ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರು, ಹಿರಿಯ ನಾಗರಿಕರು ಕೆಎಸ್‌ಆರ್‌ಟಿಸಿ ಬಸ್‌ ಹತ್ತುವುದು ಸುಲಭ

|
Google Oneindia Kannada News

ಬೆಂಗಳೂರು, ಜನವರಿ 29: ಅಂಗವಿಕಲರು, ಹಿರಿಯ ನಾಗರಿಕರು ಬಸ್‌ ಏರಲು ಹರಸಾಹಸ ಪಡಬೇಕಾಗಿತ್ತು, ಆದರೆ ಇನ್ನು ಮುಂದೆ ಸುಲಭವಾಗಲಿದೆ. ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತಲು ವ್ಹೀಲ್‌ ಚೇರ್, ಹಾಗೂ ರ‌್ಯಾಂಪ್‌ ಒದಗಿಸಲು ನಿರ್ಧರಿಸಲಾಗಿದೆ.

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಬಸ್ ನಿಲ್ದಾಣಗಳಲ್ಲಿ ಬರುವ ವಿಕಲಾಂಗ ಚೇತನರು ಹಾಗೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೃತಕ ಮೆಟ್ಟಿಲಗಳನ್ನು ಒಳಗೊಂಡ ಲೋಹದ ಮೆಟ್ಟಿಲುಗಳನ್ನು ಕೂಡ ಅಳವಡಿಸಲಾಗುತ್ತಿದೆ.

ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

ಜಿಲ್ಲಾ ಮಟ್ಟದ ಬಸ್ ನಿಲ್ದಾಣಗಳಲ್ಲಿ 2 ವೀಲ್ ಚೇರ್ ಮತ್ತು ಎರಡು ಮೊಬೈಲ್ ರ‌್ಯಾಂಪ್‌ ಗಳು, ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಒಂದೊಂದು ವೀಲ್ ಚೇರ್ ಮತ್ತು ಮೊಬೈಲ್ ರ‌್ಯಾಂಪ್‌ ಗಳಿರುತ್ತವೆ. ಯಾವುದೇ ಬಸ್ ಗಳಲ್ಲಿ 24 ಮತ್ತು 25 ಸೀಟುಗಳನ್ನು ಮೀಸಲಿಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Karnataka state transport body adds ramps in buses to make entry easy

ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎಸ್ಆರ್ ಟಿಸಿ, ಎನ್ ಡಬ್ಲ್ಯು ಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಅಧಿಕಾರಿಗಳು ಈ ಸಂಬಂಧ ಕಳೆದ ಜನವರಿ 23ರಂದು ಎಲ್ಲಾ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್ ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಲೋಹದ ರ್ಯಾಂಪ್ ಗಳು ಮತ್ತು ವೀಲ್ ಚೇರ್ ಗಳನ್ನು ಬಸ್ ಟರ್ಮಿನಲ್ ಗಳಲ್ಲಿ ಒದಗಿಸಬೇಕೆಂದು ಸೂಚಿಸಲಾಗಿದೆ. ಪ್ರಸ್ತುತ ಈ ಸೌಲಭ್ಯ ಹೊಸಪೇಟೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಗಳಲ್ಲಿ ಲಭ್ಯವಾಗುತ್ತಿದೆ. ಬಳಿಕ ಎಲ್ಲಾ ಬಸ್‌ ನಿಲ್ದಾಣಗಳಲ್ಲಿ ಆರಂಭಿಸಲಾಗುತ್ತದೆ.

English summary
In its effort to make buses more friendly for senior citizens and the differently-abled, Karnataka State Road Transport Corporation (KSRTC) has decided to provide mobile ramps and wheelchairs at bus terminuses across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X