ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮೀಜಿಗಳ ಕೆಲಸ ಆಶೀರ್ವಚನ ಮಾಡುವುದು, ಬ್ಲಾಕ್ ಮೇಲ್ ಮಾಡೋದಲ್ಲಾ

|
Google Oneindia Kannada News

ಅಸಲಿಗೆ, ಬಿಜೆಪಿಯವರು ಪೀಠಾಧಿಪತಿಗಳಿಗೆ ಮಣೆಹಾಕಿದಷ್ಟು ಬೇರೆ ಪಕ್ಷದವರು ಹಾಕಿದ ಉದಾಹರಣೆಗಳು ಸಿಗುವುದು ಕಮ್ಮಿ. ಅದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಒಂದು ಕೈಮೇಲೆಂದೇ ಹೇಳಬಹುದು.

ತಾವು ಪ್ರಬಲ ಲಿಂಗಾಯತ ಸಮುದಾಯದವನ್ನು ಪ್ರತಿನಿಧಿಸಿದರೂ, ತಮ್ಮದೇ ಸಮುದಾಯದ ಸ್ವಾಮೀಜಿಗಳ ಜೊತೆ ಮಾತ್ರ ಯಡಿಯೂರಪ್ಪನವರು ಒಡನಾಟ ಹೊಂದದೇ, ನಾಡಿನ ಎಲ್ಲಾ ಸ್ವಾಮೀಜಿಗಳನ್ನು ವಿಶೇಷ ಆದರದಿಂದಲೇ ಕಂಡವರು.

ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?

ಈ ಕಾರಣಕ್ಕಾಗಿಯೋ ಏನೋ, ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ, ಸ್ವಾಮೀಜಿಗಳ ರಾಜಕೀಯ ರಂಗಪ್ರವೇಶ ಅವಶ್ಯಕತೆಗಿಂತ ಹೆಚ್ಚೇ ಆಗುತ್ತಿದೆ. ಕೆಲವೊಮ್ಮೆ, ಸರ್ವಸಂತ ಪರಿತ್ಯಾಗಿಗಳಾದ ಪೀಠಾಧಿಪತಿಗಳ ಕೆಲಸ ಧಾರ್ಮಿಕ ಕ್ಷೇತ್ರದಲ್ಲೋ, ಅಥವಾ ರಾಜಕೀಯ ರಂಗದಲ್ಲೋ ಎನ್ನುವಷ್ಟರ ಮಟ್ಟಿಗೆ, ಸ್ವಾಮೀಜಿಗಳ ಮಧ್ಯಪ್ರವೇಶ/ಹಸ್ತಕ್ಷೇಪ ಹೆಚ್ಚಾಗುತ್ತಿದೆ.

ಶಿರೂರು, ಪೇಜಾವರ ಶ್ರೀಗಳು ಇಲ್ಲದ ಉಡುಪಿ ಕೃಷ್ಣಮಠ: ಕೃಷ್ಣ..ಕೃಷ್ಣಾ..ಶಿರೂರು, ಪೇಜಾವರ ಶ್ರೀಗಳು ಇಲ್ಲದ ಉಡುಪಿ ಕೃಷ್ಣಮಠ: ಕೃಷ್ಣ..ಕೃಷ್ಣಾ..

ಎಲ್ಲಾ ಸ್ವಾಮೀಜಿಗಳೂ ಅವರವರ ಸಮುದಾಯದವರನ್ನು ಸಚಿವರನ್ನಾಗಿ ಮಾಡಲು ಶಿಫಾರಸು ಮಾಡುತ್ತಾ ಹೊರಟರೆ, ಅರ್ಹತೆಯ ಆಧಾರದ ಮೇಲೆ ಅಥವಾ ಉತ್ತಮವಾಗಿ ಖಾತೆ ನಿಭಾಯಿಸಬಲ್ಲ ಜನಪ್ರತಿನಿಧಿಗಳು ಮೂಟೆ ಹೊರಬೇಕಾ ಎನ್ನುವುದನ್ನು ಸ್ವಾಮೀಜಿಗಳಾದವರು ಅರಿಯದೇ ಹೋದರೆ ಹೇಗೆ?

