ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಯಾವ ಪರೀಕ್ಷೆ ಎಂದು? ಇಲ್ಲಿದೆ ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಆಗಸ್ಟ್ 10ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿತ್ತು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಪೂರಕ ಪರೀಕ್ಷೆ ಆಯೋಜಿಸಲಾಗಿದೆ.

Recommended Video

Chris Gayle went to a party with Usain Bolt, who has now tested Corona Positive | Oneindia Kannada

ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಲು ಸಾಧ್ಯವಾಗಿರಲಿಲ್ಲ. ಅವರಿಗೂ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಿದ್ದು, ಅವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. ಅವರ ಹಾಜರಾತಿಯನ್ನು ಪ್ರಥಮ ಅವಕಾಶ ಎಂದೇ ಪರಿಗಣಿಸಲಾಗುತ್ತದೆ. ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಆನ್‌ಲೈನ್ ಮೂಲಕ ಅವಕಾಶ ನೀಡಲಾಗಿತ್ತು. ಪರೀಕ್ಷಾ ಶುಲ್ಕ ಸ್ವೀಕೃತಿ ಮತ್ತು ಆನ್‌ಲೈನ್ ವಿದ್ಯಾರ್ಥಿ ವಿವರ ಅಪ್‌ಲೋಡ್ ಮಾಡಲು ಆಗಸ್ಟ್ 20 ಕೊನೆಯ ದಿನವಾಗಿತ್ತು. 200 ರೂ ದಂಡದೊಂದಿಗೆ ವಿವರ ಸಲ್ಲಿಸಲು ಆಗಸ್ಟ್ 24ಕೊನೆಯ ದಿನವಾಗಿತ್ತು.

ಡಿಸ್ಟಿಂಕ್ಷನ್ ಪಡೆದರೂ ಮುಂದೆ ಓದಲಾಗದ ಸ್ಥಿತಿಯಲ್ಲಿರುವ ವಿದ್ಯಾರ್ಥಿಯ ಕತೆ, ವ್ಯಥೆಡಿಸ್ಟಿಂಕ್ಷನ್ ಪಡೆದರೂ ಮುಂದೆ ಓದಲಾಗದ ಸ್ಥಿತಿಯಲ್ಲಿರುವ ವಿದ್ಯಾರ್ಥಿಯ ಕತೆ, ವ್ಯಥೆ

ಈಗ ಶಿಕ್ಷಣ ಮಂಡಳಿಯು ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಕೆಎಸ್‌ಇಇಬಿಯ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭ

ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭ

ಪೂರಕ ಪರೀಕ್ಷೆಗಳು ಸೆ. 21ರಂದು ಆರಂಭವಾಗಲಿದ್ದು, ಸೆ. 28ಕ್ಕೆ ಮುಕ್ತಾಯವಾಗಲಿದೆ. ಸತತವಾದ ದಿನಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಸೆ. 27ರ ಭಾನುವಾರ ಮಾತ್ರ ವಿರಾಮ ಇರಲಿದೆ. ಪರೀಕ್ಷೆಯ ವೇಳಾಪಟ್ಟಿಯಲ್ಲಿ ದಿನಾಂಕ, ಸಮಯ, ಪರೀಕ್ಷೆಯ ಅವಧಿ, ವಿಷಯದ ಕೋಡ್ ಮತ್ತು ಪ್ರತಿ ವಿಷಯಕ್ಕೆ ಗರಿಷ್ಠ ಅಂಕಗಳ ವಿವರಗಳನ್ನು ನಮೂದಿಸಲಾಗಿದೆ. ಪರೀಕ್ಷೆಗಳು ಬೆಳಿಗ್ಗೆ 10.30ರಿಂದ ಆರಂಭವಾಗಿ ಮಧ್ಯಾಹ್ನ 1.45ಕ್ಕೆ ಮುಗಿಯಲಿವೆ. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆಯನ್ನು ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ಗುಡ್ಡ ಹತ್ತಬೇಕು, ಕೆಸರು ರಸ್ತೆಯಲ್ಲೇ ಸಾಗಬೇಕು; ಓದಿಗೆ ಇವೆಲ್ಲ ಅಡ್ಡಿಯಾಗಲಿಲ್ಲಗುಡ್ಡ ಹತ್ತಬೇಕು, ಕೆಸರು ರಸ್ತೆಯಲ್ಲೇ ಸಾಗಬೇಕು; ಓದಿಗೆ ಇವೆಲ್ಲ ಅಡ್ಡಿಯಾಗಲಿಲ್ಲ

