ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2018: ಸಾಲಮನ್ನಾ ಓಕೆ, ಕರಾವಳಿ ನಿರ್ಲಕ್ಷ್ಯಿಸಿದ್ದು ಯಾಕೆ?!

|
Google Oneindia Kannada News

ಬೆಂಗಳೂರು, ಜುಲೈ 05: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರೂ ಆದ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು(ಜುಲೈ 05) ಮಂಡಿಸಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆಸಿ, ನಂತರ ನಂತರ 11:30 ಬಜೆಟ್ ಭಾಷಣ ಆರಂಭಿಸಿದ ಅವರು ಬರೋಬ್ಬರಿ ಒಂದೂ ಮುಕ್ಕಾಲು ಗಂಟೆಯ ಕಾಲ ಭಾಷಣ ಮಾಡಿದರು.

2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಿದ್ದಾರೆ. ಬಜೆಟ್ಟಿನುದ್ದಕ್ಕೂ ಬೆಂಗಳೂರು, ಮಂಡ್ಯ, ಹಾಸನ, ರಾಮನಗರ, ಮೈಸೂರು, ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಬಿಟ್ಟರೆ ಬೇರೆ ಜಿಲ್ಲೆಗಳನ್ನೂ ಕುಮಾರಸ್ವಾಮಿ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷಗಳು ಬಜೆಟ್ ಭಾಷಣದ ಕೊನೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

ಎಚ್ಡಿಕೆ ಬಜೆಟ್ : ರೈತಸ್ನೇಹಿ, ಅಭಿವೃದ್ಧಿ ಪೂರಕ ಆಯವ್ಯಯ ನಿರೀಕ್ಷೆಎಚ್ಡಿಕೆ ಬಜೆಟ್ : ರೈತಸ್ನೇಹಿ, ಅಭಿವೃದ್ಧಿ ಪೂರಕ ಆಯವ್ಯಯ ನಿರೀಕ್ಷೆ

Karnataka State Budget 2018 : LIVE updates and highlights

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಗೂ ಮುನ್ನ ತಮ್ಮ ಪ್ರಣಾಳಿಕೆಗಳಲ್ಲಿ ಜನರಿಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ಭರಪೂರ ಯೋಜನೆಗಳನ್ನು ಘೋಷಿಸುವುದಾಗಿ ಭರವಸೆ ನೀಡಿದ್ದವು. ಆ ಮಾತಿಗೆ ನ್ಯಾಯ ನೀಡಲು ಕುಮಾರಸ್ವಾಮಿ ಯತ್ನಿಸಿದ್ದಾರೆ.

2018-19 ನೇ ಹಣಕಾಸು ವರ್ಷದ ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಿದೆ.

Newest FirstOldest First
1:23 PM, 5 Jul

ಒಂದೂ ಮುಕ್ಕಾಲು ಗಂಟೆಯ ಕಾಲ ಬಜೆಟ್ ಭಾಷಣ ಮಾಡಿದ ಎಚ್ ಡಿ ಕುಮಾರಸ್ವಾಮಿ.
1:20 PM, 5 Jul

ಕರಾವಳಿ ಜಿಲ್ಲೆಗಳಿಗೆ ಬಜೆಟ್ ನಲ್ಲಿ ಏನೂ ಇಲ್ಲ, ವಿಪಕ್ಷಗಳ ಆರೋಪ.
1:18 PM, 5 Jul

ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಇಸ್ರೇಲ್ ಕೃಷಿ ಮೊದಲ ಹಂತದಲ್ಲಿ 5000 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಇಸ್ರೇಲ್
1:17 PM, 5 Jul

ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ವಿಶೇಷ ಪ್ಯಾಕೇಜ್ ಹಾಸನದಲ್ಲಿ ಚನ್ನಪಟ್ಟಣ ಕೆರೆ ಬಳಿ ವಿಹಾರ ಧಾಮ, ಮಕ್ಕಳ ಉದ್ಯಾನವನ, ಕಾರಂಜಿ ನಿರ್ಮಾಣಕ್ಕೆ 36 ಕೋಟಿ ರೂ.
1:15 PM, 5 Jul

ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್​ಗೆ ಶೇ.50ರಷ್ಟು ಹೆಚ್ಚಳ
1:15 PM, 5 Jul

ಧಾರವಾಡದ ಕೃಷಿ ವಿವಿಗೆ 3 ಕೋಟಿ ರೂ.ಅನುದಾನ ರೈತರ ಹೊಲಗಳಿಗೆ ಸೆನ್ಸಾರ್ ಅಳವಡಿಸಲು 5 ಕೋಟಿ ರೂ. ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮಕ್ಕೆ 2 ಕೋಟಿ ರೂ.ಅನುದಾನ
1:12 PM, 5 Jul

ರಾಜ್ಯಾದ್ಯಂತ 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ. ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ 150 ಕೋಟಿ; 5 ಸಾವಿರ ಹೆಕ್ಟೇರ್’ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ ಕಾರವಾರ, ಯಾದಗಿರಿ, ತುಮಕೂರು, ಹಾವೇರಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ. ಮೊದಲು 5 ಲಕ್ಷದವರೆಗೆ ಸಾಲಕ್ಕೆ ಶೂನ್ಯ ಬಡ್ಡಿ; ಅತ್ಯುತ್ತಮ ಗುಣಮಟ್ಟ ಬೀಜ ದೃಡೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ. ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಿಸಲು ಕಾಯಕ.
Advertisement
1:11 PM, 5 Jul

ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆ. ಜೆ.ಪಿ.ನಗರದಿಂದ ಕೆ.ಆರ್.ಪುರಂ 42.75 ಕಿ.ಮೀ, ಟೋಲ್ ಗೇಟ್​ನಿಂದ ಕಡಬಗೆರೆ 12.5 ಕಿ.ಮೀ, ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ, ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ 18.95 ಕಿ.ಮೀ, ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆ 10.6. ಕಿ.ಮೀ ಹಾಗೂ ಇಬ್ಬಲೂರಿನಿಂದ ಕರ್ಮಲ್ ರಾಮ್ 6.67 ಕಿ.ಮೀ, ಒಟ್ಟು 95 ಕಿ.ಮೀ ಮೆಟ್ರೊ ವಿಸ್ತರಣೆಗೆ ಸಮ್ಮತಿ.
1:10 PM, 5 Jul

ಕುಡಿಯುವ ನೀರಿನ ಶುದ್ಧೀಕರಣಕ್ಕೆ ಜಲಧಾರೆ ಯೋಜನೆ ಜಾರಿ. ಜಲಾಶಯಗಳಿಂದ ಕುಡಿಯುವ ನೀರು ಶುದ್ಧೀಕರಣ. ಜಲಧಾರೆ ಯೋಜನೆಗಾಗಿ 53 ಕೋಟಿ ಮೀಸಲು.
1:09 PM, 5 Jul

ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ 3000 ನಿವೇಶನ ಹಂಚಿಕೆಗೆ ಕ್ರಮ.
1:08 PM, 5 Jul

ನಾಲ್ಕು ವರ್ಷದಲ್ಲಿ 2000 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಉದ್ದೇಶ. ಇದರಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ.
1:06 PM, 5 Jul

ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಪ್ರೋತ್ಸಾಹ
Advertisement
1:05 PM, 5 Jul

ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7642 ಕೋಟಿ ರೂ., ಕಂದಾಯ ಇಲಾಖೆಗೆ 7180 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5725 ಕೋಟಿ ರೂ. ಮೀಸಲಿಡಲಾಗಿದೆ.
1:01 PM, 5 Jul

ಲೋಕಪಾವನಿ ನದಿಯಿಂದ ಮಂಡ್ಯಕ್ಕೆ ಕುಡಿಯುವ ನೀರು
12:57 PM, 5 Jul

ಒಟ್ಟು 95 ಕಿ.ಮೀ. ನಮ್ಮ ಮೆಟ್ರೊ ಮಾರ್ಗ ವಿಸ್ತರಣೆ
12:54 PM, 5 Jul

ಲೋಕೋಪಯೋಗಿ ಇಲಾಖೆಗೆ 10200 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ 7993 ಕೋಟಿ ರೂ., ಆರೋಗ್ಯ ಮತ್ತು ಕುಟುಂ ಕಲ್ಯಾಣ ಇಲಾಖೆ ಗೆ 9317 ಕೋಟಿ ರೂ. ನೀಡಲಾಗಿದೆ.
12:51 PM, 5 Jul