ವಾಲ್ಮೀಕಿ ಪೀಠದ ಸ್ವಾಮೀಜಿಗಳು

ವಾಲ್ಮೀಕಿ ಪೀಠದ ಸ್ವಾಮೀಜಿಗಳು

ವಾಲ್ಮೀಕಿ ಪೀಠದ ಸ್ವಾಮೀಜಿಗಳು ತಮ್ಮ ಸಮುದಾಯದ ಇಬ್ಬರಲ್ಲಿ ಒಬ್ಬರಿಗೆ (ರಮೇಶ್ ಜಾರಕಿಹೊಳಿ/ಶ್ರೀರಾಮುಲು) ಡಿಸಿಎಂ ಹುದ್ದೆ ಕೊಡಬೇಕೆಂದು ಒತ್ತಡ ಹೇರುತ್ತಿದ್ದಾರೆ. "ಮುಖ್ಯಮಂತ್ರಿಗಳಿಗೆ ಸರಿಯಾಗಿ ಉಗಿದಿದ್ದೇನೆ" ಎನ್ನುವ ಮಾತನ್ನೂ ಹೇಳಿದ್ದಾರೆ.

ಪಂಚಮಶಾಲಿ ಪೀಠದ ಶ್ರೀಗಳ ಸರದಿ

ಪಂಚಮಶಾಲಿ ಪೀಠದ ಶ್ರೀಗಳ ಸರದಿ

ವಾಲ್ಮೀಕಿ ಪೀಠದ ಶ್ರೀಗಳ ನಂತರ, ಈಗ ಪಂಚಮಶಾಲಿ ಪೀಠದ ಶ್ರೀಗಳ ಸರದಿ. ವೇದಿಕೆಯಲ್ಲೇ "ನಮ್ಮ ಸಮುದಾಯ ನಿಮ್ಮ ಕೈಬಿಡಲಿದೆ" ಎನ್ನುವ ಬೆದರಿಕೆಯನ್ನು ಹಾಕಿದ್ದಾರೆ. ಇದರಿಂದ ಸಹಜವಾಗಿ ಯಡಿಯೂರಪ್ಪನವರು ಆಕ್ರೋಶ ಹೊರಹಾಕಿದ್ದಾರೆ. ವೇದಿಕೆಯಲ್ಲಿ ಪಕ್ಕದಲ್ಲೇ ಸುತ್ತೂರು ಮಠದ ಶ್ರೀಗಳು ಗಾಂಭೀರ್ಯತೆಯಿಂದ ಆಸೀನರಾಗಿದ್ದಾಗ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳು ಹಿರಿತನಕ್ಕಾದರೂ ಬೆಲೆಕೊಡಬಾರದೇ ಎನ್ನುವ ಪ್ರಶ್ನೆ ಕಾಡುವುದು ಸಹಜ.

ನಮ್ಮ ನಾಡು ಅದೆಷ್ಟು ಗೌರವಯುತ ಶ್ರೀಗಳನ್ನು ಕಂಡಿದೆ

ನಮ್ಮ ನಾಡು ಅದೆಷ್ಟು ಗೌರವಯುತ ಶ್ರೀಗಳನ್ನು ಕಂಡಿದೆ

ನಮ್ಮ ನಾಡು ಅದೆಷ್ಟು ಗೌರವಯುತ ಶ್ರೀಗಳನ್ನು ಕಂಡಿದೆ. ಲಿಂಗ್ಯಕ್ಯರಾದ ಸಿದ್ದಗಂಗಾ ಮಠದ ಮತ್ತು ಆದಿಚುಂಚನಗಿರಿ ಮಠದ ಹಿರಿಯ ಶ್ರೀಗಳಾಗಲಿ, ಕೃಷ್ಣೈಕ್ಯರಾದ ಪೇಜಾವರ ಮಠದ ಹಿರಿಯ ಶ್ರೀಗಳಾಗಲಿ, ಎಂದಾದರೂ ನೇರವಾಗಿ (ಆಫ್ ದಿ ರೆಕಾರ್ಡ್ ಗೊತ್ತಿಲ್ಲ) ಅವರಿಗೆ ಸಚಿವ ಸ್ಥಾನಕೊಡಿ, ಇವರಿಗೆ ಕೊಡಬೇಡಿ ಎಂದು ಸೂಚಿಸಿದ ಉದಾಹರಣೆಗಳಿವೆಯಾ?

