ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರಕಾರದಿಂದ ನಿವೃತ್ತ ಪತ್ರಕರ್ತರಿಗೆ ಮಾಶಾಸನಕ್ಕೆ ಸಿದ್ದತೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಶಾಸನ ನೀಡಲು ಪತ್ರಕರ್ತರ ಮಾಸಾಶನ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಕಾಲಕಾಲಕ್ಕೆ ಸಭೆ ಸೇರಿ ಅರ್ಹ ಫಲಾನುಭವಿಗಳನ್ನು ಮಾಸಾಶನಕ್ಕೆ ಆಯ್ಕೆ ಮಾಡಲಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 22: ರಾಜೀವ್ ಗಾಂಧೀ ಆರೋಗ್ಯ ಭಾಗ್ಯ ಯೋಜನೆ ನಂತರ ಇದೀಗ ವಯೋ ನಿವೃತ್ತಿ ಹೊಂದುವ ಪತ್ರಕರ್ತರಿಗೆ ಮಾಶಾಸನ ನಿಗದಿಪಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಮಿತಿ ರಚಿಸಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಶಾಸನ ನೀಡಲು ಪತ್ರಕರ್ತರ ಮಾಸಾಶನ ಸಮಿತಿಯನ್ನು ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಮಿತಿಯು ಕಾಲಕಾಲಕ್ಕೆ ಸಭೆ ಸೇರಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ.

Karnataka state government appointed members for Journalist Pension Committee

ಈ ಸಮಿತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥರು ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಹಿರಿಯ ಪತ್ರಕರ್ತರ ಸಿದ್ಧಿಕಿ ಅಲ್ದೂರಿ, ನಿವೃತ್ತ ಪತ್ರಕರ್ತರಾದ ಶಾಂತಮ್ಮ, ಹೆಚ್.ಆರ್. ಶ್ರೀಶ, ಮನೋಹರ ಯಡವಟ್ಟಿ ಹಾಗೂ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕ ವೆಂಕಟೇಶ್‍ಮೂರ್ತಿ ಅವರು ಇರಲಿದ್ದಾರೆ. ಇನ್ನು ಸುದ್ದಿ ಮತ್ತು ಪತ್ರಿಕಾ ಶಾಖೆಯ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
The Government of Karnataka has constituted a committee to recommend Pension to Retired Journalists. The body shall identify eligible journalists and recommend names toDepartment of Information And Public Relation. Terms and conditions apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X