ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ನಿಯಂತ್ರಣಕ್ಕೆ ಈ ನಿಯಮಗಳ ಪಾಲನೆ ಕಡ್ಡಾಯ

|
Google Oneindia Kannada News

ಬೆಂಗಳೂರು, ಜುಲೈ.30: ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಹೊಣೆಯನ್ನು ಕೇಂದ್ರ ಗೃಹ ಸಚಿವಾಲಯವು ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಕೊವಿಡ್-19 ಭೀತಿ ನಡುವೆ ಅನ್ ಲಾಕ್ 3.0 ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

Recommended Video

Hardik Pandya And Natasa Stankovic Blessed With A Baby Boy | Oneindia Kannada

ಜುಲೈ.31ರಂದು ಅನ್ ಲಾಕ್ 2.0 ಅವಧಿ ಅಂತ್ಯಗೊಳ್ಳುವ ಹಿನ್ನೆಲೆ ಹೊಸ ಮಾರ್ಗಸೂಚಿಯನ್ನು ರಿಲೀಸ್ ಮಾಡಲಾಗಿತ್ತು. ಆಗಸ್ಟ್.01ರಿಂದ ಆಗಸ್ಟ್.31ರವರೆಗೂ ಅನ್ ಲಾಕ್ 3.0 ಮಾರ್ಗಸೂಚಿಗಳು ಜಾರಿಯಲ್ಲಿ ಇರಲಿದ್ದು, ರಾಜ್ಯಗಳು ಸ್ಥಳೀಯ ಮಟ್ಟದಲ್ಲಿ ಯಾವುದಕ್ಕೆಲ್ಲ ಅನುಮತಿ ನೀಡಬೇಕು ಎನ್ನುವುದನ್ನು ಆಯಾ ಸರ್ಕಾರಗಳೇ ತೀರ್ಮಾನಿಸುವಂತೆ ಕೇಂದ್ರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಅನ್ ಲಾಕ್ 3.0: ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ?ಕರ್ನಾಟಕ ಅನ್ ಲಾಕ್ 3.0: ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ?

ದೇಶಾದ್ಯಂತ ಕೊರೊನಾವೈರಸ್ ಸೋಂಕು ನಿರ್ವಹಣೆಗೆ ಕೇಂದ್ರ ಸರ್ಕಾರವು ಈ ಹಿಂದೆಯೇ ಕೆಲವು ನಿರ್ದೇಶನಗಳನ್ನು ಹೊರಡಿಸಿದೆ. ಈ ನಿರ್ದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಸ್ಥಳೀಯ ಆಡಳಿತ ವರ್ಗದ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸೋಂಕಿನಿಂದ ಅಂತರ ಕಾಯ್ದುಕೊಳ್ಳಲು ಈ ಸೂಚನೆಗಳನ್ನು ಪಾಲಿಸುವುದು ಸಾರ್ವಜನಿಕರ ಹೊಣೆಯೂ ಆಗಿದೆ. ಕೊವಿಡ್-19 ಸೋಂಕಿನಿಂದ ದೂರವಿರಲು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

Karnataka Unlock-3.0: National Directives For Coronavirus Management


ಕೊವಿಡ್-19 ನಿಯಂತ್ರಣಕ್ಕೆ ರಾಷ್ಟ್ರೀಯ ನಿರ್ದೇಶನ:

1. ಸಾರ್ವಜನಿಕ ಪ್ರದೇಶ, ಕೆಲಸದ ಕಚೇರಿ ಮತ್ತು ಸಂಚಾರದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ಮಹಾನಗರ ಪಾಲಿಕೆ ವಲಯಗಳಲ್ಲಿ ತಲಾ 200 ನಗರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ.

2. ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

3. ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.

ಮದುವೆ ಸಮಾರಂಭ: ಗರಿಷ್ಠ 50 ಜನರಿಗೆ ಮಾತ್ರ ಅವಕಾಶ

ಅಂತ್ಯ ಸಂಸ್ಕಾರ: ಗರಿಷ್ಠ 20 ಮಂದಿಗೆ ಮಾತ್ರ ಅವಕಾಶ

4. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಸ್ಥಳೀಯ ಆಡಳಿತ ಮಂಡಳಿಯು ಕಾನೂನಿನ ಅಡಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ.

5. ಸಾರ್ವಜನಿಕವಾಗಿ ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿರ್ಬಂಧ.

6. ಸಾಧ್ಯವಾದಷ್ಟು ಮನೆಯಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸುವುದು( ವರ್ಕ್ ಫ್ರಾಮ್ ಹೋಮ್)

7. ಪ್ರತಿಯೊಂದು ಅಂಗಡಿ ಮತ್ತು ಕಚೇರಿಗಳ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಲ್ಪಿಸುವುದು.

English summary
Karnataka Unlock-3.0: National Directives For Coronavirus Management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X