ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ಪರೀಕ್ಷಾ ಕೋವಿಡ್ ಕಿಟ್‌ ಬಳಕೆಗೆ ಕರ್ನಾಟಕ ಸರ್ಕಾರ ಲಗಾಮು

|
Google Oneindia Kannada News

ಬೆಂಗಳೂರು, ಜನವರಿ 18: ಹೋಮ್-ಟೆಸ್ಟಿಂಗ್ ಕಿಟ್‌ಗಳ ಅನಿಯಂತ್ರಿತ ಮಾರಾಟ ಮತ್ತು ಬಳಕೆ ಆಗುತ್ತಿದೆ. ಈ ಪೈಕಿ ಹಲವು ಫಲಿತಾಂಶಗಳನ್ನು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಪರೀಕ್ಷಾ ಕೋವಿಡ್ ಕಿಟ್‌ ಬಳಕೆಯನ್ನು ನಿಯಂತ್ರಣ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಭಾನುವಾರು ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಹೋಮ್-ಟೆಸ್ಟಿಂಗ್ ಕಿಟ್‌ಗಳ ಅನಿಯಂತ್ರಿತ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಿದೆ.

ರಾಜ್ಯದಲ್ಲಿ ಎಷ್ಟು ಕಿಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಮತ್ತು ಎಷ್ಟು ಖರೀದಿದಾರರಿಗೆ ಕೋವಿಡ್ ಪಾಸಿಟಿವ್‌ ಬರುತ್ತಿದೆ ಎಂಬುವುದನ್ನು ದಾಖಲೆ ಮಾಡುವ ಗುರಿಯನ್ನು ಸರ್ಕಾರವು ಹೊಂದಿದೆ. ಈ ವಿಷಯದ ಬಗ್ಗೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು, "ಕೋವಿಡ್‌ ಪರೀಕ್ಷಾ ಫಲಿತಾಂಶಗಳ ವರದಿಯನ್ನು ಪಡೆಯಲು ಸರ್ಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು," ಎಂಬ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚಿಸುವುದಾಗಿ ಹೇಳಿದರು.

ಕೊವಿಡ್ ಪರೀಕ್ಷೆ ಕಿಟ್ ಖರೀದಿಸುವವರ ಫಲಿತಾಂಶ ಏನೋ ಎಂತೋ?: ಸರ್ಕಾರದ ಸುತ್ತೋಲೆ ಕೊವಿಡ್ ಪರೀಕ್ಷೆ ಕಿಟ್ ಖರೀದಿಸುವವರ ಫಲಿತಾಂಶ ಏನೋ ಎಂತೋ?: ಸರ್ಕಾರದ ಸುತ್ತೋಲೆ

ಕಿಟ್‌ಗಳನ್ನು ನಿಯಂತ್ರಿಸಲು ತಪಾಸಣೆ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ತನ್ನ ತಂಡದೊಂದಿಗೆ ಮಾತುಕತೆ ನಡೆಸಿ ಪರಿಶೀಲಿಸುವುದಾಗಿ ಮತ್ತೊಬ್ಬ ಆರೋಗ್ಯ ಅಧಿಕಾರಿ ಹೇಳಿದ್ದರು. ಕರ್ನಾಟಕ ರಾಜ್ಯದಲ್ಲಿ ಪ್ರತಿದಿನ ಎಷ್ಟು ಆರ್‌ಟಿ-ಪಿಸಿಆರ್, ಆರ್‌ಎಟಿ ಸ್ವಯಂ-ಪರೀಕ್ಷಾ ಕಿಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ ಎಂದು ಕೂಡಾ ಸುತ್ತೋಲೆಯು ಸ್ಪಷ್ಟಪಡಿಸಿದೆ.

Karnataka to Regulate Sale of Self-Test COVID Test Kits

ನಗರವೊಂದರಲ್ಲೇ ಸರಾಸರಿ 12 ಸಾವಿರ ಕಿಟ್‌ ಮಾರಾಟ

ನಗರವೊಂದರಲ್ಲೇ ಸರಾಸರಿ 12 ಸಾವಿರ ಕಿಟ್‌ಗಳು ಮಾರಾಟವಾಗುತ್ತಿವೆ ಎಂದು ಬೆಂಗಳೂರು ಕೆಮಿಸ್ಟ್‌ ಅಂಡ್ ಡ್ರಗ್ಗಿಸ್ಟ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ರವೀಂದ್ರಕುಮಾರ್‌ ಎಂಜೆ ಮಾಹಿತಿ ನೀಡಿದ್ದಾರೆ. ನಿಖರವಾದ ಮಾಹಿತಿಯ ಕೊರತೆಯ ನಡುವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ "ಸೂಕ್ತ ಕ್ರಮ ಕೈಗೊಳ್ಳಲು" ಸೂಚನೆ ನೀಡಿದೆ ಎಂದು ಸುತ್ತೋಲೆಯು ಉಲ್ಲೇಖ ಮಾಡಿದೆ.

