ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ : ಓಬಿಸಿ ಪಟ್ಟಿ ಸೇರಲಿವೆ ಇನ್ನೂ 46 ಜಾತಿಗಳು?

|
Google Oneindia Kannada News

ಬೆಂಗಳೂರು, ಜೂನ್ 13 : 46 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಶೀಘ್ರದಲ್ಲಿಯೇ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ 10ರಷ್ಟು ಮೀಸಲಾತಿಯನ್ನು ನೀಡಿದೆ. ಕೇಂದ್ರದ ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೆ ತರಲು ಸರ್ಕಾರ ಪ್ರಯತ್ನವನ್ನು ಆರಂಭಿಸಿದೆ.

ಕುರುಬ ಜಾತಿಯನ್ನು ಎಸ್‌ಟಿಗೆ ಸೇರಿಸಲು ಮುಂದಾದ ರಾಜ್ಯ ಸರ್ಕಾರಕುರುಬ ಜಾತಿಯನ್ನು ಎಸ್‌ಟಿಗೆ ಸೇರಿಸಲು ಮುಂದಾದ ರಾಜ್ಯ ಸರ್ಕಾರ

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಈ ಸಮಿತಿ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಜಾತಿ, ಹೊಸದಾಗಿ ಯಾವ ಜಾತಿ ಸೇರಿಸಬಹುದು? ಎಂದು ಪಟ್ಟಿ ಮಾಡಲಿದೆ.

ಬಂಜಾರಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ : ಕುಮಾರಸ್ವಾಮಿಬಂಜಾರಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ : ಕುಮಾರಸ್ವಾಮಿ

Karnataka

ಕೇಂದ್ರ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಕುರಿತು ಕರ್ನಾಟಕ ಸರ್ಕಾರ ಶಿಫಾರಸು ಸಲ್ಲಿಸಲಿದೆ. ರಾಜ್ಯದ ಸುಮಾರು 45 ಜಾತಿಗಳನ್ನು ಓಬಿಸಿ ವರ್ಗಕ್ಕೆ ಸೇರಿಸುವಂತೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ.

ರಾಹುಲ್ ಪ್ರಧಾನಿ ಆದರೆ ಗಂಗಾಮಥಸ್ಥರು ST ಗೆ ಸೇರ್ಪಡೆ: ಸಿದ್ದರಾಮಯ್ಯರಾಹುಲ್ ಪ್ರಧಾನಿ ಆದರೆ ಗಂಗಾಮಥಸ್ಥರು ST ಗೆ ಸೇರ್ಪಡೆ: ಸಿದ್ದರಾಮಯ್ಯ

ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಸಮಿತಿ ಒಮ್ಮೆ ಸಭೆ ನಡೆಸಿದೆ. ಯಾವ-ಯಾವ ಜಾತಿಗಳನ್ನು ಸೇರಿಸಲು ಶಿಫಾರಸು ಮಾಡಬಹುದು ಎಂದು ಕಾನೂನು ತಜ್ಞರ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದೆ. ಈ ಕುರಿತು ಸಮಗ್ರ ವರದಿ ತಯಾರಿಸಿ ಸಚಿವ ಸಂಪುಟದ ಮುಂದೆ ಇಡಲಾಗುತ್ತದೆ.

ಯಾವ-ಯಾವ ಜಾತಿಗಳು : ಕಾಡುಗೊಲ್ಲ, ಹಟ್ಟಿಗೊಲ್ಲ, ದಾವಾರಿ, ಕಲ್ಲುಕುಟಿಗ ಉಪ್ಪಾರ, ಪಾಡಿ, ಆಗಮುಡಿ, ಬಾವಂದಿ, ಬೈರಾಗಿ, ಗೋಸಾಯಿ, ಹೆಳವ, ಮೊಗೇರ, ಗಣಿಕ, ಕಲಾವಂತ, ಗಾಣಿಗ ಮನೆ, ಗೌರಿಗ, ಗೌಳಿ, ನಂದಿವಾಳ ಸೇರಿದಂತೆ ವಿವಿಧ ಜಾತಿಗಳನ್ನು ಓಬಿಸಿಗೆ ಸೇರಿಸುವಂತೆ ಶಿಫಾರಸು ಮಾಡುವ ನಿರೀಕ್ಷೆ ಇದೆ.

English summary
Karnataka government will request union govt to include 46 castes to OBC. Govt formed committee to prepare proposal. Committee lead by Chief Secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X