ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಹೊಸ ವರ್ಷದ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಕರ್ನಾಟಕದಲ್ಲಿ ಎರಡು ವಿಮಾನ ಚಾಲನೆ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ. ಬೆಂಗಳೂರಿನ ಜಕ್ಕೂರಿನಲ್ಲಿ ಈಗಾಗಲೇ ದೇಶದ ಅತಿ ಹಳೆಯ ವಿಮಾನ ಚಾಲನೆ ತರಬೇತಿ ಶಾಲೆ ಇದೆ.

ಕೇಂದ್ರ ವಿಮಾನಯಾನ ಸಚಿವಾಲಯ ಕರ್ನಾಟಕದಲ್ಲಿ ಎರಡು ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಲು ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಯೋಜನೆಯ ನಿರ್ವಹಣೆ ನೋಡಿಕೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ 9 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ದೇಶದ ಸುರಕ್ಷಿತ ವಿಮಾನ ನಿಲ್ದಾಣ; ಕೆಐಎಗೆ 3ನೇ ಸ್ಥಾನ ದೇಶದ ಸುರಕ್ಷಿತ ವಿಮಾನ ನಿಲ್ದಾಣ; ಕೆಐಎಗೆ 3ನೇ ಸ್ಥಾನ

ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಮಾನ ಚಾಲನೆ ತರಬೇತಿ ಶಾಲೆ ಆರಂಭವಾಗಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಶಾಲೆಗೆ ಅಗತ್ಯವಿರುವ ಭೂಮಿಯನ್ನು ಲೀಸ್‌ಗೆ ನೀಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ವಿಮಾನ ಓಡಿಸುವ ರಾಜ್ಯದ ಯುವಕ/ಯುವತಿಯರ ಕನಸಿಗೆ ರೆಕ್ಕೆ ಬಂದಂತಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ; 164 ಕೋಟಿ ಹೆಚ್ಚುವರಿ ಅನುದಾನ ಶಿವಮೊಗ್ಗ ವಿಮಾನ ನಿಲ್ದಾಣ; 164 ಕೋಟಿ ಹೆಚ್ಚುವರಿ ಅನುದಾನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಲಬುರಗಿ, ಬೆಳಗಾವಿ, ಜಲಗಾಂವ್, ಖಜುರಾಹೊ, ಲೀಲಾಬರಿ ಹಾಗೂ ಸೇಲಂ ಜಿಲ್ಲೆಗಳಲ್ಲಿ ಹೊಸದಾಗಿ ವಿಮಾನ ಚಾಲನೆ ತರಬೇತಿ ಶಾಲೆಯನ್ನು ಆರಂಭಿಸಲಿದೆ.

ರಾಯಚೂರು ವಿಮಾನ ನಿಲ್ದಾಣದ ಕನಸಿಗೆ ಮರುಜೀವ ರಾಯಚೂರು ವಿಮಾನ ನಿಲ್ದಾಣದ ಕನಸಿಗೆ ಮರುಜೀವ

ಅಂತರಾಷ್ಟ್ರೀಯ ಮಟ್ಟದ ಶಾಲೆಗಳು

ಅಂತರಾಷ್ಟ್ರೀಯ ಮಟ್ಟದ ಶಾಲೆಗಳು

ರಾಜ್ಯ ಸರ್ಕಾರಗಳು ಭೂಮಿಯನ್ನು ಗುತ್ತಿಗೆ ನೀಡಿದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಶಾಲೆಗಳನ್ನು ಆರಂಭಿಸಲು ಟೆಂಡರ್ ಕರೆಯಲಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತರಬೇತಿ ಸಂಸ್ಥೆಗಳಿಗೆ ಶಾಲೆಗಳನ್ನು ಆರಂಭಿಸಲು ಆಹ್ವಾನವನ್ನು ನೀಡಲಿದೆ.

ಪೈಲೆಟ್‌ಗಳ ಕೊರತೆ

ಪೈಲೆಟ್‌ಗಳ ಕೊರತೆ

ಭಾರತದ ವಿಮಾನಯಾನ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತಿದೆ. ಮುಂದಿನ 5 ವರ್ಷಗಳಲ್ಲಿ 9,488 ಪೈಲೆಟ್ ಉದ್ಯೋಗಗಳು ಸೃಷ್ಟಿಯಾಗಲಿವೆ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಈಗಾಗಗಲೇ ಪೈಲೆಟ್‌ಗಳ ಕೊರತೆ ಎದುರಿಸುತ್ತಿವೆ. ವಿಮಾನ ಚಾಲನೆ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಯುವಕ/ಯುವತಿಯರು ಪೈಲೆಟ್ ಆಗಬಹುದಾಗಿದೆ.

ಕರ್ನಾಟಕದಲ್ಲಿ 2 ಶಾಲೆ

ಕರ್ನಾಟಕದಲ್ಲಿ 2 ಶಾಲೆ

ಕರ್ನಾಟಕದಲ್ಲಿ 2 ವಿಮಾನ ಚಾಲನೆ ತರಬೇತಿ ಶಾಲೆ ಆರಂಭವಾಗಲಿದೆ. ಇದರಿಂದಾಗಿ ಕಲಬುರಗಿ, ಬೆಳಗಾವಿ ಮಾತ್ರವಲ್ಲ ಇತರ ಜಿಲ್ಲೆಗಳು ಮತ್ತು ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಯುವಕ/ಯುವತಿಯರಿಗೆ ತರಬೇತಿ ಪಡೆಯಲು ಅನುಕೂಲವಾಗಲಿದೆ. ಪ್ರಸ್ತುತ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ತರಬೇತಿ ಶಾಲೆ ಇದೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada
ಹಿಂದೆಯೂ ಪ್ರಯತ್ನ ನಡೆದಿತ್ತು

ಹಿಂದೆಯೂ ಪ್ರಯತ್ನ ನಡೆದಿತ್ತು

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಬೇಕು ಎಂಬ ಬೇಡಿಕೆ ಹಿಂದೆಯೇ ಇತ್ತು. ಸುಮಾರು 800 ಎಕರೆ ಪ್ರದೇಶದಲ್ಲಿ ರಾಜ್ಯ ಸರ್ಕಾರವೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದೆ. ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಬಹುದು ಎಂದು ಹಿಂದಯೇ ಹೇಳಿತ್ತು.

English summary
Ministry of civil aviation approved to set up two flying school in Karnataka. School will come up in Belagavi and Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X