ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ನವೆಂಬರ್ 12 ಹೊತ್ತಿಗೆ 10 ಲಕ್ಷ ಕೊರೊನಾ ಸೋಂಕಿತರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಕರ್ನಾಟಕದಲ್ಲಿ ನವೆಂಬರ್ 12ರ ಹೊತ್ತಿಗೆ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷ ದಾಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ರಾಜ್ಯಲ್ಲಿ ಕಡಿಮೆಯಾಗಿಲ್ಲ.

ನವೆಂಬರ್ 12ರೊಳಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ಗಡಿದಾಟಲಿದೆ, ಮೃತರ ಸಂಖ್ಯೆ 12,800ಕ್ಕೆ ತಲುಪಲಿದೆ ಎಂದು ತಜ್ಞರು ನಡೆಸಿದ ಅಧ್ಯಯನದಲ್ಲಿ ಅಂದಾಜಿಸಲಾಗಿದೆ.

ಕಾಲೇಜು, ವಿಶ್ವವಿದ್ಯಾಲಯಗಳು ನವೆಂಬರ್ 2ರಿಂದ ಪ್ರಾರಂಭ?ಕಾಲೇಜು, ವಿಶ್ವವಿದ್ಯಾಲಯಗಳು ನವೆಂಬರ್ 2ರಿಂದ ಪ್ರಾರಂಭ?

ಬೆಂಗಳೂರಿನಲ್ಲಿ ಕೊರೊನಾ ವ್ಯಾಪಕವಾಗುತ್ತಿದ್ದು, ನಗರದಲ್ಲಿ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.8ಪಾಲನ್ನು ಬೆಂಗಳೂರು ಹೊಂದಿದೆ.

ಇದರಂತೆ ನವೆಂಬರ್ ವೇಳೆಗೆ ಪ್ರಕರಣಗಳ ಸಂಖ್ಯೆ 4.2 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಮುಂದಿನ4-6 ವಾರಗಳಲ್ಲಿ ಬೆಂಗಳೂರು ನಗರಕ್ಕೆ 13,000 ಆಮ್ಲಜನಕ ಹಾಸಿಗೆಗಳು, 10,000 ಐಸಿಯು ಹಾಸಿಗೆಗಳು ಮತ್ತು 6,500 ವೆಂಟಿಲೇಟರ್‌ಗಳ ಅಗತ್ಯತೆ ಬೀಳಬಹುದು ಎಂದು ಹೇಳಲಾಗುತ್ತಿದೆ.

ಮಾರ್ಚ್ 8 ರಂದು ಮೊದಲ ಕೊವಿಡ್ 19 ಪ್ರಕರಣ ಪತ್ತೆ

ಮಾರ್ಚ್ 8 ರಂದು ಮೊದಲ ಕೊವಿಡ್ 19 ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಮಾ. 8ರಂದು ಮೊದಲ ಕೊವಿಡ್ ಪ್ರಕರಣ ವರದಿಯಾಗಿತ್ತು. ಎಂಟು ತಿಂಗಳು ಕಳೆಯುವ ಮುನ್ನವೇ ಸೋಂಕಿತರ ಸಂಖ್ಯೆ 7.58 ಲಕ್ಷಕ್ಕೆ (ಅ.17) ತಲುಪಿದೆ. ಅದೇ ರೀತಿ, ಮೃತರ ಸಂಖ್ಯೆ 10,500ರ ಗಡಿ ದಾಟಿದೆ.