ಈ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಂಡಿದ್ದು, ಸಾಗಿಸುವ ಮತ್ತು ರವಾನಿಸುವ ಏಜೆಂಟ್‌ಗಳು ಮತ್ತು ವಿತರಕರು ಈಗ ಅವರು ಎಷ್ಟು ಕಿಟ್‌ಗಳನ್ನು ಸ್ವೀಕರಿಸಿದ್ದಾರೆ ಮತ್ತು ಮಾರಾಟ ಮಾಡಿದ್ದಾರೆ ಎಂಬ ವಿವರಗಳನ್ನು ದಾಖಲಿಸಬೇಕಾಗಿದೆ. ಇದಲ್ಲದೆ ಔಷಧ ನಿಯಂತ್ರಣ ಇಲಾಖೆ ಕಿಟ್‌ಗಳು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. "ಮೆಡಿಕಲ್ ಶಾಪ್ ಮಾಲೀಕರು ಅಂತಹ ಕಿಟ್‌ಗಳನ್ನು ಖರೀದಿಸುವವರ ವಿವರಗಳನ್ನು ಗಮನಿಸಬೇಕು. ಅವರ ಹೆಸರು, ಅವರ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು. ಇದನ್ನು ಪಡೆದಿರಬೇಕು," ಎಂದು ಸುತ್ತೋಲೆ ಹೇಳುತ್ತದೆ.

"ಕಿಟ್‌ಗಳನ್ನು ಮಾರಾಟ ಮಾಡುವವರು ಖರೀದಿದಾರರಿಗೆ ತಯಾರಕರ ಆಯಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಅವರ ಪರೀಕ್ಷಾ ವರದಿಗಳನ್ನು ಅಪ್‌ಲೋಡ್ ಮಾಡಲು ಎಂದು ತಿಳಿಸಬೇಕು. ಕೋವಿಡ್‌ ಪಾಸಿಟಿವ್‌ ಬಂದಲ್ಲಿ ಅವರು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಅವರ ವೈದ್ಯರಿಗೆ ತಿಳಿಸಬೇಕು," ಎಂದು ಕೂಡಾ ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕಿಟ್‌ಗಳ ಮಾರಾಟದ ಬಗ್ಗೆ ಪ್ರತಿದಿನ ಸಂಜೆ 6 ಗಂಟೆಯೊಳಗೆ ಮೆಡಿಕಲ್ ಶಾಪ್ ಮಾಲೀಕರಿಂದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. "ಇನ್ನು ಹಲವಾರು ಮಂದಿ ಪೇಪರ್ ಬಿಲ್ಲಿಂಗ್ ಮತ್ತು ಫೋನ್ ಕರೆಗಳನ್ನು ಬಳಸುತ್ತಿದ್ದಾರೆ. ಆದರೆ ಅಗತ್ಯ ಬಿದ್ದರೆ ವಾಟ್ಸಾಪ್ ಬಳಸಿ ಅಗತ್ಯ ದತ್ತಾಂಶವನ್ನು ಅಪ್ ಲೋಡ್ ಮಾಡಲು ಆರಂಭಿಸಬಹುದು," ಎಂದು ಹೇಳಿದರು.

ದೇಶದಲ್ಲಿ ಕೋವಿಡ್‌

ಭಾರತದಲ್ಲಿ 2,38,018 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 20,071 ಪ್ರಕರಣಗಳು ಕುಸಿತವಾಗಿದೆ. ಭಾರತದ ಸಕ್ರಿಯ ಪ್ರಕರಣಗಳು 17,36,628. ಪಾಸಿಟಿವಿಟಿ ದರ ಶೇ 14.43. ದೇಶದಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 8,891 ಆಗಿದೆ. ದೇಶದಲ್ಲಿ 230 ದಿನಗಳಲ್ಲಿ ಸಕ್ರಿಯ ಪ್ರಕರಣ ಅಧಿಕವಾಗಿದ್ದು, ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು 17,36,628 ಕ್ಕೆ ಏರಿಕೆ ಆಗಿದೆ. (ಒನ್‌ಇಂಡಿಯಾ ಸುದ್ದಿ)

English summary
Karnataka to regulate sale of self-test Covid Test kits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X