ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನ

By Nayana
|
Google Oneindia Kannada News

Recommended Video

SSLC Results 2018 : ಉಡುಪಿ ಮೊದಲ ಸ್ಥಾನ ಹಾಗು ಯಾದಿಗಿರಿಗೆ ಕೊನೇ ಸ್ಥಾನ | Oneindia Kannada

ಬೆಂಗಳೂರು, ಮೇ07: 2018 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ (ಮೇ7) ಹೊರಬಿದ್ದಿದೆ. ಈ ಬಾರಿ ಒಟ್ಟಾರೆ ಶೇ.71.93 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಶೇಕಡಾ 4ರಷ್ಟು ಹೆಚ್ಚಳವಾಗಿದೆ.

ಈ ಬಾರಿಯೂ, ಬಾಲಕಿಯರೇ ಮೇಲುಗೈ, ಶೇ. 78.01ವಿದ್ಯಾರ್ಥಿನಿಯರು ತೇರ್ಗಡೆ, ಶೇ.66.56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ 67.87ಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್, 625ಕ್ಕೆ 625 ಅಂಕವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದು, 624 ಅಂಕಗಳನ್ನು ಎಂಟು ವಿದ್ಯಾರ್ಥಿಗಳು ಪಡೆದಿದ್ದಾರೆ.

ಗ್ರಾಮೀಣ ಭಾಗದ ಶೇ.74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ.69.38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ಮೂರನೇ ಸ್ಥಾನದಲ್ಲಿದೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ನಗರ ಜಿಲ್ಲೆಗೆ 22 ನೇ ಸ್ಥಾನ ಪಡೆದುಕೊಂಡಿದೆ.

ಮಧ್ಯಾಹ್ನ ಒಂದು ಗಂಟೆ ನಂತರ ಅಂತರ್ಜಾಲ ತಾಣದಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಮೇ 8ರ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಬಾರಿ ಒಟ್ಟು 4,56,103 ಬಾಲಕರು ಮತ್ತು 3,98,321 ಬಾಲಕಿಯರೂ ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು.

ಇದರಲ್ಲಿ 70,253 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 23,199 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಏಪ್ರಿಲ್ 15 ರಿಂದ 25 ರವರೆಗೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದಿತ್ತು. ಎಸ್‌ಎಸ್‌ಎಸ್‌ಸಿ ಬೋರ್ಡ್ ಪ್ರಧಾನ ನಿರ್ದೇಶಕಿ ಶಾಲಿನಿ ರಜನೀಶ್‌ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

Karnataka SSLC results 2018:Udupi tops,Yagdir in last place

SSLC ಫಲಿತಾಂಶ ಪ್ರಕಟ: ಆನ್ಲೈನ್ ನಲ್ಲಿ ನೋಡುವುದು ಹೇಗೆ?SSLC ಫಲಿತಾಂಶ ಪ್ರಕಟ: ಆನ್ಲೈನ್ ನಲ್ಲಿ ನೋಡುವುದು ಹೇಗೆ?

ಇದೇ ಮೊದಲ ಬಾರಿಗೆ ಅಂಕಗಳ ಮರುಎಣಿಕೆ ಮತ್ತು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಹಾಗೂ ಜೆರಾಕ್ಸ್ ಪ್ರತಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನು ಮಂಡಳಿ ಜಾರಿಗೆ ತಂದಿದೆ. ಫಲಿತಾಂಶವನ್ನು www.sslc.kar.nic.in, www.karresults.nic.in ನಲ್ಲಿ ವೀಕ್ಷಿಸಬಹುದು.

English summary
The Karnataka Secondary Education Examination Board (KSEEB) declared the SSLC exam result on Monday. The overall pass percentage stood at 71.93 percent Out of 8,54,424 lakh student. Girls outshone boys once again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X