ಸಂಸ್ಥೆಗಳು

ಸಂಸ್ಥೆಗಳು

ಸಂಸ್ಥೆಯು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ವೈದ್ಯಕೀಯ ಸಂಘದ ನೆರವು ಪಡೆದು ಸಂಸ್ಥೆಯು ಈ ಅಧ್ಯಯನ ನಡೆಸಿದೆ. ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಉಸ್ತುವಾರಿ ರಂದೀಪ್ ಡಿ ಮಾತನಾಡಿ, ಖಾಸಗಿ ಕೊವಿಡ್ ಆಸ್ಪತ್ರೆಗಳ ಸಂಖ್ಯೆಯನ್ನು 31 ರಿಂದ 49ಕ್ಕೆ ಹೆಚ್ಚಿಸಿದ್ದೇವೆ. ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಐಸಿಯು ಹಾಸಿಗೆಗಳನ್ನು ಸೇರ್ಪಡೆಗೊಳಿಸಲಾಗುವುದು. ನಮ್ಮಲ್ಲಿ ಮೂಲಸೌಕರ್ಯಗಳ ಉತ್ತಮವಾಗಿದ್ದು, ಮತ್ತಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ. ನಾವು ಪ್ರತಿದಿನ 35,000 ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ.

ಸೋಂಕು ದೃಢ ಪ್ರಮಾಣ

ಸೋಂಕು ದೃಢ ಪ್ರಮಾಣ

ರಾಜ್ಯದಲ್ಲಿ ಶೇ 11.56 ರಷ್ಟು ಸೋಂಕು ದೃಢ ಪ್ರಮಾಣವಿದೆ. ಇದರ ಅನುಸಾರ ಸರ್ಕಾರೇತರ ಸಂಸ್ಥೆಯಾದ ಪ್ರಾಕ್ಸಿಮಾ 'ಜೀವನ್ ರಕ್ಷಾ' ಯೋಜನೆಯಡಿ ಅಧ್ಯಯನ ನಡೆಸಿದ್ದು, ಸೋಂಕು ಹಾಗೂ ಮರಣ ಪ್ರಕರಣಗಳ ಏರಿಕೆಯನ್ನು ಅಂದಾಜು ಮಾಡಿದೆ.

ಆಗಸ್ಟ್‌ನಲ್ಲಿ ಎಷ್ಟು ಇತ್ತು

ಆಗಸ್ಟ್‌ನಲ್ಲಿ ಎಷ್ಟು ಇತ್ತು

ಆಗಸ್ಟ್ 15ರ ವೇಳೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,19,926ಕ್ಕೆ ತಲುಪಿತ್ತು. ಸೆಪ್ಟೆಂಬರ್ 12ರ ವೇಳೆಗೆ ದುಪ್ಪಟ್ಟಾಗಿ 4,40,411ಕ್ಕೆ ಏರಿಕೆಯಾಗಿತ್ತು. ಅಕ್ಟೋಬರ್ 12ರ ವೇಳೆಗೆ ಈ ಸಂಖ್ಯೆ 7,17,915ಕ್ಕೆ ತಲುಪಿತ್ತು. ಹೀಗಾಗಿ, ನ.12ಕ್ಕೆ ಕೋವಿಡ್‌ ಪ್ರಕರಣಗಳು 10 ಲಕ್ಷದ ಗಡಿ ದಾಟಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಮೃತರ ಸಂಖ್ಯೆ ಏರಿಕೆ

ಮೃತರ ಸಂಖ್ಯೆ ಏರಿಕೆ

ಇದೇ ರೀತಿ, ಆಗಸ್ಟ್‌ 15ರಂದು 3,931 ಇದ್ದ ಮೃತರ ಸಂಖ್ಯೆ ಬಳಿಕ ಏರಿಕೆ ಕಂಡು, ಅ. 12ಕ್ಕೆ 10 ಸಾವಿರದ ಗಡಿ ದಾಟಿತ್ತು. ಇದರ ಅನುಸಾರವೇ ಮರಣ ಪ್ರಕರಣಗಳನ್ನು ಸಂಸ್ಥೆ ಲೆಕ್ಕ ಹಾಕಿದೆ.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

English summary
Karnataka will cross the 10 lakh Covid-positive cases and Bengaluru 4.2 lakh by November 12, while the total number of lives claimed by the pandemic would touch 12,800 in the state, projected an estimate by a private firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X