ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮುಕ್ತ ವಿವಿ ಪ್ರವೇಶಕ್ಕೆ ಅಕ್ಟೋಬರ್ 1 ಕೊನೆ ದಿನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ಶೈಕ್ಷಣಿಕ ಪ್ರವೇಶಾತಿ ನಡೆಯುತ್ತಿದೆ. 200 ರೂ. ದಂಡ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ 1, 2018 ಕೊನೆಯ ದಿನವಾಗಿದೆ.

ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ

ಬಿಎ/ಬಿಕಾಂ, ಎಂಎ/ಎಂಕಾಂ, ಎಂಸಿಜಿ, ಬಿಎಲ್ಐಎಸ್ಸಿ, ಎಂಎಲ್ಐಎಸ್ಸಿ ಮತ್ತು ಎಂಎಸ್ಸಿ (ಪರಿಸರ ವಿಜ್ಞಾನ) ಕೋರ್ಸ್‌ಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಪ್ರವೇಶಾತಿಗೆ 200 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು 1/10/2018 ಕೊನೆಯ ದಿನವಾಗಿದೆ.

ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು? ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?

ಬಿಎ/ಬಿಕಾಂ ಪದವಿಗೆ ಪ್ರವೇಶಾತಿ ಶುಲ್ಕ ರೂ. 4600 ಮತ್ತು ಎಂಎ/ಎಂಕಾಂ ಪದವಿಗೆ ಪ್ರವೇಶಾತಿ ಶುಲ್ಕ 6100 ರೂ.ಗಳು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರ್ವತ್ರಿಕ ರಜೆ ದಿನಗಳಾದ (ಸೆಪ್ಟೆಂಬರ್ 23, ಸೆಪ್ಟೆಂಬರ್ 30) ಪ್ರಾದೇಶಿಕ ಕೇಂದ್ರದಲ್ಲಿ ಶುಲ್ಕವನ್ನು ಪಾವತಿ ಮಾಡಿಕೊಂಡು ರಶೀದಿ ನೀಡಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತದೆ.

Karnataka State Open University October 1 last date for admission

ವಿಶೇಷ ಸೂಚನೆ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿದ ಸಿಹಿ ಸುದ್ದಿ ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿದ ಸಿಹಿ ಸುದ್ದಿ

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು 03 ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

English summary
Admissions began for the degree course in Karnataka State Open University, Mysore. 1/10/2018 last date for submit application with penalty of Rs. 200.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X