ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿದ್ದಾರೆ 72 ಮಂದಿ ಸಹಸ್ರ ಕೋಟ್ಯಾಧೀಶರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಕರ್ನಾಟಕದಲ್ಲಿ ಒಟ್ಟು 72 ಮಂದಿ ಬಳಿ ಒಂದು ಸಾವಿರ ಕೋಟಿ ರೂಗೂ ಮೇಲ್ಪಟ್ಟ ಆಸ್ತಿ ಇದೆ. ಇವರ ಒಟ್ಟು ಸಂಪತ್ತಿನ ಮೌಲ್ಯ 3.49 ಲಕ್ಷ ಕೋಟಿ ರೂಪಾಯಿಗಳಾಗಿವೆ.

ಬಿಲ್ ಗೇಟ್ಸ್ ಹಿಂದಿಕ್ಕಿ ಅತ್ಯಂತ ಶ್ರೀಮಂತ ಎನಿಸಿದ ಜೆಫ್! ಬಿಲ್ ಗೇಟ್ಸ್ ಹಿಂದಿಕ್ಕಿ ಅತ್ಯಂತ ಶ್ರೀಮಂತ ಎನಿಸಿದ ಜೆಫ್!

ದೇಸದಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹೊಂದಿರುವ 831 ಕುಬೇರರಿದ್ದಾರೆ ಎಂದು ಬ್ಲಾಕ್ಲೇರ್ಸ್ ಹ್ಯೂರನ್ ಇಂಡಿಯಾ ರಿಚ್ 2018 ವರದಿ ಹೇಳಿದೆ. ಇವರ ಪೈಕಿ 272 ಮಂದಿ ಮಹಾರಾಷ್ಟ್ರದಲ್ಲೇ ಇದ್ದು, ರಾಜಧಾನಿ ದೆಹಲಿಯಲ್ಲಿ 163 ಮಂದಿ ಇದ್ದಾರೆ. ಹಾಗೆಯೇ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು 72 ಮಂದಿ ಕುಬೇರರಿದ್ದಾರೆ. ಮುಖೇಶ್ ಅಂಬಾನಿ ಭಾರತದ ಸಿರಿವಂತ ಎಂಬ ಪಟ್ಟವನ್ನು ಉಳಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ಈಗ ಏಷ್ಯಾದಲ್ಲೇ ಶ್ರೀಮಂತ ನಂಬರ್ ಒನ್ ಮುಕೇಶ್ ಅಂಬಾನಿ ಈಗ ಏಷ್ಯಾದಲ್ಲೇ ಶ್ರೀಮಂತ ನಂಬರ್ ಒನ್

ಈ ಸಾಲಿನಲ್ಲಿ ಗುಜರಾತ್‌ನ 22 ಜನರು ಬೃಹತ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಕಳೆದ ವರ್ಷ 36 ಆಗರ್ಭ ಶ್ರೀಮಂತರು ಒಟ್ಟು 2.40 ಲಕ್ಷ ಕೋಟಿ ರೂಪಾಯಿ ಸಂಪತ್ತು ಹೊಂದಿದ್ದರು.

ವಾಣಿಜ್ಯ ನಗರಿ ಮುಂಬೈ ಭಾರತದ ಶ್ರೀಮಂತ ನಗರ ವಾಣಿಜ್ಯ ನಗರಿ ಮುಂಬೈ ಭಾರತದ ಶ್ರೀಮಂತ ನಗರ

Karnataka stands third in highest number of thousand crorepathis

ಗುಜರಾತ್‌ನ ಅದಾನಿ ಗ್ರೂಪ್‌ ಮಾಲೀಕ ಗೌತಮ ಅದಾನಿ ಅವರು ಒಟ್ಟು 71,200 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದರೆ, ಜೈಡಸ್ ಸಮೂಹದ ಪಂಕಜ್ ಪಟೇಲ್ 32,100ಕೋಟಿ, ಎಐಎ ಎಂಜಿನಿಯರಿಂಗ್ ನ ಭದ್ರೇಶ್ ಶಾ 9700 ಕೋಟಿ, ಕರ್ಶಾನ್ ಭಾಯ್ ಪಟೇಲ್ 9600 ಕೋಟಿ, ಟೊರೆಂಟ್ ಗ್ರೂಪ್‌ನ ಪ್ರವರ್ತಕ ಸಮೀರ್ ಮತ್ತು ಸುಧೀರ್ ಮೆಹ್ತಾ ತಲಾ 8300 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ.

English summary
Barclay's Hurun Indian Rich has released its report for the year of 2018 which identifies thousand crorepathis in the country. This year Karnataka consecutively stands at third in the country with 72 thousand crorepathis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X