ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ರಾಜ್ಯದಲ್ಲಿ ತೈಲ ದುಬಾರಿ

|
Google Oneindia Kannada News

ಬೆಂಗಳೂರು, ಜನವರಿ 4: ಸೆಪ್ಟೆಂಬರ್ ತಿಂಗಳಿನಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯನ್ನು ಕಡಿತ ಮಾಡಿದ್ದ ರಾಜ್ಯ ಸರ್ಕಾರ, ಈಗ ತೆರಿಗೆ ಏರಿಕೆ ಮಾಡಿದೆ.

ಇದರಿಂದ ತೈಲ ಬೆಲೆಯ ನಿರಂತರ ಇಳಿಕೆಯ ಖುಷಿಯಲ್ಲಿದ್ದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ.

ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ

ಪೆಟ್ರೋಲ್ ಮೇಲಿನ ತೆರಿಗೆಯನ್ನು 3.25% ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 3.27% ರಷ್ಟು ಹೆಚ್ಚಳ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಿಂದ ಶೇ 28.75 ರಷ್ಟಿದ್ದ ಪೆಟ್ರೋಲ್ ಮೇಲಿನ ತೆರಿಗೆ ಶೇ 32ಕ್ಕೆ ಏರಿಕೆಯಾಗಿದೆ. ಡೀಸೆಲ್ ಮೇಲಿನ ತೆರಿಗೆ ಶೇ 17.73ರಿಂದ ಶೇ 21ಕ್ಕೆ ಹೆಚ್ಚಳವಾಗಿದೆ.

karnataka state petrol diesel tax rate hike hd kumaraswamy

ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 70.84ಕ್ಕೆ ತಲುಪಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 64.66 ರೂ. ಇದೆ.

ಪೆಟ್ರೋಲ್ ಬೆಲೆ 80 ರೂ. ದಾಟಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೈಲ ಮಾರಾಟದ ತೆರಿಗೆಯನ್ನು 2 ರೂ.ನಷ್ಟು ಇಳಿಸಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು.

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದ ಕೊಡುಗೆ: ಎಲ್ ಪಿಜಿ ದರ ಇಳಿಕೆಹೊಸ ವರ್ಷಕ್ಕೆ ಕೇಂದ್ರ ಸರ್ಕಾರದ ಕೊಡುಗೆ: ಎಲ್ ಪಿಜಿ ದರ ಇಳಿಕೆ

2018ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಎರಡು ತಿಂಗಳ ಬಳಿಕ ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಕುಮಾರಸ್ವಾಮಿ, ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆಯನ್ನು ಶೇ 2ರಷ್ಟು ಹೆಚ್ಚಿಸಿದ್ದರು. ಪೆಟ್ರೋಲ್ ಮೇಲಿನ ತೆರಿಗೆ ಶೇ 30 ರಿಂದ ಶೇ 32ಕ್ಕೆ ಹಾಗೂ ಡೀಸೆಲ್ ತೆರಿಗೆ ಶೇ 19ರಿಂದ ಶೇ 21ಕ್ಕೆ ಏರಿಕೆಯಾಗಿತ್ತು.

English summary
Karnataka state government has increased Tax on Petrol from 28.75% to 32% and diesel to 21% from 17.73% on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X