ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 :ಕರ್ನಾಟಕದಲ್ಲಿ ಆರೋಗ್ಯ & ಜೀವ ವಿಮೆ ಹೆಚ್ಚಳ

|
Google Oneindia Kannada News

ಬೆಂಗಳೂರು, ನವೆಂಬರ್ 11: ಕೊರೋನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅವಧಿ (term)ಮತ್ತು ಆರೋಗ್ಯ ವಿಮೆಯಂಥ ಸುರಕ್ಷಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದೆ. ಕರ್ನಾಟಕ ಪ್ರದೇಶದಲ್ಲಿ ಅವಧಿ ವಿಮಾ ಪಾಲಿಸಿಗಳ ಮಾರಾಟ ಸಂಖ್ಯೆ ಏಪ್ರಿಲ್‍ನಲ್ಲಿ ಶೇಕಡ 54ರಷ್ಟು, ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಶೇಕಡ 32ರಷ್ಟು ಹೆಚ್ಚಿದೆ. ಆರೋಗ್ಯ ವಿಮಾ ಪಾಲಿಸಿ ಖರೀದಿಯಲ್ಲಿ ರಾಜ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 92ರಷ್ಟು ಬೆಳವಣಿಗೆ ಕಂಡಿದ್ದು, ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಶೇಕಡ 25ರಷ್ಟು ಪ್ರಗತಿ ದಾಖಲಾಗಿದೆ.

ಖರೀದಿ ನಡವಳಿಕೆಯು ಅವಧಿ ಜೀವವಿಮಾ ವಲಯದಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಉದ್ಯಮದ ಸರಳ ಹಾಗೂ ಕೈಗೆಟುಕುವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. 2020ನೇ ಹಣಕಾಸು ವರ್ಷದಲ್ಲಿ ಅವಧಿ ಮಾರುಕಟ್ಟೆ ವ್ಯಾಪಕ ಬದಲಾವಣೆಗಳನ್ನು ಕಂಡಿದೆ. ಗ್ರಾಹಕ ಖರೀದಿ ಪ್ರಮಾಣದಲ್ಲಿ ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ 2019ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡ 21ರಷ್ಟು ಪ್ರಗತಿ ಕಂಡುಬಂದಿದೆ.

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು? ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?

ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಸುಮಾರು 64% ಗ್ರಾಹಕರು 1 ಕೋಟಿ ರೂಪಾಯಿ ಮತ್ತು ಹೆಚ್ಚಿನ ಮೊತ್ತದ ವಿಮಾಸುರಕ್ಷೆಯನ್ನು ಖರೀದಿಸಿದ್ದಾರೆ. ಇದು ಜನಸಾಮಾನ್ಯರು ಹೇಗೆ ಕೈಗೆಟುವ ಬೆಲೆಯ, ಅಧಿಕ ಸುರಕ್ಷೆಯ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಾರೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಒಂದು ಕೋಟಿ ರೂಪಾಯಿ ವಿಮಾ ಮೊತ್ತದ ಅವಧಿ ವಿಮೆಯನ್ನು 70 ವರ್ಷ ಅವಧಿವರೆಗೆ ಸುರಕ್ಷೆ ಒದಗಿಸುವಂತೆ ಖರೀದಿಸಿದರೆ ಮಾಸಿಕ ವಿಮಾಕಂತು ಸುಮಾರು ಒಂದು ಸಾವಿರ ರೂಪಾಯಿಗಳಷ್ಟು ಮಾತ್ರ ಆಗುತ್ತದೆ.

