• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ ಪರೀಕ್ಷೆ ದರ ಇಳಿಕೆ; ಸರ್ಕಾರಿ ಲ್ಯಾಬ್‌ನಲ್ಲಿ ಈಗ 1,200 ರೂ.

|

ಬೆಂಗಳೂರು, ಸೆಪ್ಟೆಂಬರ್ 27 : ಕರ್ನಾಟಕ ಸರ್ಕಾರ ಕೋವಿಡ್ ಪರೀಕ್ಷೆ ಜನರಿಗೆ ಹೊರೆ ಆಗದಂತೆ ಕ್ರಮ ಕೈಗೊಂಡಿದೆ. ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆಗಳ ದರದವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಪರೀಕ್ಷೆಗಳ ದರವನ್ನು ಕಡಿಗೊಳಿಸಿದೆ. 3ನೇ ಬಾರಿಗೆ ಸರ್ಕಾರ ಪರೀಕ್ಷೆಗಳ ದರವನ್ನು ಕಡಿತ ಮಾಡುತ್ತಿದೆ. ದರ ಕಡಿತ ಖಾಸಗಿ ಲ್ಯಾಬ್‌ಗಳಿಗೆ ಸಹ ಅನ್ವಯವಾಗಲಿದೆ.

ಕೋವಿಡ್-19 ಪರೀಕ್ಷೆಗಳಲ್ಲಿ ಒಂದಾದ ಆರ್‌ಟಿ-ಪಿಸಿಆರ್ ಮಾದರಿ ಸಮರ್ಪಕವಾದದ್ದು. ಇದಕ್ಕೆ ಬಳಕೆ ಮಾಡುವ ರಿ-ಏಜೆಂಟ್‌ಗಳ ಬೆಲೆ ತಗ್ಗಿದೆ. ಆದ್ದರಿಂದ, ಪರೀಕ್ಷೆಗಳ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ.

ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 8811 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 5,66,023ಕ್ಕೆ ಏರಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ 67,857 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.

ಕೋವಿಡ್ ಪರೀಕ್ಷೆ ದರಗಳು

ಕೋವಿಡ್ ಪರೀಕ್ಷೆ ದರಗಳು

ಕರ್ನಾಟಕ ಸರ್ಕಾರದ ಆದೇಶದಂತೆ ಈಗ ಸರ್ಕಾರಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ 1,200 ರೂ. ದರ ನಿಗದಿ ಮಾಡಲಾಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು 1,600 ರೂ. ದರ ನೀಡಬೇಕಿದೆ. 3ನೇ ಬಾರಿಗೆ ಕೋವಿಡ್ ಪರೀಕ್ಷೆ ದರ ಕಡಿತ ಮಾಡಲಾಗಿದೆ.

ಜುಲೈ ಮತ್ತು ಆಗಸ್ಟ್‌ನಲ್ಲೂ ದರ ಕಡಿತ

ಜುಲೈ ಮತ್ತು ಆಗಸ್ಟ್‌ನಲ್ಲೂ ದರ ಕಡಿತ

ಕೋವಿಡ್ ಪರೀಕ್ಷೆಗೆ ಸಂಗ್ರಹಿಸಲಾದ ಸ್ವ್ಯಾಬ್‌ ಮಾದರಿಯನ್ನು ಸರ್ಕಾರಿ ಲ್ಯಾಬ್‌ನಲ್ಲಿ ಪರೀಕ್ಷಿಸಲು 2 ಸಾವಿರ, ಖಾಸಗಿ ಲ್ಯಾಬ್‌ನಲ್ಲಿ 3 ಸಾವಿರ ರೂ. ದರವನ್ನು ಜುಲೈನಲ್ಲಿ ನಿಗದಿ ಮಾಡಲಾಗಿತ್ತು. ಆಗಸ್ಟ್‌ನಲ್ಲಿ ಇದನ್ನು ಸರ್ಕಾರಿ ಲ್ಯಾಬ್‌ನಲ್ಲಿ 1,500 ಮತ್ತು ಖಾಸಗಿ ಲ್ಯಾಬ್‌ನಲ್ಲಿ 2,500ಕ್ಕೆ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಕೋವಿಡ್ ಕಾರ್ಯಪಡೆ ಶಿಫಾರಸು

ಕೋವಿಡ್ ಕಾರ್ಯಪಡೆ ಶಿಫಾರಸು

ಕರ್ನಾಟಕ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಲಹೆ ನೀಡಲು ಕಾರ್ಯಪಡೆಯೊಂದನ್ನು ರಚನೆ ಮಾಡಿದೆ. ಈ ಕಾರ್ಯಪಡೆ ಕೋವಿಡ್ ಪರೀಕ್ಷೆ ದರವನ್ನು ಕಡಿಮೆ ಮಾಡಬೇಕು, ಆಗ ಜನರಿಗೆ ಹೊರೆಯಾಗುವುದಿಲ್ಲ ಸ್ವಯಂ ಪ್ರೇರಿತವಾಗಿ ಜನರು ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ಸಲಹೆ ನೀಡಿತ್ತು. ಈ ಸಲಹೆಯಂತೆ ದರ ಕಡಿತ ಮಾಡಲಾಗಿದೆ.

ಕರ್ನಾಟಕ ಕೋವಿಡ್ ಸ್ಥಿತಿಗತಿ

ಕರ್ನಾಟಕ ಕೋವಿಡ್ ಸ್ಥಿತಿಗತಿ

ಕರ್ನಾಟಕದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 566023. ಭಾರತದಲ್ಲಿಯೇ ಹೆಚ್ಚು ಸೋಂಕಿತರು ಇರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಇದುವರೆಗೂ 455719 ಜನರು ರಾಜ್ಯದಲ್ಲಿ ಗುಣಮುಖರಾಗಿದ್ದಾರೆ. 8503 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 101782.

   UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

   English summary
   Karnataka government cut the COVID-19 test rate. Now people can pay 1,200 price in government lab and 1,600 in private.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X