ನಗರಾಭಿವೃದ್ಧಿ ಇಲಾಖೆಗೆ 17727 ಕೋಟಿ ರೂ., ಇಂಧನ ಇಲಾಖೆಗೆ 14123 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 11788 ಕೋಟಿ ರೂ. ಮೀಸಲಿಡಲಾಗಿದೆ.
12:49 PM, 5 Jul

ಶಿಕ್ಷಣ ಕ್ಷೇತ್ರಕ್ಕೆ 26581 ಕೋಟಿ ರೂ., ಜಲಸಂಪನ್ಮೂಲ ಇಲಾಖೆಗೆ 18142 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 14449 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗಿದೆ.
12:43 PM, 5 Jul

ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳ ಸ್ಥಾಪನೆ
12:42 PM, 5 Jul

ಬೀದರ್ ನಲ್ಲಿ ಕೃಷಿ ಉತ್ಪನ್ನ ಸಂರಕ್ಷಣಾ ಘಟಕ
12:41 PM, 5 Jul

ಕ್ರೀಡಾ ಸಾಮಗ್ರಿ ಉತ್ಪಾದನೆಗಾಗಿ ತುಮಕೂರಿಗೆ 2000 ಕೋಟಿ ರೂ.
12:40 PM, 5 Jul

65 ವರ್ಷ ವಯಸ್ಸು ಮೀರಿದ ವೃದ್ಧರಿಗೆ ಮಾಸಾಶನ ಹೆಚ್ಚಳ
12:31 PM, 5 Jul

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂ.ಅನುದಾನ
12:29 PM, 5 Jul

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂ.ಅನುದಾನ
12:25 PM, 5 Jul

ಆದಿ ಶಂಕರಾಚಾರ್ಯರ ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ
12:24 PM, 5 Jul

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1 ಕೆಜಿ ಪಾಮ್ ಎಣ್ಣೆ, ರಿಯಾಯತಿ ದರದಲ್ಲಿ ಒಂದು ಕೆಜಿ ತೊಗರಿ ಬೇಳೆ
12:23 PM, 5 Jul

ಅನ್ನಭಾಗ್ಯ ಅಕ್ಕಿ ವಿತರಣೆ 7 ಕೆ.ಜಿ.ಯಿಂದ 5ಕೆ.ಜಿ.ಗೆ ಇಳಿಕೆ
12:22 PM, 5 Jul

31.12.2017 ರ ಒಳಗಿನ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳ ಸುಸ್ಥಿ ಸಾಲಮನ್ನಾ. ಸಾಲಮರುಪಾವತಿ ಮಾಡಿದ್ದ ರೈತರ ಖಾತೆಗಳಿಗೆ ಗರಿಷ್ಠ 25,000 ರೂ.ಗಳನ್ನು ತುಂಬಲಿರುವ ಸರ್ಕಾರ.
12:20 PM, 5 Jul

ವಿವಿಧ ಮಠ ಮಾನ್ಯಗಳಿಗೆ 25 ಕೋಟಿ ರು ಅನುದಾನ
12:19 PM, 5 Jul

ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಅಂದಾಜು ವೆಚ್ಚ 15,285 ಕೋಟಿ ರು.
READ MORE

English summary
Karnataka State Budget 2018-19 : LIVE updates in Kannada. Karnataka chief minister H D Kumaraswamy to present Karnataka Budget on 5th July, 2018. ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕ ಬಜೆಟ್ 2018 ಮಂಡಿಸಲಿದ್ದಾರೆ. ಕ್ಷಣಕ್ಷಣದ ಮಾಹಿತಿ, ಮುಖ್ಯಾಂಶಗಳು ಇಲ್ಲಿವೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X