ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಇನ್ನೂ 3 ವಿಮಾನ ನಿಲ್ದಾಣ ಸ್ಥಾಪನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಇನ್ನೂ ಮೂರು ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಕೆಲವೇ ದಿನಗಳ ಹಿಂದೆ ಲೋಕಾರ್ಪಣೆಗೊಂಡಿವೆ.

ರಾಜ್ಯದಲ್ಲಿ ಮೂರು ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪ್ರಾಥಮಿಕ ಒಪ್ಪಿಗೆ ಸಿಕ್ಕಿದೆ. ಭಾರತೀಯ ನೌಕಾಪಡೆ ಅಂಕೋಲಾ ಸಮೀಪದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ

Karnataka To Get 3 More Airports

ಕರ್ನಾಟಕದಲ್ಲಿ ಹೊಸದಾಗಿ ಹಾಸನ, ಶಿವಮೊಗ್ಗ ಮತ್ತು ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಗಳಾದ ಬಳಿಕ ವೇಗ ಸಿಕ್ಕಿದೆ.

 ಕೆಂಪೇಗೌಡ ವಿಮಾನ ನಿಲ್ದಾಣದಂತೆ ಕಲಬುರಗಿ ವಿ. ನಿಲ್ದಾಣದ ಅಭಿವೃದ್ದಿ: ಕಪಿಲ್ ಮೋಹನ್ ಕೆಂಪೇಗೌಡ ವಿಮಾನ ನಿಲ್ದಾಣದಂತೆ ಕಲಬುರಗಿ ವಿ. ನಿಲ್ದಾಣದ ಅಭಿವೃದ್ದಿ: ಕಪಿಲ್ ಮೋಹನ್

ಈ ಮೂರು ವಿಮಾನ ನಿಲ್ದಾಣಗಳು ಪೂರ್ಣಗೊಂಡರೆ ಬೆಂಗಳೂರು ಹೊರತು ಪಡಿಸಿ ರಾಜ್ಯದ ಹೊರ ಜಿಲ್ಲೆಗಳಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ.

ಕಲಬುರಗಿ-ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ ಕಲಬುರಗಿ-ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ

ಹಾಸನ ವಿಮಾನ ನಿಲ್ದಾಣಕ್ಕೆ 592 ಕೋಟಿ, ವಿಜಯಪುರ ವಿಮಾನ ನಿಲ್ದಾಣಕ್ಕೆ 150 ಕೋಟಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 39 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಮೂರು ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ.

ಅಂಕೋಲಾ ಸಮೀಪದಲ್ಲಿ ಭಾರತೀಯ ನೌಕಾಪಡೆ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಿದೆ. ಇದಕ್ಕಾಗಿ ನೌಕಾಪಡೆ ಜಾಗವನ್ನು ಖರೀದಿ ಮಾಡಿದೆ. ಬೀದರ್ ಮಾದರಿಯಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.

English summary
Karnataka government will build 3 more airports in the state. Shivamogga, Vijayapura and Hassan airport get principle approval from aviation ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X