ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ನಡುವೆ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 2: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ, ಜಲಾಶಯಗಳು ತುಂಬಿ ತುಳುಕುತ್ತಿವೆ ಕಾರಣ ಮಹಾರಾಷ್ಟ್ರ ಮಳೆ.

ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರ, ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿರುವ ಜಲಾಶಯಗಳು ತುಂಬಿ ಹರಿಯುತ್ತಿವೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಹಿಪ್ಪರಗಿ ಜಲಾಶಯಕ್ಕೆ ಹರಿದುಬಂದಿದೆ ನೀರುಮಹಾರಾಷ್ಟ್ರದಲ್ಲಿ ಭಾರಿ ಮಳೆ, ಹಿಪ್ಪರಗಿ ಜಲಾಶಯಕ್ಕೆ ಹರಿದುಬಂದಿದೆ ನೀರು

ಅದನ್ನು ಹೊರತುಪಡಿಸಿ ರಾಜ್ಯದಲ್ಲಿರುವ ಜಲಾಶಯಗಳು ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಆಲಮಟ್ಟಿಯ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಬಾಗಲಕೋಟೆಯಲ್ಲೂ ಪ್ರವಾಹ ಸೃಷ್ಟಿಸಿದೆ. ಜಮಖಂಡಿ ತಾಲುಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ.

Karnataka Some Reservoirs are Full Because of Maharashtra Rain

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಜಮಖಂಡಿ ತಾಲೂಕಿನ ತುಬಚಿ, ಶೂರ್ಪಾಲಿ ಗ್ರಾಮಗಳ ಸಂಚಾರ ಮಾರ್ಗ ಬಂದ್ ಮಾಡಲಾಗಿದೆ. ನಾರಾಯಣಪುರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ರಾಯಚೂರು ತಾಲೂಕಿನ ಆತ್ಕೂರು ಹಾಗೂ ಕುರ್ವಾಕುಲ ನಡುಗಡ್ಡೆ ನಡುವಿನ ಸೇತುವೆ ಮುಳುಗಡೆಯಾಗಿವೆ.

ಜೊತೆಗೆ, ಪಶ್ಚಿಮ ತೀರ ರಾಜ್ಯಗಳಾದ ಗುಜರಾತ್, ರಾಜಸ್ಥಾನದ ಜೊತೆಗೆ ಪಂಜಾಬ್‍ನ ಲೂದಿಯಾನ ಹಾಗೂ ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲೂ ಪ್ರವಾಹ ಪರಿಸ್ಥಿತಿ ಇದೆ. ವಡೋದರಾದಲ್ಲಿ ರಸ್ತೆಗಳಲ್ಲೇ ದೇಹದ ಅರ್ಧಭಾಗಕ್ಕಿಂತ ಹೆಚ್ಚಿನ ಮಟ್ಟಕ್ಕೆ ನೀರು ತುಂಬಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ.

ಚಕ್ರಾ, ಸಾವೇಹಕ್ಲುವಿನಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆಚಕ್ರಾ, ಸಾವೇಹಕ್ಲುವಿನಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ ಎರಡು ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಪ್ರವಾಹ ಭೀತಿ ಆವರಿಸಿದೆ.

ಲಿಂಗನಮಕ್ಕಿ ಜಲಾಶಯ: 151.75 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಆಗಸ್ಟ್ 1 ರಂದು ಕೇವಲ 51.80 ಟಿಎಂಸಿ ನೀರಷ್ಟೇ ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನ 115.15 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಒಳಹರಿವು 17886 ಕ್ಯೂಸೆಕ್ಸ್, ಹೊರ ಹರಿವು 1536 ಕ್ಯೂಸೆಕ್ಸ್‌ನಷ್ಟಿದೆ. 1778.2 ಅಡಿಯಷ್ಟು ನೀರಿದೆ.

ಕೆಆರ್‌ಎಸ್‌: 45.05 ಟಿಎಂಸಿ ಸಾಮರ್ಥ್ಯವಿದ್ದು ಇದುವರೆಗೆ 8.15ರಷ್ಟು ನೀರು ಮಾತ್ರ ಶೇಖರಣೆಯಾಗಿದೆ. ಕಳೆದ ವರ್ಷ 42.42 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಒಳಹರಿವು 6511 ಕ್ಯೂಸೆಕ್ಸ್‌, ಹೊರಹರಿವು 9972 ಕ್ಯೂಸೆಕ್ಸ್‌ನಷ್ಟಿದೆ. 84.50 ಅಡಿಯಷ್ಟು ನೀರಿದೆ.

ಸೂಪಾ: 145.33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, 79.36 ಟಿಎಂಸಿಯಷ್ಟು ನೀರು ಸಂಗ್ರಹಾಗಿದೆ, ಕಳೆದ ವರ್ಷ 100.31 ಟಿಎಂಸಿಯಷ್ಟು ನೀರಿತ್ತು. 1791.54 ಅಡಿಯಷ್ಟು ನೀರಿದೆ.

ವರಾಹಿ: 31.10 ಟಿಎಂಸಿ ಸಾಮರ್ಥ್ಯ, 8.38 ಟಿಎಂಸಿ ನೀರು ಸಂಗ್ರಹ, ಕಳೆದ ವರ್ಷ 20.80 ಟಿಎಂಸಿಯಷ್ಟು ಸಂಗ್ರಹವಾಗಿತ್ತು. 1897.35 ಅಡಿ ನೀರಿದೆ.