ಕೋವಿಡ್-19 ಸೋಂಕು ವಿಮಾ ಜಾಗೃತಿ

ಕೋವಿಡ್-19 ಸೋಂಕು ವಿಮಾ ಜಾಗೃತಿ

ಯಾವುದೇ ಘಟ್ಟದಲ್ಲಿ ದಿಢೀರ್ ಅನಿಶ್ಚಿತತೆ ಉಂಟಾದಲ್ಲಿ ಕುಟುಂಬ ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಏಕೆಂದರೆ ಸೂಕ್ತವಾದ ಸುರಕ್ಷಾ ಜಾಲ ಇರುವುದಿಲ್ಲ. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಅವಧಿ ವಿಮೆ ನೆರವಿಗೆ ಬರುವುದು ಮಾತ್ರವಲ್ಲದೇ ಯಾವುದೇ ಆಕಸ್ಮಿಕ ಆಘಾತದ ವಿರುದ್ಧವೂ ಸುರಕ್ಷೆ ನೀಡುತ್ತದೆ. ಕೋವಿಡ್-19 ಸೋಂಕು ವಿಮಾ ಜಾಗೃತಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಈ ಅನಿಶ್ಚಿತ ಕಾಲಘಟ್ಟದಲ್ಲಿ ತಮ್ಮ ಕುಟುಂಬಗಳ ಸುರಕ್ಷೆಯನ್ನು ಕಾಪಾಡಲು ಉತ್ಸುಕರಾಗಿದ್ದಾರೆ.

ಅಂಕಿ ಅಂಶಗಳ ಪ್ರಕಾರ

ಅಂಕಿ ಅಂಶಗಳ ಪ್ರಕಾರ

ಅಂಕಿ ಅಂಶಗಳ ಪ್ರಕಾರ, 42-50 ವರ್ಷ ವಯೋಮಾನದವರು ಕಳೆದ ವರ್ಷಕ್ಕೆ ಹೋಲಿಸಿದರೆ ಅವಧಿ ವಿಮೆಯನ್ನು ಖರೀದಿಸುವಲ್ಲಿ ಗರಿಷ್ಠ ಪ್ರಗತಿ ಅಂದರೆ ಶೇಕಡ 95ರಷ್ಟು ಪ್ರಗತಿ ದಾಖಲಾಗಿದೆ. 2020ರ ಹೊಸ ಖರೀದಿಯಲ್ಲಿ 31-40 ವಯಸ್ಸಿನವರು ಶೇಕಡ 54ರಷ್ಟು ಪಾಲು ಹೊಂದಿದ್ದಾರೆ. 67% ಹರಿವು ವೇತನ ವರ್ಗಕ್ಕೆ ಸೇರಿದ್ದು, ಶೇಕಡ 33ರಷ್ಟು ಖರೀದಿದಾರರು ಸ್ವಯಂ ಉದ್ಯೋಗಿಗಳು. ಪಾಲಿಸಿ ಬಜಾರ್ ಮೂಲಕ ಆನ್‍ಲೈನ್‍ನಲ್ಲಿ ಪಾಲಿಸಿ ಖರೀದಿಸುವ ಅತ್ಯಧಿಕ ನಿವ್ವಳ ಗ್ರಾಹಕರ ಪಾಲು ಶೇಕಡ 20ರಷ್ಟಿದೆ. ಆರೋಗ್ಯ ವಿಮೆಯಲ್ಲಿ 26-45 ವರ್ಷ ವಯೋಮಿತಿಯವರು ಗರಿಷ್ಠ ಪ್ರಮಾಣದ ಹೂಡಿಕೆ ಮಾಡಿದ್ದು, 46-60 ವರ್ಷದವರು ಶೇಕಡ 20ರಷ್ಟು ಹೂಡಿಕೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಕರ್ನಾಟಕದಲ್ಲಿ ಆರೋಗ್ಯ ವಿಮಾ ಜಾಗೃತಿ

