ಎಸ್ಸೆಸ್ಸೆಲ್ಸಿ ಫಲಿತಾಂಶ ಮುಂದಿನ ವಾರ ಪ್ರಕಟ

Written By:
Subscribe to Oneindia Kannada

ಬೆಂಗಳೂರು, ಮೇ 14: ಎಸ್ ಎಸ್ ಎಲ್ ಸಿ ಫಲಿತಾಂಶ ಮುಂದಿನ ವಾರ ಪ್ರಕಟವಾಗಲಿದೆ, ವದಂತಿಗಳನ್ನು ನಂಬಬೇಡಿ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಗುರುವಾರ ಮೇ 13 ರಂದೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದು ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡಿತ್ತು. ರಾಜ್ಯ ಸರ್ಕಾರ ಮತ್ತು ಪ್ರೌಢ ಶಿಕ್ಷಣ ಮಂಡಳಿ ಯಾವುದೇ ಅಧಿಕೃತ ಆದೇಶ ಹೊರಡಿಸದಿದ್ದರೂ ಇಂಥದ್ದೊಂದು ಸುದ್ದಿ ಹರಿದಾಡಿತ್ತು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೆಲವು ಖಾಸಗಿ ವೆಬ್‌ಸೈಟ್‌ಗಳು ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಹೇಳಿಕೊಂಡಿದ್ದು ಅದನ್ನು ನಂಬಬೇಡಿ ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮನವಿ ಮಾಡಿಕೊಂಡಿದೆ.[ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!]

sslc

ನಿಗದಿಯಂತೆ ಮೇ 13 ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇತ್ತು. ಆದರೆ ಇನ್ನು ಕೆಲ ಪ್ರಕ್ರಿಯೆ ಬಾಕಿ ಇರುವುದರಿಂದ ಮೇ 25ರೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದ್ದಾರೆ.[ತಾಯಿ ಶವ ಮನೆಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಹುಡುಗಿ]

ಫಲಿತಾಂಶ ಪ್ರಕಟ ಹೇಗೆ? ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ದಿನಾಂಕವನ್ನು ಬಹಿರಂಗ ಮಾಡಬೇಕಾಗುತ್ತದೆ. ಇದಾದ ಮೇಲೆ ಮೊದಲಿಗೆ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟ ಮಾಡಲಾಗುತ್ತದೆ. ನಂತರ ಎಲ್ಲಾ ಪ್ರೌಢಶಾಲೆಯಲ್ಲಿ ಫಲಿತಾಂಶ ಪ್ರಕಟ ಮಾಡಲಾಗುವುದು.

ಪಿಯುಸಿ ಫಲಿತಾಂಶ: ಪಿಯು ಫಲಿತಾಂಶ ಸಹ ಮುಂದಿನ ವಾರವೇ ಪ್ರಕಟವಾಗಲಿದೆ. ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ಒಂದೆರಡು ದಿನಗಳ ಅವಧಿಯಲ್ಲಿ ಪಿಯು ಫಲಿತಾಂಶ ಪ್ರಕಟವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Secondary Education Examination Board (KSEB) will declare the results of the Secondary School Leaving Certificate (SSLC) or Class 10 examinations next week. On May 13th a confusion occurred about SSLC results.
Please Wait while comments are loading...