ಹಾರಂಗಿ ಜಲಾಶಯ:8.07 ಟಿಎಂಸಿ ಸಾಮರ್ಥ್ಯ ಹೊಂದಿದ್ದು, 3.1 ಟಿಎಂಸಿ ಲಭ್ಯವಿದೆ. 2834.34 ಅಡಿ ನೀರಿದೆ. ಒಳಹರಿವು 1330 ಕ್ಯೂಸೆಕ್ಸ್‌, ಹೊರಹರಿವು 1365 ಕ್ಯೂಸೆಕ್ಸ್ ನೀರಿದೆ.

ಕಬಿನಿ ಜಲಾಶಯ: 2273.46 ಅಡಿ ನೀರು ಸಂಗ್ರಹವಿದೆ. 15.67 ಟಿಎಂಸಿ ಸಾಮರ್ಥ್ಯವಿದೆ, 9.60 ಟಿಎಂಸಿ ನೀರು ಸಂಗ್ರಹವಿದ್ದು, 2792 ಕ್ಯೂಸೆಕ್ಸ್ ಒಳಹರಿವು, 1271 ಕ್ಯೂಸೆಕ್ಸ್ ಹೊರಹರಿವಿದೆ.

ಹೇಮಾವತಿ ಜಲಾಶಯ: 2892.33 ಅಡಿ ನೀರು ಸಂಗ್ರಹ, 35.76 ಟಿಎಂಸಿ ಸಾಮರ್ಥ್ಯವಿದ್ದು 14.02 ಟಿಎಂಸಿ ನೀರು ಇದೆ. 3801 ಕ್ಯೂಸೆಕ್ಸ್‌ ಒಳ ಹರಿವು, 5000 ಕ್ಯೂಸೆಕ್ಸ್ ನೀರು ಹೊರ ಹರಿವಿದೆ.

ಭದ್ರಾ ಜಲಾಶಯ: 22117.00 ಅಡಿ ನೀರು ಸಂಗ್ರಹ, 63.04ಟಿಎಂಸಿ ಸಾಮರ್ಥ್ಯವಿದ್ದು 21.95 ಟಿಎಂಸಿ ನೀರು ಇದೆ. 5183 ಕ್ಯೂಸೆಕ್ಸ್‌ ಒಳ ಹರಿವು, 217 ಕ್ಯೂಸೆಕ್ಸ್‌ ನೀರು ಹೊರ ಹರಿವಿದೆ.

ತುಂಗಭದ್ರಾ ಜಲಾಶಯ: 1606.13 ಅಡಿ ನೀರು ಸಂಗ್ರಹ, 100.86ಟಿಎಂಸಿ ಸಾಮರ್ಥ್ಯವಿದ್ದು 28.40 ಟಿಎಂಸಿ ನೀರು ಇದೆ. 21272 ಕ್ಯೂಸೆಕ್ಸ್‌ ಒಳ ಹರಿವು, 1299 ಕ್ಯೂಸೆಕ್ಸ್‌ ನೀರು ಹೊರ ಹರಿವಿದೆ.

ಘಟಪ್ರಭಾ: 2151.75 ಅಡಿ ನೀರು ಸಂಗ್ರಹ, 48.98 ಟಿಎಂಸಿ ಸಾಮರ್ಥ್ಯವಿದ್ದು 32.00 ಟಿಎಂಸಿ ನೀರು ಇದೆ. 28744 ಕ್ಯೂಸೆಕ್ಸ್‌ ಒಳ ಹರಿವು, 2474 ಕ್ಯೂಸೆಕ್ಸ್‌ ನೀರು ಹೊರ ಹರಿವಿದೆ.

ಆಲಮಟ್ಟಿ:1701.36 ಅಡಿ ನೀರು ಸಂಗ್ರಹ, 119.26 ಟಿಎಂಸಿ ಸಾಮರ್ಥ್ಯವಿದ್ದು 102.05 ಟಿಎಂಸಿ ನೀರು ಇದೆ. 150409 ಕ್ಯೂಸೆಕ್ಸ್‌ ಒಳ ಹರಿವು, 213453 ಕ್ಯೂಸೆಕ್ಸ್‌ ನೀರು ಹೊರ ಹರಿವಿದೆ.

ನಾರಾಯಣಪುರ: 1610.74 ಅಡಿ ನೀರು ಸಂಗ್ರಹ, 26.14 ಟಿಎಂಸಿ ಸಾಮರ್ಥ್ಯವಿದ್ದು 20.40 ಟಿಎಂಸಿ ನೀರು ಇದೆ. 196221 ಕ್ಯೂಸೆಕ್ಸ್‌ ಒಳ ಹರಿವು, 197936 ಕ್ಯೂಸೆಕ್ಸ್‌ ನೀರು ಹೊರ ಹರಿವಿದೆ.

Karnataka Some Reservoirs are Full Because of Maharashtra Rain
English summary
Karnataka Reservoir Because of Maharashtra Rain, Ghatprabha, Almatti reservoir is full not because of Karnataka Rain it's because of Maharashtra, Mumbai rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X