ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮುಗಲಭೆ: 175 ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಜೂ. 2: ರಾಜ್ಯದ ವಿವಿಧೆಡೆ ದಾಖಲಾಗಿದ್ದ ಕೋಮುಗಲಭೆಗೆ ಸಂಬಂಧಿಸಿದ 175 ಮೊಕದ್ದಮೆಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. ಆದರೆ ಕೊಲೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿಲ್ಲ. ಅನುಮತಿ ಪಡೆಯದೇ ಪ್ರತಿಭಟನೆ, ಘರ್ಷಣೆಗೆ ಸಂಬಂಧಿಸಿದ ಮೊಕದ್ದಮೆಗಳನ್ನು ಮಾತ್ರ ಹಿಂದಕ್ಕೆ ಪಡೆಯಲಾಗಿದೆ.[ಸೋಮವಾರದ ಸಚಿವ ಸಂಪುಟ ಸಭೆ ತೀರ್ಮಾನಗಳು]

tb jayachandra

ಕೋಮು ಗಲಭೆಗೆ ಪ್ರಚೋದನೆ ನೀಡಿದವರು ಕೆಲವರಾಗಿದ್ದರೂ ನೂರಾರು ಜನ ನ್ಯಾಯಾಲಯಕ್ಕೆ ಅಲೆಯುವಂತೆ ಆಗಿತ್ತು. ಅಮಾಯಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಚಿವ ಇಂಥ ನಿರ್ಧಾರ ಮಾಡಲಾಯಿತು. ಸಚಿವ ಸಂಪುಟ ಮೊಕದ್ದಮೆ ವಾಪಸ್ ಪಡೆದರೂ ಅಂತಿಮವಾಗಿ ಕೋರ್ಟ್ ಮೂಲಕವೇ ಇವು ಇತ್ಯರ್ಥವಾಗಬೇಕಿದೆ ಎಂದು ಜಯಚಂದ್ರ ವಿವರಿಸಿದರು.

ಯಾವ್ಯಾವ ಪ್ರಕರಣಗಳು?
2009ರ ಏಪ್ರಿಲ್‌ ಮತ್ತು ಜುಲೈನಲ್ಲಿ ಮೈಸೂರಿನ ಉದಯಗಿರಿ ಹಾಗೂ ನರಸಿಂಹರಾಜ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೋಮು ಗಲಭೆ ನಡೆದಿತ್ತು. ಮಸೀದಿಯೊಂದರಲ್ಲಿ ಹಂದಿ ಮಾಂಸ ಎಸೆದ ಘಟನೆ ಹಿನ್ನೆಲೆಯಲ್ಲಿ ಒಂದು ಕೋಮು ಗಲಭೆ ನಡೆದಿದ್ದರೆ, ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಕಾರ್ಯಕರ್ತರು ಅಕ್ರಮ ಗುಂಪು ಕಟ್ಟಿಕೊಂಡು ಗರ್ಘಣೆಗೆ ಕಾರಣರಾಗಿತ್ತು.[ಶಿವಮೊಗ್ಗ ಕೋಮುಗಲಭೆಗೆ ನಿಜ ಕಾರಣಗಳು ಏನು?]

ಕರ್ತವ್ಯ ನಿರತ ಪೊಲೀಸರ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ಕಲ್ಲುತೂರಾಟ ನಡೆಸಲಾಗಿತ್ತು. ಎರಡೂ ಗಲಭೆಗಳಿಗೆ ಸಂಬಂಧಿಸಿದಂತೆ ಒಟ್ಟು 40 ಪ್ರಕರಣಗಳನ್ನು ದಾಖಲಿಸಿ 214 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

2010ರಲ್ಲಿ ಶಿವಮೊಗ್ಗ ಮತ್ತು ಹಾಸನದಲ್ಲಿ ನಡೆದ ಕೋಮು ಗಲಭೆ. ಇದಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ದಾಖಲಾಗಿದ್ದ 114 ಮತ್ತು ಹಾಸನದಲ್ಲಿದಾಖಲಾಗಿದ್ದ 21 ಪ್ರಕರಣದ ಅಡಿಯಲ್ಲಿ1400 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು. ಈ ಎಲ್ಲ ಪ್ರಕರಣಗಳನ್ನು ಸಚಿವ ಸಂಪುಟ ಸಭೆ ಹಿಂದಕ್ಕೆ ಪಡೆದಿದೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಕೋಮುಗಲಭೆಗಳು ನಡೆದಿದ್ದವು. ಈಗ ಸರ್ಕಾರಿ ಏಕಾಎಕಿ ಪ್ರಕರಣ ಹಿಂಪಡೆದಿದ್ದು ಏಕಪಕ್ಷೀಯ ನಿರ್ಣಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

English summary
The State cabinet on Monday decided to withdraw 175 cases filed against 1,614 persons relating to communal violence offences in Mysuru in 2009 and Shivamogga and Hassan in 2010. Law Minister T B Jayachandra said the cases were filed when BJP was ruling the state and were filed against members of the Karnataka Forum for Dignity (KFD) and the Popular Front of India (PFI) for allegedly attacking the police in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X