ಕರ್ನಾಟಕದಲ್ಲಿ ಆರೋಗ್ಯ ವಿಮಾ ಜಾಗೃತಿ

ಕರ್ನಾಟಕದಲ್ಲಿ ಆರೋಗ್ಯ ವಿಮಾ ಜಾಗೃತಿ ಬಗ್ಗೆ ಮಾತನಾಡಿ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವನ್ನು ಗಮನದಲ್ಲಿರಿಸಿಕೊಂಡು, ಜನ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅಧಿಕ ಆರೋಗ್ಯ ಸುರಕ್ಷಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಶೇಕಡ 43ರಷ್ಟು ಮಂದಿ 1 ಕೋಟಿ ರೂಪಾಯಿಯ ಆರೋಗ್ಯ ಸುರಕ್ಷೆ ಇರುವ ಯೋಜನೆಗಳನ್ನು ಖರೀದಿಸಿದ್ದಾರೆ. 59% ಮಂದಿ 1 ಕೋಟಿ ರೂಪಾಯಿ ಮೊತ್ತದ ಆರೋಗ್ಯ ಸುರಕ್ಷೆ ಹೊಂದಿರುವ ಕುಟುಂಬ ಫ್ಲೋಟರ್ ಅರೋಗ್ಯ ಯೋಜನೆಯನ್ನು ಖರೀದಿಸಿದ್ದಾರೆ. ಶೇಕಡ 41ರಷ್ಟು ಮಂದಿ ವೈಯಕ್ತಿಕ ಆರೋಗ್ಯ ಯೋಜನೆಗಳನ್ನು ಖರೀದಿಸಿದ್ದಾರೆ.

ವಿಮೆ ವಿಭಾಗದ ಮುಖ್ಯಸ್ಥ ಅಮಿತ್ ಛಾಬ್ರಾ

ವಿಮೆ ವಿಭಾಗದ ಮುಖ್ಯಸ್ಥ ಅಮಿತ್ ಛಾಬ್ರಾ

ಪಾಲಿಸಿಬಜಾರ್ ನ ಆರೋಗ್ಯ ವಿಮೆ ವಿಭಾಗದ ಮುಖ್ಯಸ್ಥ ಅಮಿತ್ ಛಾಬ್ರಾ ಮಾತನಾಡಿ, "ಸೂಕ್ತ ಅರೋಗ್ಯ ಸುರಕ್ಷೆ ಇಲ್ಲದಿದ್ದಲ್ಲಿ, ಯಾವುದೇ ಹಂತದಲ್ಲಿ ಎದುರಾಗುವ ದಿಢೀರ್ ವೈದ್ಯಕೀಯ ತುರ್ತು ಸಂದರ್ಭವು ವ್ಯಕ್ತಿಯ ಕ್ರೋಢೀಕರಿಸಿದ ನಿಧಿಯ ಮೇಲೆ ದೊಡ್ಡ ಅಪಾಯ ಸಾಧ್ಯತೆಯನ್ನು ತಂದೊಡ್ಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ವಯಸ್ಸಿನಲ್ಲಿ ಆರೋಗ್ಯ ವಿಮೆಯನ್ನು ಖರೀದಿಸುವುದು ಕೈಗೆಟುಕುವ ದರದಲ್ಲಿ ಸಾಧ್ಯವಾಗುವುದು ಮಾತ್ರವಲ್ಲದೇ, ಯಾವುದೇ ಬಗೆಯ ವೈದ್ಯಕೀಯ ತುರ್ತು ಸ್ಥಿತಿಯಲ್ಲೂ ಹಣಕಾಸು ವಿಚಾರದಲ್ಲಿ ಸುಭದ್ರವಾಗಿರುವಂತೆ ಮಾಡುತ್ತದೆ. ವೈದ್ಯಕೀಯ ಹಣದುಬ್ಬರ ಎರಡಂಕಿ ವೇಗದಲ್ಲಿ ಹೆಚ್ಚುತ್ತಿದ್ದು, ಕರ್ನಾಟಕದ ಗ್ರಾಹಕರು ಇದೀಗ ಅಧಿಕ ವಿಮಾ ಮೊತ್ತದ ಸುರಕ್ಷೆ ಒದಗಿಸುವ ಆರೋಗ್ಯ ವಿಮೆಯನ್ನು ನೋಡುತ್ತಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Recommended Video

ಕುಷನ್ ಸೋಫಾ ಹಾಗೆ ಮಾತಾಡಸತ್ತೆ!! | DK Ravi Mother | Oneindia Kannada

English summary
Policybazaar data analytics reveal that it has witnessed double-digit increase in the number of term and health insurance policies bought during Covid pandemic compared to 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X