ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಇಂದಿನಿಂದ ದ್ವಿತೀಯು ಪಿಯುಗೆ ಆನ್‌ಲೈನ್ ತರಗತಿ ಶುರು

|
Google Oneindia Kannada News

ಬೆಂಗಳೂರು, ಜುಲೈ 15: ಪ್ರಸಕ್ತ ಶೈಕ್ಷಣಿಕ ಸಾಲಿನ(2021-22) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಪಿಯು ಕಾಲೇಜುಗಳಿಗೆ ಆದೇಶಿಸಿದೆ.

ಪ್ರಸಕ್ತ ಸಾಲಿನ ಭೌತಿಕ ತರಗತಿಗಳ ಆರಂಭದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಜು.15ರಿಂದ ಆನ್‌ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕು.

ಎಸ್ಎಸ್ಎಲ್ ಸಿ ಪರೀಕ್ಷೆ2021: ಸುರಕ್ಷತಾ ಮಾರ್ಗಸೂಚಿ ಪ್ರಕಟಎಸ್ಎಸ್ಎಲ್ ಸಿ ಪರೀಕ್ಷೆ2021: ಸುರಕ್ಷತಾ ಮಾರ್ಗಸೂಚಿ ಪ್ರಕಟ

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ತರಗತಿಗಳನ್ನು ನಡೆಸಬೇಕು. ಒಂದು ಗಂಟೆಗೆ ಒಂದು ತರಗತಿಯಂತೆ ನಿತ್ಯ ನಾಲ್ಕು ತರಗತಿಗಳನ್ನು ನಡೆಸಬೇಕು. ಮಧ್ಯಾಹ್ನ 12ರಿಂದ 12.30ರವರೆಗೆ ವಿರಾಮ ನೀಡಬೇಕೆಂದು ಸೂಚಿಸಿದೆ.

Karnataka: Second PU Academic Year Begins

ಆದರೆ ಈ ಬಾರಿ ಉಪನ್ಯಾಸಕರು, ತಾವು ಸೇವೆ ನಿರ್ವಹಿಸುತ್ತಿರುವ ಕಾಲೇಜುಗಳಿಂದಲೇ, ಎಮ್ ಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್​ಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾ ಪಟ್ಟಿಯನ್ನು ತಯಾರಿಸಿದ್ದಾರೆ.

ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವುದಿಲ್ಲವಾದರೂ ಪ್ರತಿಯೊಂದು ಕಾಲೇಜಲ್ಲಿ ಕೋವಿಡ್-19 ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಪಾಠ ಮಾಡಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಹಾಗೆಯೇ, ಸದರಿ ವ್ಯವಸ್ಥೆಯನ್ನು ಎಲ್ಲ ಕಾಲೇಜಿಗಳು ಅನೂಚಾನಾಗಿ ಪಾಲಿಸುತ್ತಿರುವ ಬಗ್ಗೆ ಉಪ ನಿರ್ದೇಶಕರುಗಳು ಕೇಂದ್ರ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪದವಿ ಪುರ್ವ ಕಾಲೇಜುಗಳಲ್ಲಿ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿರುವ ಬಗ್ಗೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಆಗಾಗ ಕಾಲೇಜುಗಳಿಗೆ ಭೇಟಿ ನೀಡಿ ಖಾತರಿ ಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

Recommended Video

DKS-ಮೂಟೆ ಮೂಟೆ ತರಕಾರಿ ಖರೀದಿ ಮಾಡಿದ ಶಿವಕುಮಾರ್ | Oneindia Kannada

ಜುಲೈ 7ರಿಂದಲೇ ಉಪನ್ಯಾಸಕರು ಕಾಲೇಜುಗಳಿಗೆ ಹಾಜರಾಗುತ್ತಿರುವುದರಿಂದ ಮತ್ತು ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಆರಂಭವಾಗಿರದ ಕಾರಣ ತರಗತಿಗಳನ್ನು ಆರಂಭಿಸಲೇ ಬೇಕಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ತಾವಿರುವ ಕಾಲೇಜುಗಳಿಂದ ಪಾಠಗಳನ್ನು ತೆಗೆದುಕೊಳ್ಳಬೇಕು ಅಂತ ಹೇಳಲಾಗಿದೆ.

English summary
The academic year for second year pre-university students is set to begin on July 15 (Thursday). Since a decision on physical classes is yet to be taken, schools have been told to start classes entirely online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X