ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲು ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡುವುದು ಪರಿಪಾಠ, ಹಾಗಾಗಿ ಪ್ರಯಾಣಿಕರ ಟಿಕೆಟ್ ದರವನ್ನು 18% ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಂತಿಮ ಆದೇಶ ಆಗಿಲ್ಲ ಎಂದರು.

Karnataka transport department decided to hike ticket price

2013-14ರಲ್ಲಿ ಅಂತಿಮವಾಗಿ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆ ನಂತರ ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಹಲವು ಬಾರಿ ಪೆಟ್ರೋಲ್ ದರದಲ್ಲಿ ಭಾರಿ ಏರಿಕೆ ಆದರೂ ಸಹ ಟಿಕೆಟ್ ಬೆಲೆ ಏರಿಸಿರಲಿಲ್ಲ ಹಾಗಾಗಿ ಈಗ ಅನಿವಾರ್ಯವಾಗಿ ಟಿಕೆಟ್ ದರ ಏರಿಸಬೇಕಾಗಿದೆ ಎಂದು ಅವರು ಹೇಳಿದರು.

ಫ್ಲೈ ಬಸ್ ಸೇವೆ ಅರಂಭಿಸಲು ಜನರ ಸಲಹೆ ಕೇಳಿದ ಕೆಎಸ್ಆರ್‌ಟಿಸಿಫ್ಲೈ ಬಸ್ ಸೇವೆ ಅರಂಭಿಸಲು ಜನರ ಸಲಹೆ ಕೇಳಿದ ಕೆಎಸ್ಆರ್‌ಟಿಸಿ

ಎಂಟು ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಕ್ರಾಂಗೆ ಹಾಕಲಾಗುತ್ತಿತ್ತು. ನಮ್ಮ ಬಸ್‌ಗಳ ಚಾರ್ಸಿ 20 ಲಕ್ಷ ಕಿ.ಮೀ ಬಾಳಿಕೆ ಬರುತ್ತದೆ. ಹಾಗಾಗಿ 7 ಲಕ್ಷ ಕಿ.ಮೀ ಓಡಿದ ಬಸ್‌ಗಳಿಗೆ ಮರುಕವಚ ಹೊದಿಸಿ ಮತ್ತೆ 5-6 ಲಕ್ಷ ಕಿ.ಮೀ ಓಡಿಸುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಮೈಸೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೆಚ್ಚಿದ ಫ್ಲೈ ಬಸ್ ವ್ಯವಸ್ಥೆಮೈಸೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೆಚ್ಚಿದ ಫ್ಲೈ ಬಸ್ ವ್ಯವಸ್ಥೆ

ಸಾರಿಗೆ ಸಂಸ್ಥೆಗಳಿಗೆ ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ ಮಾಡಲಾಗುವುದು. 24 ಸ್ಲೀಪರ್‍ಕೋಚ್ ಬಸ್‍ಗಳನ್ನು ಖರೀದಿ ಮಾಡಲಾಗುತ್ತದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ಉಚಿತದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ಉಚಿತ

English summary
Transport department decided to hike KSRTC and BMTC passengers ticket price by 18% it already send proposal to government waiting for CM's signature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X