ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗೀಕರಣದತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಜ್ಜೆ!

|
Google Oneindia Kannada News

ಬೆಂಗಳೂರು, ಆಗಸ್ಟ್ 27; ಕೋವಿಡ್ ಸಂದರ್ಭದಲ್ಲಿ ಉಂಟಾದ ನಷ್ಟದಿಂದ ಹೊರಬರಲು ಪ್ರಯತ್ನ ನಡೆಸುತ್ತಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ. ಇಲಾಖೆಯ ಕೆಲವು ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಚಿಂತನೆ ನಡೆಯುತ್ತಿದೆ.

ಪ್ರವಾಸೋದ್ಯಮ ಸಚಿವರಾಗಿ ಅಧಿಕಾರವಹಿಸಿಕೊಂಡ ಆನಂದ್ ಸಿಂಗ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಂಗಲ್ ಲಾಡ್ಜ್‌ಸ್ ಎಂಡ್ ರೆಸಾರ್ಟ್, ಕೆಎಸ್‌ಟಿಡಿಎಸ್ ನಿರ್ವಹಣೆ ಮಾಡುತ್ತಿರುವ ಕೆಲವು ಆಸ್ತಿಗಳನ್ನು ಖಾಸಗಿಗೆ ವಹಿಸುವ ಪ್ರಸ್ತಾಪವನ್ನು ಮುಂದಿಡಲಾಗಿದೆ.

 ಕೆಆರ್‌ಎಸ್ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಕೆಆರ್‌ಎಸ್ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ

ಈ ಕುರಿತು ಮಾತನಾಡಿರುವ ಸಚಿವರು, "ಸರ್ಕಾರ ನಿರ್ವಹಣೆ ಮಾಡುತ್ತಿರುವ ಜಂಗಲ್‌ ಲಾಡ್ಜ್‌ಸ್ ಮತ್ತು ಕೆಎಸ್‌ಟಿಡಿಎಸ್ ಹೋಟೆಲ್‌ಗಳನ್ನು ಖಾಸಗಿಯವರಿಗೆ ವಹಿಸುವ ಕುರಿತು ಚರ್ಚೆ ನಡೆದಿದೆ. ಈ ಚರ್ಚೆ ಇನ್ನೂ ಮೊದಲ ಹಂತದಲ್ಲಿದೆ" ಎಂದು ಸ್ಪಷ್ಟಪಡಿಸಿದರು.

 ಕೇರಳದಲ್ಲಿ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಹೊಸ ಐಡಿಯಾ ಕೇರಳದಲ್ಲಿ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಹೊಸ ಐಡಿಯಾ

Karnataka Tourism Department Thinking To Invite Private Players

"ಸರ್ಕಾರ ಏಕಾಂಗಿಯಾಗಿ ಎಲ್ಲ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಅಸಾಧ್ಯ. ಬಜೆಟ್‌ನಲ್ಲಿ ಅಷ್ಟು ಅನುದಾನ ನಿರೀಕ್ಷೆ ಮಾಡಲು ಸಹ ಆಗುವುದಿಲ್ಲ. ನಾವು ಆದಾಯಗಳಿಸುವುದಕ್ಕಿಂತ ಹೆಚ್ಚು ಹಣವನ್ನು ಅಭಿವೃದ್ಧಿ ಮತ್ತು ಸಿಬ್ಬಂದಿಗಳ ವೇತನಕ್ಕಾಗಿ ಖರ್ಚು ಮಾಡುತ್ತಿದ್ದೇವೆ" ಎಂದು ಆನಂದ್ ಸಿಂಗ್ ಹೇಳಿದರು.

 ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ; ಮೊದಲ ದಿನ ಭೇಟಿ ಕೊಟ್ಟವರೆಷ್ಟು? ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ; ಮೊದಲ ದಿನ ಭೇಟಿ ಕೊಟ್ಟವರೆಷ್ಟು?