ಮೊದಲ ನಾಲ್ಕು ದಿನದ ಪರೀಕ್ಷೆಗಳು

ಮೊದಲ ನಾಲ್ಕು ದಿನದ ಪರೀಕ್ಷೆಗಳು

ಸೆಪ್ಟೆಂಬರ್ 21: ಗಣಿತ ಮತ್ತು ಸಮಾಜಶಾಸ್ತ್ರ (ಕೋರ್ ಸಬ್ಜೆಕ್ಟ್ಸ್)

ಸೆಪ್ಟೆಂಬರ್ 22: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ (ಪ್ರಥಮ ಭಾಷೆ).

ಸೆಪ್ಟೆಂಬರ್ 23: ಸಮಾಜ ವಿಜ್ಞಾನ

ಸೆಪ್ಟೆಂಬರ್ 24: ಇಂಗ್ಲಿಷ್, ಕನ್ನಡ (ಎರಡನೆಯ ಭಾಷೆ)

ಕೊನೆಯ ಮೂರು ಪರೀಕ್ಷೆಗಳು

ಕೊನೆಯ ಮೂರು ಪರೀಕ್ಷೆಗಳು

ಸೆಪ್ಟೆಂಬರ್ 25: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು (ತೃತೀಯ ಭಾಷೆ).

ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ನೆಸ್ (ಎನ್‌ಎಸ್‌ಕ್ಯೂಎಫ್ ಪರೀಕ್ಷೆ ವಿಷಯಗಳು).

ಸೆಪ್ಟೆಂಬರ್ 26: ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ & ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಭಾರತೀಯ ಅರ್ಥಶಾಸ್ತ್ರ.

ಸೆಪ್ಟೆಂಬರ್ 28: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ.

ಸಂಗೀತ ಪರೀಕ್ಷೆಗಳ ವಿವರ

ಸಂಗೀತ ಪರೀಕ್ಷೆಗಳ ವಿವರ

ಜೂನಿಯರ್ ತಾಂತ್ರಿಕ ಶಾಲೆಯ ಅಭ್ಯರ್ಥಿಗಳಿಗೆ ಪ್ರಾಕ್ಟಿಕಲ್ ಮತ್ತು ಮೌಖಿಕ ಪರೀಕ್ಷೆಗಳನ್ನು 2020ರ ಸೆ. 29ರಂದು ನಡೆಸಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ/ಹಿಂದೂಸ್ಥಾನಿ ಸಂಗೀತ ಥಿಯರಿ ಪರೀಕ್ಷೆಗಳನ್ನು ಮಧ್ಯಾಹ್ನ 2.30ರಿಂದ 4.15ರವರೆಗೆ ನಡೆಸಲಾಗುತ್ತದೆ. ಪ್ರಾಕ್ಟಿಕಲ್ ಪರೀಕ್ಷೆಯು 4.15ರಿಂದ 5.45ರವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ kseeb.kar.nic.in ವೆಬ್‌ಸೈಟ್ ವೀಕ್ಷಿಸಬಹುದು.

ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆಎಸ್‌ಎಸ್‌ಎಲ್‌ಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆ

English summary
Karnataka SSLC Supplementary Exam 2020 time table released. Exam would begin on September 21 and would end on Sep 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X