ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

|
Google Oneindia Kannada News

ಬೆಂಗಳೂರು, ಜೂನ್ 16: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ ಮಾಡಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆಯನ್ನು ಬೋರ್ಡ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷಾ ಮಂಡಳಿಯ ವೆಬ್​ಸೈಟ್ www.sslc.Karnataka.gov.in ನಲ್ಲಿ ಪ್ರಕಟವಾಗಿದ್ದು, ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಪ್ರಕಟವಾಗಿದೆ.

ಫೇಲ್ ಮಾಡದ ಮೇಲೆ ಎಸ್ಎಸ್ಎಲ್ ಸಿ ಪರೀಕ್ಷೆ ಯಾಕೆ ಶಿಕ್ಷಣ ಸಚಿವರೇ ? ಫೇಲ್ ಮಾಡದ ಮೇಲೆ ಎಸ್ಎಸ್ಎಲ್ ಸಿ ಪರೀಕ್ಷೆ ಯಾಕೆ ಶಿಕ್ಷಣ ಸಚಿವರೇ ?

ಪ್ರಸಕ್ತ ವರ್ಷ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಜೂನ್ 2021ರಲ್ಲಿ ನಡೆಯಬೇಕಿದ್ದ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಹೀಗಾಗಿ ಪರೀಕ್ಷಾ ವಿಧಾನವನ್ನು ಸರಳೀಕರಣಗೊಳಿಸಿ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗಿದೆ.

Karnataka SSLC Exam 2021: Sample Question Paper Released

"ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೂರು ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಯಾಗಿದ್ದು, ಉತ್ತರಗಳನ್ನು ಒಎಂಆರ್ (OMR) ಶೀಟ್​​ನಲ್ಲಿ ನಮೂದಿಸಬೇಕು. ಒಎಂಆರ್ ಶೀಟ್ ಮಾದರಿಯೂ ಪ್ರಕಟವಾಗಿದ್ದು, ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ."

"ಮಾತೃಭಾಷೆ ಸೇರಿ ಮೂರು ವಿಷಯಗಳ ಎರಡನೇ ಪ್ರಶ್ನೆ ಪತ್ರಿಕೆ ಇನ್ನು ಎರಡು ದಿನಗಳಲ್ಲಿ ಪ್ರಕಟವಾಗಲಿದ್ದು, ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ಸೂಚಿಸಲಾಗಿದೆ."

Recommended Video

ಬಿಜೆಪಿ ಕಾರ್ ತಡೆಗಟ್ಟಿ ಪೆಟ್ರೋಲ್ ಬಂಕ್ ಬಳಿ ಮಹಿಳೆಯರ ಗಲಾಟೆ! | Oneindia Kannada

"ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ವೆಬ್​ಸೈಟ್​​ನಲ್ಲಿ ಡೌನ್​​ಲೋಡ್ ಮಾಡಿ ಅಭ್ಯಾಸ ಮಾಡಲು," ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ. ಶಿಕ್ಷಕರಿಗೂ ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಿರುವ ಅವರು, ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುವಂತೆ ಸಲಹೆ ನೀಡಿದ್ದಾರೆ.

English summary
The SSLC Sample Question Paper has been released by the Karnataka Secondary Education Examination Board and the first multiple choice question paper on the Board website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X