"ನನ್ನ ತವರು ಕ್ಷೇತ್ರ ಹಂಪಿಯಲ್ಲಿಯೇ ಜಂಗಲ್‌ ಲಾಡ್ಜ್‌ಗಳು ಶೇ 80ರಷ್ಟು ಭರ್ತಿ ಆಗುವುದಿದಲ್ಲ. ಆದರೆ ಅದರ ಸಮೀಪ ಇರುವ ಖಾಸಗಿ ಹೋಟೆಲ್‌ಗಳು ಪೂರ್ಣ ಭರ್ತಿ ಆಗಿರುತ್ತದೆ. ಇಂತಹ ಸಮಸ್ಯೆಯನ್ನು ಗುರುತಿಸಿ ನಾವು ಪರಿಹಾರ ಕಂಡುಕೊಳ್ಳಬೇಕು" ಎಂದು ಸಚಿವ ಆನಂದ್ ಸಿಂಗ್ ವಿವರಣೆ ನೀಡಿದರು.

"ಇಲಾಖೆಯ ಯಾವುದೇ ಆಸ್ತಿಯನ್ನು ಮಾರಾಟ ಮಾಡದೇ ಕೆಲವು ವರ್ಷಗಳ ಕಾಲ ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಲಾಭ ಹಂಚಿಕೆ ಆಧಾರದ ಮೇಲೆ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಗೆ ವಹಿಸಬಹುದು. ಈ ಕುರಿತು ಚಿಂತನೆ ನಡೆಯುತ್ತಿದೆ" ಎಂದು ಸಚಿವ ಆನಂದ್ ಸಿಂಗ್ ವಿವರಿಸಿದರು.

"ಖಾಸಗಿ ಅವರಿಗೆ ನೀಡುತ್ತೇವೆ ಎಂದರೆ ಕಿಕ್ ಬ್ಯಾಕ್ ಪಡೆಯುತ್ತೇವೆ ಎಂದರ್ಥವಲ್ಲ. ಪಿಪಿಪಿ ಮಾದರಿಯಲ್ಲಿ ಅಥವ ಜಾಗತಿಕ ಟೆಂಡರ್ ಕರೆದು ನಿರ್ವಹಣೆಯನ್ನು ಒಪ್ಪಿಸಲಾಗುತ್ತದೆ. ಆದರೆ ಆಸ್ತಿಗಳ ಮಾಲೀಕತ್ವ ಇಲಾಖೆಯ ಬಳಿಯೇ ಇರುತ್ತದೆ. ಈ ಚಿಂತನೆ ಸಫಲವಾಗಲಿದೆಯೇ? ಎಂದು ಇನ್ನೂ ಹಲವು ಸುತ್ತಿನ ಚರ್ಚೆಗಳು ನಡೆಯಬೇಕಿದೆ" ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿರುವ ಯಾತ್ರಿ ನಿವಾಸಗಳಲ್ಲಿ ಬಹುತೇಕ ದೇವಾಲಯಗಳಿಗೆ ಸೇರಿದ್ದಾಗಿದೆ. ಆದ್ದರಿಂದ ಇವುಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆದಿದೆ.

Recommended Video

ನಿಮ್ ಮಕ್ಳಿಗೆಲ್ಲಾ ಒಳ್ಳೆದಾಗಲ್ಲಾ ಎಂದು ಪೊಲೀಸರ ಮೇಲೆ ರಮೇಶ್ ಕುಮಾರ್ ಫುಲ್ ಗರಂ | Oneindia Kannada

ಪ್ರವಾಸೋದ್ಯಮ ಇಲಾಖೆ ರಾಜ್ಯ ಟಾಪ್ 10 ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು 70 ರಿಂದ 80 ಕೋಟಿಯ ಯೋಜನೆಯನ್ನು ರೂಪಿಸುತ್ತಿದೆ. ಪ್ರವಾಸೋದ್ಯಮ ತಾಣಗಳ ಪರಿಚಯಕ್ಕಾಗಿ ಪ್ರಚಾರವನ್ನು ಸಹ ಕೈಗೊಳ್ಳಲಾಗುತ್ತದೆ.

English summary
Karnataka tourism department thinking to invite private players to run some of the tourist facilities across Karnataka including Jungle Lodges and Resorts and Karnataka State Tourism Development Corporation (KSTDC) run hotels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X