ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಸುಮಾರು 600 ಮಂದಿ ಕೊರೊನಾ ಸೋಂಕಿತರು ಸಾವು

|
Google Oneindia Kannada News

ಬೆಂಗಳೂರು, ಮೇ 15: ಒಂದೊಡೆ ಆಮ್ಲಜನಕದ ಕೊರತೆ, ಇನ್ನೊಂದೆಡೆ ಹಾಸಿಗೆಗಳ ಕೊರತೆ ಇವೆರಡನ್ನೂ ಹೊಂದಿಸುವಷ್ಟರಲ್ಲಿ ರೋಗಿಗಳ ಸಾವು.

ಸಮಯಕ್ಕೆ ಸರಿಯಾಗಿ ಸಿಗದ ಬೆಡ್, ಚಿಕಿತ್ಸೆ ವಿಳಂಬದಿಂದಾಗಿ ಕಳೆದ 1 ತಿಂಗಳಿಂದ ರಾಜ್ಯದಲ್ಲಿ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ

ಕೋವಿಡ್ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಸರಿಯಾಗಿ ಬೆಡ್ ವ್ಯವಸ್ಥೆ ಆಕ್ಸಿಜನ್, ಹಾಗೂ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಈ ಸಾವುಗಳಾಗಿವೆ ಎಂದು ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ. ನಂದಕುಮಾರ್ 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಮನೆಯಲ್ಲಿ ಸಾವು ಏಕೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಈ ಮೊದಲು ನನಗೆ ಪ್ರತಿದಿನ 5-10 ಕರೆ ಬೆಡ್ ಕೇಳಿ ಬರುತ್ತಿದ್ದವು, ಆದರೆ ಈಗ ಅದರ ಸಂಖ್ಯೆ ಇಳಿದಿದ್ದು, ಕೇವಲ 1 ಮತ್ತು 2 ಕರೆಗಳು ಬರುತ್ತಿವೆ. ಕೇಂದ್ರ ಬೆಡ್ ನಿರ್ವಹಣೆ ವ್ಯವಸ್ಥೆಯಿಂದ ಇಳಿಮುಖವಾಗಿದೆ ಎಂದು ಹೇಳಿದ್ದಾರೆ.

ಹಾಸಿಗೆಗಳ ಕೊರತೆ

ಹಾಸಿಗೆಗಳ ಕೊರತೆ

ಹಾಸಿಗೆ ಕೊರತೆ ಹಿನ್ನೆಲೆಯಲ್ಲಿ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾಗಲಿಲ್ಲ, ಇದರ ಜೊತೆಗೆ ರೂಪಾಂತರಿ ವೈರಸ್ ನಿಂದಾಗಿ ಸಾವಿನ ಸಂಖ್ಯೆ ದುಪ್ಪಟ್ಟಾಗಿದೆ, ಈ ಮೊದಲು ರೋಗದ ತೀವ್ರತೆ ಹೆಚ್ಚಾಗಲು ಆರರಿಂದ 8 ದಿನ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಕೇವಲ ಮೂರರಿಂದ ನಾಲ್ಕು ದಿನಗಳಲ್ಲೇ ಸೋಂಕು ತೀವ್ರವಾಗುತ್ತಿದೆ.

ಉಸಿರಾಟದ ತೊಂದರೆ ಹೆಚ್ಚು

ಉಸಿರಾಟದ ತೊಂದರೆ ಹೆಚ್ಚು

ನ್ಯುಮೋನಿಯಾ, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೇ ಸಾವಿನ ಪ್ರಮಾಣ ತಗ್ಗಲಿದೆ ಎಂದು ನಂದಕುಮಾರ್ ಹೇಳಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ಬೆಡ್ ಸಿಗುತ್ತಿಲ್ಲ ಎಂದು ತುರ್ತು ಸೇವೆ ವಿಭಾಗದ ಸ್ವಯಂ ಸೇವಕ ಅಮೀನ್ ಇ ಮುದಾಸರ್ ಹೇಳಿದ್ದಾರೆ.

ರೋಗಿಗಳು ಐಸಿಯು ಹಾಸಿಗೆಗಾಗಿ 2-3 ದಿನ ಕಾಯಬೇಕು

ರೋಗಿಗಳು ಐಸಿಯು ಹಾಸಿಗೆಗಾಗಿ 2-3 ದಿನ ಕಾಯಬೇಕು

ಕೆಲವು ರೋಗಿಗಳಿಗೆ 2-3 ದಿನಗಳವರೆಗೆ ಐಸಿಯು ಹಾಸಿಗೆ ಸಿಗುತ್ತಿಲ್ಲ, ಆಮ್ಲಜನಕದ ಶುದ್ಧತ್ವ ಮಟ್ಟ ಕಡಿಮೆ ಮತ್ತು ಉಸಿರಾಟದ ತೊಂದರೆಯಿಂದಾಗಿ ಅವರು ಬಳಲುತ್ತಾರೆ, ಇದು ರೋಗಿಗಳಿಗೆ ಸಾಕಷ್ಟು ಆಘಾತವನ್ನುಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರು ಮನೆಯಲ್ಲಿ ಹೃದಯಾಘಾತಕ್ಕೊಳಗಾಗುತ್ತಾರೆ. ಈ ಮೊದಲು ಮನೆಯಲ್ಲೇ ಆರೈಕೆ ಸೇವೆಗಾಗಿ ವೈದ್ಯರನ್ನು ರೋಗಿಯ ಮನೆಗೆ ಕಳುಹಿಸಲಾಗುತ್ತಿತ್ತು, ಆದರೆ ಅದು ಈಗ ಲಭ್ಯವಿಲ್ಲ "ಎಂದು ಮುದಾಸರ್ ಗಮನ ಸೆಳೆದರು.

ರಾಜ್ಯದಲ್ಲಿ ಅತಿ ಹೆಚ್ಚು ಸಾವು ದಾಖಲು

ರಾಜ್ಯದಲ್ಲಿ ಅತಿ ಹೆಚ್ಚು ಸಾವು ದಾಖಲು

ಏಪ್ರಿಲ್ 13 ರಿಂದ 30ರವರೆಗೆ ಸುಮಾರು 120 ಇದ್ದ ಸಾವಿನ ಸಂಖ್ಯೆ ಮೇ 1 ರಿಂದ ಮೇ 13ರವರೆಗೆ ಇದ್ದಕ್ಕಿದ್ದಂತೆ 479ಕ್ಕೇರಿದೆ, ಮೇ 12 ರಂದು ಅತಿ ಹೆಚ್ಚು ಸಾವು ದಾಖಲಾಗಿದ್ದು, ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ 88 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಹುಡುಕಾಟ, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

Recommended Video

Covid Centreನಲ್ಲಿ ಹುಡುಗಿಯ Love you Zindagi ಹಾಡು ವೈರಲ್ | Oneindia Kannada

English summary
In a span of just one month, the state has seen 599 COVID-19 patients succumbing at home due to delay in reaching hospitals and shortage of beds, among other factors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X