ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಥಿಯೇಟರ್ ತೆರೆಯಿರಿ ಆದರೆ ನಿಯಮ ಮರೀಬೇಡಿ": ಕರ್ನಾಟಕದಲ್ಲಿ ಹೊಸ ಮಾರ್ಗಸೂಚಿ!

|
Google Oneindia Kannada News

ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಜನಜೀವನವನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅನ್​ಲಾಕ್ ಪ್ರಕ್ರಿಯನ್ನು ಶುರು ಮಾಡಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್‌ ನಿಮಯಗಳನ್ನು ಮತ್ತಷ್ಟು ಸಡಿಲಕೊಳಿಸಲಾಗಿದೆ. ರಾತ್ರಿ ನಿಷೇಧಾಜ್ಞೆ ಸಮಯವನ್ನು ವಿಸ್ತರಿಸುವುದು, ಸಿನಿಮಾ ಥಿಯೇಟರ್ ತೆರೆಯುವುದಕ್ಕೆ ಅನುಮತಿ ನೀಡುವುದು, ಪದವಿ ಕಾಲೇಜುಗಳ ಪುನಾರಂಭ ಸೇರಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಕರ್ನಾಟಕ ಲಾಕ್‌ಡೌನ್ ಸಡಿಲಿಕೆ 3.0: ಏನಿರುತ್ತೆ, ಏನಿರಲ್ಲ?ಕರ್ನಾಟಕ ಲಾಕ್‌ಡೌನ್ ಸಡಿಲಿಕೆ 3.0: ಏನಿರುತ್ತೆ, ಏನಿರಲ್ಲ?

ಬೆಂಗಳೂರಿನ ಸ್ವಗೃಹದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹತ್ವದ ಸಭೆ ನಡೆಸಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಸಚಿವ ಅರವಿಂದ್ ಲಿಂಬಾವಳಿ ಹಾಗೂ ಸಚಿವ ಆರ್ ಅಶೋಕ್ ಉಪಸ್ಥಿತರಿದ್ದರು. ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಪುನಾರಂಭ, ಚಿತ್ರಮಂದಿರಗಳಿಗೆ ಅವಕಾಶ ಹಾಗೂ ನಿಷೇಧಾಜ್ಞೆ ಸಮಯ ವಿಸ್ತರಣೆ ಸೇರಿದಂತೆ ಹಲವು ನಿಷಯಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕದಲ್ಲಿ ಮತ್ತೆ ಯಾವ ಯಾವ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬುದರ ಕುರಿತು ಮಾಹಿತಿಗಾಗಿ ಮುಂದೆ ಓದಿ.

ಬಿಎಸ್ ವೈ ಸರ್ಕಾರದಿಂದ ಅನ್​ಲಾಕ್ ಪ್ರಕ್ರಿಯೆ

ಬಿಎಸ್ ವೈ ಸರ್ಕಾರದಿಂದ ಅನ್​ಲಾಕ್ ಪ್ರಕ್ರಿಯೆ

* ರಾಜ್ಯದಲ್ಲಿ ರಾತ್ರಿ ನಿಷೇಧಾಜ್ಞೆ ಸಮಯ ವಿಸ್ತರಣೆ

* ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ನಿಷೇಧಾಜ್ಞೆ ಜಾರಿ

* ಸಿನಿಮಾ ಮತ್ತು ರಂಗ ಮಂದಿಗಳ ಪುನಾರಂಭಕ್ಕೆ ಅನುಮತಿ

* ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ

* ಜುಲೈ 26ರಿಂದ ಪದವಿ ಕಾಲೇಜುಗಳನ್ನು ತೆರೆಯಲು ಒಪ್ಪಿಗೆ

* ದೇವಸ್ಥಾನಗಳಲ್ಲಿ ಭಕ್ತರಿಂದ ಪೂಜೆ ಸಲ್ಲಿಸುವುದಕ್ಕೆ ಅನುಮತಿ. ಈ ಮೊದಲು ದರ್ಶನಕ್ಕೆ ಅಷ್ಟೇ ಅವಕಾಶ ನೀಡಲಾಗಿತ್ತು.

* ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕನಿಷ್ಠ 1 ಡೋಸ್ ಲಸಿಕೆ ಪಡೆದಿರಬೇಕು

* ಬಾರ್ ಗಳಲ್ಲಿ ಶೇ.50ರಷ್ಟು ಮಂದಿ ಕುಳಿತು ಮದ್ಯ ಸೇವಿಸಲು ಅವಕಾಶ

* ರಾತ್ರಿ 10 ಗಂಟೆವರೆಗೂ ಬಾರ್ ಗಳನ್ನು ತೆರೆಯುವುದಕ್ಕೆ ಸರ್ಕಾರದ ಅನುಮತಿ

ಕರ್ನಾಟಕದಲ್ಲಿ ಯಾವುದಕ್ಕೆಲ್ಲ ನಿರ್ಬಂಧ ಮುಂದುವರಿಕೆ

ಕರ್ನಾಟಕದಲ್ಲಿ ಯಾವುದಕ್ಕೆಲ್ಲ ನಿರ್ಬಂಧ ಮುಂದುವರಿಕೆ

* ಪಬ್ ಗಳಲ್ಲಿ ಮದ್ಯ ಸೇವೆ ಹಾಗೂ ಪಾರ್ಟಿಗಳನ್ನು ನಡೆಸಲು ಅವಕಾಶವಿಲ್ಲ

* ಒಳಾಂಗಣ ಚಿತ್ರೀಕರಣ ಹಾಗೂ ಕ್ರೀಡಾಂಗಣಗಳಿಗೆ ಅನುಮತಿ ನೀಡಿಲ್ಲ

* ಮದುವೆಗಳಲ್ಲಿ ಕೇವಲ 100 ಜನರು ಭಾಗವಹಿಸುವುದಕ್ಕೆ ಅವಕಾಶ

* ಅಂತ್ಯ ಸಂಸ್ಕಾರದಲ್ಲಿ 20 ಜನರು ಭಾಗವಹಿಸಲು ಅನುಮತಿ

ಕೊವಿಡ್-19 ನಿಯಮಗಳ ಪಾಲನೆಗೆ ಖಡಕ್ ಸೂಚನೆ

ಕೊವಿಡ್-19 ನಿಯಮಗಳ ಪಾಲನೆಗೆ ಖಡಕ್ ಸೂಚನೆ

* ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು

* ಅನಗತ್ಯ ಸಂಚಾರ

* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

* ಸ್ಯಾನಿಟೈಸರ್ ಬಳಸುವುದು

* ಕೊರೊನಾವೈರಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು

* ಕೊವಿಡ್-19 ಸೋಂಕು ಹರಡದಿರಲು ಸರ್ಕಾರ ಮೊದಲೇ ಹೊರಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು

Recommended Video

CD ಕೇಸ್ ಹಿಂದೆ DKS ಕೈವಾಡ ಇದೆ ಅನ್ನೋದಕ್ಕೆ ಇಷ್ಟು ಸಾಕಲ್ವಾ?? : Ramesh Jarkiholi | Oneindia Kannada
ಕರ್ನಾಟಕದಲ್ಲಿ ಹೇಗಿದೆ ಕೊರೊನಾವೈರಸ್ ಕಾರುಬಾರು?

ಕರ್ನಾಟಕದಲ್ಲಿ ಹೇಗಿದೆ ಕೊರೊನಾವೈರಸ್ ಕಾರುಬಾರು?

ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಕ್ರಮೇಣ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.30ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 2.24ರಷ್ಟಿದೆ. ಒಂದೇ ದಿನ 42 ಮಂದಿ ಕೊವಿಡ್-19 ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36121 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ದಿನದಲ್ಲಿ 1869 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3144 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,82,239ಕ್ಕೆ ಏರಿಕೆಯಾಗಿದೆ. ಈವರೆಗೂ 28,16,013 ಸೋಂಕಿತರು ಗುಣಮುಖರಾಗಿದ್ದು. 30,082 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Karnataka Unlock: Govt Allowed to Open Theater And Degree Colleges, Night Curfew Time Extend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X