ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್: ಕರ್ನೂಲ್‌ನಲ್ಲಿ ಸಿಲುಕಿದ 150 ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 28: ಕೊರೊನಾ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಾರ್ಚ್‌ 14 ರವೆರೆಗೆ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಜನ ಹೊರಗೆ ಬರಲಾರದಂತೆ ಪರದಾಡುತ್ತಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಂಧ್ರಪ್ರದೇಶದ ಕರ್ನೂಲ್‌ಗೆ ಬ್ಯಾಂಕಿಂಗ್ ಪರೀಕ್ಷೆಯ ಕೋಚಿಂಗ್ ಪಡೆದುಕೊಳ್ಳಲು ತೆರಳಿದ್ದ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನೂಲ್‌ನ ಕೋಚಿಂಗ್ ಸೆಂಟರ್‌ನಲ್ಲಿ ಸಿಲುಕಿಕೊಂಡು ಮನೆಗೆ ಹೋಗಲಾರದಂತೆ ಕಷ್ಟ ಅನುಭವಿಸುತ್ತಿದ್ದಾರೆ.

ಕೊರೊನಾ ವಿರುದ್ಧ ಕರ್ನಾಟಕದ ಹೋರಾಟ; ಮಾಹಿತಿ ಪಡೆದ ಜೆ ಪಿ ನಡ್ಡಾಕೊರೊನಾ ವಿರುದ್ಧ ಕರ್ನಾಟಕದ ಹೋರಾಟ; ಮಾಹಿತಿ ಪಡೆದ ಜೆ ಪಿ ನಡ್ಡಾ

ಈ ಕುರಿತು ಗ್ರುಪ್ ವಿಡಿಯೋ ಮಾಡಿ, ''ನಮ್ಮನ್ನು ಇಲ್ಲಿಂದ ನಮ್ಮ ಮನೆಗೆ ಕಳಿಹಿಸಲು ಕರ್ನಾಟಕ ಸರ್ಕಾರ ಸಹಾಯ ಮಾಡಬೇಕು. ನಾವೆಲ್ಲ ಕರ್ನಾಟಕದ ದೂರದ ಜಿಲ್ಲೆಗಳಿಂದ ಬಂದಿದ್ದೇವೆ. ಮನೆಗೆ ಹೋಗಲು ವಾಹನ ಸೌಕರ್ಯ ಸಿಗುತ್ತಿಲ್ಲ. ಸರಿಯಾಗಿ ಊಟವು ಸಿಗುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ವಿಶೇಷ ಆಸಕ್ತಿವಹಿಸಿ ಮನೆಗೆ ಕಳಿಹಿಸಿ ಕೊಡಬೇಕು'' ಎಂದು ಮನವಿ ಮಾಡಿದ್ದಾರೆ.

Karnataka Students Stuck In Kurnool Ahead Of Coronavirus Lockdown

ಈ ಕುರಿತು ಒನ್‌ ಇಂಡಿಯಾದೊಂದಿಗೆ ಮಾತನಾಡಿದ ಹರಿಶ್ ರಾಜ್ ಎನ್ನುವ ಸಂತ್ರಸ್ತ ವಿದ್ಯಾರ್ಥಿ, ''ನಾವು ಇಲ್ಲಿ ನಿಜಕ್ಕೂ ಕಷ್ಟದಲ್ಲಿ ಸಿಲುಕಿದ್ದೇವೆ. ನಮ್ಮ ಬಗ್ಗೆ ನಮ್ಮ ಮನೆಯಲ್ಲಿ ಆತಂಕಗೊಂಡಿದ್ದಾರೆ. ಊರಿಗೆ ಹೋಗಲು ವಾಹನ ಸೌಕರ್ಯವಿಲ್ಲ'' ಎಂದು ಅಳಲು ತೋಡಿಕೊಂಡರು. ಕರ್ನಾಟಕ ಸರ್ಕಾರದ ಸಂಬಂಧಿಸಿದವರು ಇತ್ತ ಗಮನ ಹರಿಸಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ ಎನ್ನುವ ಕಳಕಳಿ ನಮ್ಮದಾಗಿದೆ.

English summary
Karnataka Students Stuck In Kurnool Ahead Of Coronavirus Lockdown. more then 150 bank exam coaching students struck in kurnool.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X