14 ಬಿಜೆಪಿ - 09

ಸಂಡೂರು ಪುರಸಭೆ -23ವಾಡ್೯ ಕಾಂಗ್ರೆಸ್- 12 ಬಿಜೆಪಿ- 10 ಪಕ್ಷೇತರ- 1

* ಭಟ್ಕಳ ಪುರಸಭೆ ಪಕ್ಷೇತರರ ತೆಕ್ಕೆಗೆ
ಒಟ್ಟೂ 23 ವಾರ್ಡ್ ಗಳ ಪೈಕಿ- ಬಿಜೆಪಿ- 1 ಸ್ಥಾನ. ಕಾಂಗ್ರೆಸ್- 3 ಸ್ಥಾನ. ಪಕ್ಷೇತರರು- 19 ಸ್ಥಾನ.

* ಗದಗ
ಮುಂಡರಗಿ ಬಿಜೆಪಿ 12, ಕಾಂಗ್ರೆಸ 6, ಜೆಡಿಎಸ್ 1 ಪಕ್ಷೇತರ 4. ನರಗುಂದ ಬಿಜೆಪಿ 17, ಕಾಂಗ್ರೆಸ್ 6

* ಬೆಳಗಾವಿ
ಸದಲಹಾದಲ್ಲಿ ಕಾಂಗ್ರೆಸ್ ಮತ್ತು ಮುಗಳಖೋಡದಲ್ಲಿ ಬಿಜೆಪಿ ಗೆಲುವು

* ಹೊನ್ನಾವರ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
ಒಟ್ಟೂ ವಾರ್ಡ್‌ಗಳ ಸಂಖ್ಯೆ 20. * ಬಿಜೆಪಿ- 12 * ಕಾಂಗ್ರೆಸ್- 1 * ಜೆಡಿಎಸ್- 2 * ಪಕ್ಷೇತರರು- 5

* ಮಳವಳ್ಳಿ ಪುರಸಭೆಯ 23 ವಾರ್ಡ್ ಗಳಲ್ಲಿ 9 ಜೆಡಿಎಸ್, 5 ಕಾಂಗ್ರೆಸ್, 2 ರಲ್ಲಿ ಬಿಜೆಪಿ ಗೆದ್ದಿದ್ದು, 7 ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

*ಚಿಕ್ಕಮಗಳೂರು
ಮೂಡಿಗೆರೆ ಪಟ್ಟಣ ಪಂಚಾಯಿತಿ 11 ವಾರ್ಡ್

ಬಿಜೆಪಿ - 6, ಕಾಂಗ್ರೆಸ್ - 4, ಜೆಡಿಎಸ್ - 1

ಕೊಪ್ಪ ಪಟ್ಟಣ ಪಂಚಾಯಿತಿ 11

ಬಿಜೆಪಿ - 6, ಕಾಂಗ್ರೆಸ್ - 4, ಜೆಡಿಎಸ್ - 0, ಪಕ್ಷೇತರ - 1

ಎನ್.ಆರ್.ಪುರ ಪಟ್ಟಣ ಪಂಚಾಯಿತಿ 11

ಬಿಜೆಪಿ - 2, ಕಾಂಗ್ರೆಸ್ - 9

ಶೃಂಗೇರಿ ಪಟ್ಟಣ ಪಂಚಾಯಿತಿ 11

ಬಿಜೆಪಿ - 7, ಕಾಂಗ್ರೆಸ್ - 3, ಜೆಡಿಎಸ್ -0, ಪಕ್ಷೇತರ - 1

ಕಡೂರು ಪುರಸಭೆ 23

ಬಿಜೆಪಿ - 6, ಕಾಂಗ್ರೆಸ್ - 7, ಜೆಡಿಎಸ್ - 6, ಪಕ್ಷೇತರ - 4

ಕೆ ಆರ್ ಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 11, ಬಿಜೆಪಿ 1 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು

English summary
Karnataka Urban Local bodies election result announces today(May 31). The election was held on May 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X