ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ Trust vote : ಈ ಸ್ಪೀಕರ್ ಕೆಟ್ಟುಹೋಗಿದೆ!

|
Google Oneindia Kannada News

ಬೆಂಗಳೂರು, ಜುಲೈ 18 : ವಿಶ್ವಾಸಮತಯಾಚನೆ ಹೈಡ್ರಾಮಕ್ಕೆ ಕರ್ನಾಟಕ ವಿಧಾನಸಭೆ ಗುರುವಾರ ಸಾಕ್ಷಿಯಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಸದನ ನಡೆಸುತ್ತಿರುವ ರೀತಿಗೆ ಪ್ರತಿಪಕ್ಷ ಬಿಜೆಪಿ ಕೆಂಡಾಮಂಡಲವಾಗಿದೆ.

ಗುರುವಾರ ಬೆಳಗ್ಗೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಸಮತದ ಕುರಿತು ಚರ್ಚೆಗಳು ಸಾಗಿವೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರು ಚರ್ಚೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಪ್ರತಿಪಕ್ಷದ ಆರೋಪ.

#StepDownCM ಕರ್ನಾಟಕ ಬಿಜೆಪಿಯಿಂದ ಟ್ವೀಟ್ ಅಭಿಯಾನ#StepDownCM ಕರ್ನಾಟಕ ಬಿಜೆಪಿಯಿಂದ ಟ್ವೀಟ್ ಅಭಿಯಾನ

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಕೆ. ಎಸ್. ಈಶ್ವರಪ್ಪ, 'ಈ ಸ್ಪೀಕರ್ ಕೆಟ್ಟುಹೋಗಿದೆ...' ಎಂದು ಟ್ವೀಟ್‌ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಹೆಸರು ಉಲ್ಲೇಖ ಮಾಡದೆ ವ್ಯಂಗ್ಯವಾಡಿದ್ದಾರೆ.

ಶಾಸಕ ಶ್ರೀಮಂತ ಪಾಟೀಲ್‌ ನಾಪತ್ತೆ ಬಗ್ಗೆ ಕಾವೇರಿದ ಚರ್ಚೆ, ಡಿಕೆಶಿ ಗರಂಶಾಸಕ ಶ್ರೀಮಂತ ಪಾಟೀಲ್‌ ನಾಪತ್ತೆ ಬಗ್ಗೆ ಕಾವೇರಿದ ಚರ್ಚೆ, ಡಿಕೆಶಿ ಗರಂ

KS Eshwarappa

ಗುರುವಾರ ಬೆಳಗ್ಗೆಯಿಂದ ಕಲಾಪದಲ್ಲಿ ಮೌನಕ್ಕೆ ಶರಣಾಗಿದ್ದ ಬಿಜೆಪಿ ನಾಯಕರು ಮಧ್ಯಾಹ್ನದ ಹೊತ್ತಿಗೆ ತಮ್ಮ ಕಾರ್ಯತಂತ್ರ ಬದಲಾವಣೆ ಮಾಡಿದರು. ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಸಹಕಾರಿ ಆಗಲೆಂದೇ ಸ್ಪೀಕರ್ ಚರ್ಚೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ವಿಶ್ವಾಸಮತ ಯಾಚನೆ LIVE: 'ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ' ರಾಜ್ಯಪಾಲರ ಸಂದೇಶವಿಶ್ವಾಸಮತ ಯಾಚನೆ LIVE: 'ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ' ರಾಜ್ಯಪಾಲರ ಸಂದೇಶ

ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ, "ನಾನು ಯಾರ ಒತ್ತಡಕ್ಕೂ ಮಣಿಯುವವನಲ್ಲ. ಯಾರಿಗೆ ದಾಹ ಇದೆಯೋ, ಯಾರಿಗೆ ಬಾಯಾರಿಕೆ ಇದೆಯೇ ನನಗೆ ಬೇಡ. ಅದು ನನಗೆ ಬೇಕಾಗಿಲ್ಲ, ನಾನು ನಿಮ್ಮ, ಅವರ ಒತ್ತಡಕ್ಕೂ ಮಣಿಯಲ್ಲ" ಎಂದು ಹೇಳಿದರು.

English summary
BJP leader K.S.Eshwarappa upset with Karnataka assembly speaker K.R.Ramesh Kumar. Trust vote debate underway at assembly on July 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X