ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟ್‌ ಬೆಲ್ಟ್ ಧರಿಸದೆ ಅಪಘಾತ, ದೇಶದಲ್ಲೇ ಕರ್ನಾಟಕ ನಂಬರ್ 1

|
Google Oneindia Kannada News

ನವದೆಹಲಿ, ಅಕ್ಟೋಬರ್ 9: ದೇಶದಲ್ಲಿ ಜನಸಂಖ್ಯೆ ಜತೆಗೆ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಮೂಹ ಸಾರಿಗೆಯನ್ನು ಹೆಚ್ಚು ಬಳಕೆ ಮಾಡಿ ಅಂದರೂ ಎಲ್ಲರೂ ತಮ್ಮ ತಮ್ಮ ಬಗ್ಗೆ ಮಾತ್ರ ಆಲೋಚಿಸುತ್ತಾರೆ.

ದೇಶದಲ್ಲಿ ದಿನಕ್ಕೆ 98 ಮಂದಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿ ಅಪಘಾತಕ್ಕೀಡಾಗುತ್ತಿದ್ದಾರೆ, ಕರ್ನಾಟಕದಲ್ಲಿ ಕಾರಿನ ಸೀಟ್ ಬೆಲ್ಟ್ ಧರಿಸದೆ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಭಾರತೀಯ ಸಾರಿಗೆ ಇಲಾಖೆ ನೀಡಿದೆ.

ಕಾರ್ ಸೀಟ್‌ಬೆಲ್ಟ್‌ ಹಾಕದೇ ದಿನಕ್ಕೆ ಪ್ರಾಣ ಕಳ್ಕೊಳ್ಳೋರು ಎಷ್ಟು ಜನ ಗೊತ್ತಾ? ಕಾರ್ ಸೀಟ್‌ಬೆಲ್ಟ್‌ ಹಾಕದೇ ದಿನಕ್ಕೆ ಪ್ರಾಣ ಕಳ್ಕೊಳ್ಳೋರು ಎಷ್ಟು ಜನ ಗೊತ್ತಾ?

ನಿಧಾನವಾಗಿ ಜನರು ಎಚ್ಚೆತ್ತುಕೊಳ್ಳುತ್ತಿದ್ದು 2016ಕ್ಕೆ ಹೋಲಿಸಿದರೆ ಅಪಘಾತ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. 2016ರಲ್ಲಿ 1.51 ಲಕ್ಷ ಮಂದಿ ಮೃತಪಟ್ಟಿದ್ದರೆ, 2017ರಲ್ಲಿ 1.48 ಲಕ್ಷ ಮಂದಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೆ ಮೃಪಟ್ಟಿದ್ದಾರೆ.

ಹೆಲ್ಮೆಟ್ ಧರಿಸದೆ ದೇಶದಲ್ಲಿ 36 ಸಾವಿರ ಜನರ ಸಾವು

ಹೆಲ್ಮೆಟ್ ಧರಿಸದೆ ದೇಶದಲ್ಲಿ 36 ಸಾವಿರ ಜನರ ಸಾವು

2017ರಲ್ಲಿ ಹೆಲ್ಮೆಟ್ ಧರಿಸದೆ ದೇಶದಲ್ಲಿ 36 ಸಾವಿರ ಮಂದಿ ಮೃತಪಟ್ಟಿದ್ದಾರೆ. 2016ರಲ್ಲಿ 10,135 ಮಂದಿ ಮೃತಪಟ್ಟಿದ್ದರು, 2016ಕ್ಕೆ ಹೋಲಿಸಿದರೆ 2017ರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ತಮಿಳುನಾಡಿನಲ್ಲಿ 5211, ಉತ್ತರ ಪ್ರದೇಶದಲ್ಲಿ 4406, ಮಧ್ಯಪ್ರದೇಶದಲ್ಲಿ 3183 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನ್ಯೂಯಾರ್ಕಿನಲ್ಲಿ ಭೀಕರ ಅಪಘಾತ, 20 ಮಂದಿ ದುರ್ಮರಣ ನ್ಯೂಯಾರ್ಕಿನಲ್ಲಿ ಭೀಕರ ಅಪಘಾತ, 20 ಮಂದಿ ದುರ್ಮರಣ

ಸೀಟ್ ಬೆಲ್ಟ್ ಧರಿಸದೆ ಕರ್ನಾಟಕದಲ್ಲಿ 4035 ಮಂದಿ ಸಾವು

ಸೀಟ್ ಬೆಲ್ಟ್ ಧರಿಸದೆ ಕರ್ನಾಟಕದಲ್ಲಿ 4035 ಮಂದಿ ಸಾವು

ಸೀಟ್ ಬೆಲ್ಟ್ ಧರಿಸದೆ ಕರ್ನಾಟಕದಲ್ಲಿ 2017ರಲ್ಲಿ ಒಟ್ಟು 4035 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 3497, ಉತ್ತರ ಪ್ರದೇಶದಲ್ಲಿ 2897 ಮಂದಿ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇವೆಲ್ಲರ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ಪುತ್ತೂರಿನಲ್ಲಿ ಆಟೋ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ!?ಪುತ್ತೂರಿನಲ್ಲಿ ಆಟೋ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ!?

 ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವವರ ಸಂಖ್ಯೆಯೂ ವಿಪರೀತವಾಗಿದೆ. ಉತ್ತರ ಪ್ರದೇಶದಲ್ಲಿ ವಾಹನ ಚಾಲನೆ ಮೊಬೈಲ್ ಬಳಕೆ ಮಾಡುತ್ತಾ 1512 ಮಂದಿ ಅಪಘಾತಕ್ಕೀಡಾಗಿದ್ದಾರೆ. ಮಹಾರಾಷ್ಟ್ರ 2 ನೇ ಸ್ಥಾನದಲ್ಲಿದ್ದು 282 ಮಂದಿ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ 257 ಮಂದಿ ಸಾವಿಗೀಡಾಗಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘನೆಯೇ ಅಪಘಾತಗಳಿಗೆ ಕಾರಣ

ಟ್ರಾಫಿಕ್ ನಿಯಮ ಉಲ್ಲಂಘನೆಯೇ ಅಪಘಾತಗಳಿಗೆ ಕಾರಣ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಪಘಾತ ವರದಿ ಗಮನಿಸಿದರೆ ಸಂಚಾರ ನಿಯಮ ಉಲ್ಲಂಘನೆಯೇ ಇದೆಲ್ಲಾ ಅಪಘಾತಕ್ಕೆ ಕಾರಣ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ವರದಿ ಪ್ರಕಾರ ಶೇ.67 ರಷ್ಟು ರಸ್ತೆ ಅಪಘಾತಗಳು ಅತಿ ವೇಗದ ವಾಹನ ಚಾಲನೆಯಿಂದ ಸಂಭವಿಸುತ್ತಿದೆ.

English summary
At least 98 two wheeler riders without helmets died daily in 2017 while another 79 car occupants lost their lives every day in accidents because they were not wearing seatbelts, according to a Road Accident Report. The use of cellphones while driving also claimed about nine lives every day last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X