ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಕರ್ನಾಟಕ ನಂ.1

|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ಮೊದಲ ಸ್ಥಾನದಲ್ಲಿದೆ. ಅಚ್ಚರಿಯಾದರೂ ಇದು ಸತ್ಯ ಲೋಸಭೆಯಲ್ಲಿ ಈ ಕುರಿತು ಅಂಕಿ ಅಂಶಗಳನ್ನು ನೀಡಲಾಗಿದೆ.

ಹಣಕಾಸು ಇಲಾಖೆ ಲೋಕಸಭೆಯಲ್ಲಿ ಕಳೆದ ವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 5 ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿವೆ. ಎಟಿಎಂ ದರೋಡೆ ಪ್ರಕರಣವನ್ನು ಇದಕ್ಕೆ ಸೇರಿಸಿರುವ ಸಾಧ್ಯತೆ ಇದೆ.

2019ರ ಮಾರ್ಚ್ ಹೊತ್ತಿಗೆ ದೇಶದ ಶೇ 50ರಷ್ಟು ಎಟಿಎಂಗಳು ಬಂದ್!2019ರ ಮಾರ್ಚ್ ಹೊತ್ತಿಗೆ ದೇಶದ ಶೇ 50ರಷ್ಟು ಎಟಿಎಂಗಳು ಬಂದ್!

ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿವೆ. 2013-14ನೇ ಸಾಲಿನಲ್ಲಿ ಬಿಹಾರದಲ್ಲಿ 434, ಪಶ್ಚಿಮ ಬಂಗಾಳದಲ್ಲಿ 371 ಪ್ರಕರಣ ದಾಖಲಾಗಿದೆ.

ಸಂಭಾವ್ಯ ಬ್ಯಾಂಕ್ ಮುಷ್ಕರ: ಇದೇ ವಾರಾಂತ್ಯದಿಂದ 5 ದಿನ ಬ್ಯಾಂಕ್ ರಜೆಸಂಭಾವ್ಯ ಬ್ಯಾಂಕ್ ಮುಷ್ಕರ: ಇದೇ ವಾರಾಂತ್ಯದಿಂದ 5 ದಿನ ಬ್ಯಾಂಕ್ ರಜೆ

ದೇಶದಲ್ಲಿ ಎಟಿಎಂ ದೋಚಿದ ಪ್ರಕರಣಗಳು ಎಷ್ಟು ನಡೆದಿವೆ? ಎಂಬ ಬಗ್ಗೆ ಕೇಂದ್ರ ಸರ್ಕಾರ, ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಬಳಿ ಅಧಿಕೃತ ದಾಖಲೆಗಳು ಇಲ್ಲ. ಬ್ಯಾಂಕ್ ಕಳ್ಳತನ ಪ್ರಕರಣದ ಬಗ್ಗೆ ಮಾತ್ರ ವರದಿಯನ್ನು ತಯಾರಿಸಲಾಗಿದೆ.

ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕುಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು

ಕರ್ನಾಟಕದಲ್ಲಿ ಹೆಚ್ಚು ಪ್ರಕರಣ

ಕರ್ನಾಟಕದಲ್ಲಿ ಹೆಚ್ಚು ಪ್ರಕರಣ

ಲೋಕಸಭೆಯಲ್ಲಿ ಹಣಕಾಸು ಇಲಾಖೆ ನೀಡಿದ ಮಾಹಿತಿಯಂತೆ ಕರ್ನಾಟಕದಲ್ಲಿ 2013-14ನೇ ಸಾಲಿನಲ್ಲಿ 179 ಬ್ಯಾಂಕ್ ಕಳ್ಳತನ ಪ್ರಕರಣಗಳು ನಡೆದಿವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಮೊದಲ ಸ್ಥಾನದಲ್ಲಿದೆ.

ಯಾವ ರಾಜ್ಯದಲ್ಲಿ ಎಷ್ಟು?

ಯಾವ ರಾಜ್ಯದಲ್ಲಿ ಎಷ್ಟು?

ದಕ್ಷಿಣ ಭಾರತದ ರಾಜ್ಯಗಳ ಪೈಕಿ 2013-14ರಲ್ಲಿ ಆಂಧ್ರಪ್ರದೇಶದಲ್ಲಿ 154, ತಮಿಳುನಾಡಿನಲ್ಲಿ 130, ಹೊಸದಾಗಿ ರಚನೆಯಾದ ತೆಲಂಗಾಣ ರಾಜ್ಯದಲ್ಲಿ 27 ಬ್ಯಾಂಕ್ ದರೋಡೆ ಪ್ರಕರಣ ನಡೆದಿದೆ. 2017-18ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಸಚಿವರು ಹೇಳಿದ್ದೇನು?

ಸಚಿವರು ಹೇಳಿದ್ದೇನು?

ಹಣಕಾಸು ಇಲಾಖೆಯ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದು, 'ದೇಶದಲ್ಲಿ ನಡೆದ ಎಟಿಎಂಗಳ ದರೋಡೆ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆರ್‌ಬಿಐ ಬ್ಯಾಂಕ್ ದರೋಡೆ, ಎಟಿಎಂ ಕಳ್ಳತನ ಪ್ರಕರಣಗಳನ್ನು ಸೇರಿಸಿ ಅಂಕಿ-ಸಂಖ್ಯೆ ನೀಡಿದೆ' ಎಂದು ಹೇಳಿದ್ದಾರೆ.

ಎಟಿಎಂ ಮುಚ್ಚುವುದಿಲ್ಲ

ಎಟಿಎಂ ಮುಚ್ಚುವುದಿಲ್ಲ

ದೇಶದಲ್ಲಿ 2,500 ಎಟಿಎಂ ಮುಚ್ಚಲಾಗುತ್ತದೆ ಎಂಬ ಸುದ್ದಿಯನ್ನು ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ತಳ್ಳಿ ಹಾಕಿದ್ದಾರೆ. ಸರ್ಕಾರ ಇಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

English summary
According to data tabled by the Ministry of Finance in the Lok Sabha Karnataka tops the list of bank robberies in South Indian states. Karnataka has recorded the 179 cases since 2013-14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X