ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು, ಮೈಸೂರು, ಧಾರವಾಡದಲ್ಲಿ ಐಟಿ ಪಾರ್ಕ್ : ಪ್ರಿಯಾಂಕ್ ಖರ್ಗೆ

ಕರ್ನಾಟಕದ ಎರಡನೇ ಸ್ತರದ ನಗರಗಳಾದ ಮಂಗಳೂರು, ಮೈಸೂರು, ಧಾರವಾಡದಲ್ಲಿ ಶೀಘ್ರವೇ ಐಟಿ/ಬಿಟಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 24: ಮಂಗಳೂರು- ಮೈಸೂರು, ಧಾರವಾಡದಂಥ ಎರಡನೇ ಸ್ತರದ ನಗರಗಳಲ್ಲಿ ಶೀಘ್ರವಾಗಿ ಐಟಿ, ಬಿಟಿ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳುವದಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಮೊಹಿದ್ದೀನ್ ಬಾವಾ ಅವರು ಕೇಳಿದ ಪ್ರಶ್ನೆಗೆ ಸಚಿವ ಖರ್ಗೆ ಉತ್ತರಿಸಿದರು. ಬೆಂಗಳೂರನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಐಟಿ ಉದ್ಯಮ ಬೆಳೆಸಿದರೆ ಸಾಲದು. ಮಂಗಳೂರಿನಂಥ 2ನೇ ಸ್ತರದ ನಗರಗಳಲ್ಲೂ ಐಟಿ ಪಾರ್ಕ್ ಸ್ಥಾಪಿಸಬೇಕು. ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದಿಂದ ನಗರಾಭಿವೃದ್ಧಿಗೆ ಮುಂದಾಗಬೇಕು. [ಸಿದ್ದು ಬಜೆಟಿನಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಮತ್ತೆ ನಿರಾಶೆ]

Karnataka's tier 2, 3 cities to get IT/BT parks in : Minister Priyank Kharge

ಐಟಿ ಪಾರ್ಕಿಗೆ ಬಂಡವಾಳ ಹೂಡಲು ಬಹಳಷ್ಟು ಉದ್ಯಮಿಗಳು ಮುಂದೆ ಬಂದಿದ್ದಾರೆ. ಆದರೆ, ಅಗತ್ಯ ಮೂಲಸೌಲಭ್ಯವಿಲ್ಲದೆ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಾಲುತ್ತಿಲ್ಲ ಎಂದು ಶಾಸಕ ಬಾವಾ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಭಿವೃದ್ಧಿ ವಿಷಯದಲ್ಲಿ ಏನೆಲ್ಲಾ ಸಾಧ್ಯವೋ ಅಷ್ಟನ್ನು ಸರ್ಕಾರ ಮಾಡುತ್ತದೆ. ಬೆಂಗಳೂರಿನಂತೆ ಇತರ ಮೈಸೂರು, ಮಂಗಳೂರು, ಧಾರವಾಡ ನಗರಗಳಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.

ಆಯಾ ನಗರಗಳ ಸ್ವರೂಪಕ್ಕೆ ಅನುಗುಣವಾಗಿ ಐಟಿ ಪಾರ್ಕ್ ವಿನ್ಯಾಸಗೊಳಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಐಟಿ ಪಾರ್ಕ್‍ಗಳನ್ನು ಅಭಿವೃದ್ದಿ ಪಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

English summary
Karnataka' tier 2, 3 cities like Mangaluru, Mysuru, Dharwad will soon have IT/BT parks said Minister Priyank Kharge. He was replying to a query from Congress member Moinuddin Bava during question hour in the Assembly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X