ಧಾರ್ಮಿಕ ಪೀಠಕ್ಕೂ, ರಾಜಕೀಯ ರಂಗಕ್ಕೂ ವ್ಯತ್ಯಾಸವೇನಿದೆ

ಧಾರ್ಮಿಕ ಪೀಠಕ್ಕೂ, ರಾಜಕೀಯ ರಂಗಕ್ಕೂ ವ್ಯತ್ಯಾಸವೇನಿದೆ

ಹೀಗಿರುವಾಗ, ಪೀಠಾಧಿಪತಿಗಳು ತಮ್ಮತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವುದನ್ನು ಬಿಟ್ಟು, ರಾಜಕೀಯಕ್ಕೆ ತಲೆಹಾಕುತ್ತಾ ಹೋದರೆ, ಧಾರ್ಮಿಕ ಪೀಠಕ್ಕೂ, ರಾಜಕೀಯ ರಂಗಕ್ಕೂ ವ್ಯತ್ಯಾಸವೇನಿದೆ. ತಮ್ಮ ಸಮುದಾಯ/ಧರ್ಮಕ್ಕೆ ಅಪಚಾರವಾದಾಗ ಎದ್ದುನಿಲ್ಲಲಿ. ಅದು ಬಿಟ್ಟು, ಅವರನ್ನು ಸಚಿವರನ್ನಾಗಿ ಮಾಡಿ, ಇವರಿಗೆ ಇಂತದ್ದೇ ಖಾತೆಯನ್ನು ನೀಡಿ ಎಂದು ಶಿಫಾರಸು ಮಾಡುತ್ತಾ ಹೋದರೆ, ಧಾರ್ಮಿಕ ಪೀಠ ಗೌರವ ಉಳಿಸಿಕೊಳ್ಳುತ್ತಾ ಎನ್ನುವ ಸಂಶಯ ಕಾಡದೇ ಇರುತ್ತಾ?

ಮುಖ್ಯಮಂತ್ರಿಗಳು ನಡೆದುಕೊಂಡ ರೀತಿಯೂ ಅಷ್ಟೇ ಸರಿ

ಮುಖ್ಯಮಂತ್ರಿಗಳು ನಡೆದುಕೊಂಡ ರೀತಿಯೂ ಅಷ್ಟೇ ಸರಿ

ಮಂಗಳವಾರ (ಜ 14) ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವೇದಿಕೆ ಕಾರ್ಯಕ್ರಮದಲ್ಲಿ ಬೆದರಿಕೆ ಹಾಕಿದ ರೀತಿ ಸರಿಯೆಂದಾದರೆ, ಮುಖ್ಯಮಂತ್ರಿಗಳು ನಡೆದುಕೊಂಡ ರೀತಿಯೂ ಅಷ್ಟೇ ಸರಿ.

ಸಂಪುಟ ವಿಸ್ತರಣೆಗೆ ದೆಹಲಿಯಿಂದ ಸೂಕ್ತ ಪ್ರತಿಕ್ರಿಯೆ ಬರುತ್ತಿಲ್ಲ

ಸಂಪುಟ ವಿಸ್ತರಣೆಗೆ ದೆಹಲಿಯಿಂದ ಸೂಕ್ತ ಪ್ರತಿಕ್ರಿಯೆ ಬರುತ್ತಿಲ್ಲ

ಯಡಿಯೂರಪ್ಪನರದ್ದು ಮುಳ್ಳಿನ ನಡಿಗೆ ಎನ್ನುವುದು ರಾಜಕೀಯ ಅರ್ಥವಾಗುವ ಎಲ್ಲರಿಗೂ ಗೊತ್ತಿರುವ ವಿಚಾರ. ಸಂಪುಟ ವಿಸ್ತರಣೆಗೆ ಅವರು ಎಷ್ಟು ಪ್ರಯತ್ನ ಪಟ್ಟರೂ, ದೆಹಲಿಯಿಂದ ಸೂಕ್ತ ಪ್ರತಿಕ್ರಿಯೆ ಬರುತ್ತಿಲ್ಲ ಎನ್ನುವುದು ಜನಸಾಮಾನ್ಯರಿಗೇ ತಿಳಿದಿರುವಾಗ, ಪೀಠಾಧಿಪತಿಗಳಿಗೆ ಇವರ ಒತ್ತಡ ಅರ್ಥವಾಗುವುದಿಲ್ಲವೇ? ಅರ್ಥವಾಗದಿದ್ದರೂ ಪರವಾಗಿಲ್ಲ, ಇನ್ನಾದರೂ, ತಮ್ಮತಮ್ಮ ಧಾರ್ಮಿಕ ಚಟುವಟಿಕೆಗಳು, ಧರ್ಮ ಪ್ರಚಾರ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲಿ ಎನ್ನುವುದು ಅವರವರ ಭಕ್ತರ ಅಥವಾ ಭಕ್ತರಲ್ಲದೇ ಇರುವವರದ್ದೂ ಸವಿನಯ ಮನವಿ.

English summary
Karnataka Swamijis Should Bless Not Threatening: Incident Happened In Davangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X