ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ನ.8ರಿಂದ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭ

|
Google Oneindia Kannada News

ಬೆಂಗಳೂರು, ನವೆಂಬರ್ 04: ರಾಜ್ಯದಲ್ಲಿ ನವೆಂಬರ್ 08ರಿಂದ ಅಂಗನವಾಡಿ ಸೇರಿದಂತೆ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ ರಾಜ್ಯದ 66,361 ಅಂಗನವಾಡಿಗಳನ್ನು ನವೆಂಬರ್ 8 ರಂದು ಪುನರಾರಂಭಿಸುವುದಾಗಿ ಘೋಷಿಸಿದೆ. ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪೂರ್ವ ಶಾಲೆಗಳೊಂದಿಗೆ ಅನುಸರಿಸಲು ಮುಂದಾಗಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಸುತ್ತೋಲೆ ಹೊರಬಿದ್ದಿದೆ.

-ಕೋವಿಡ್ 19 ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರ ಭೌತಿಕ ತರಗತಿಗಳನ್ನು ನಡೆಸಬಹುದಾಗಿದೆ.

Karnataka Schools To Reopen For Students Of classes LKG, UKG From November 8

-ಶಾಲೆಗಳನ್ನು ಪ್ರಾರಂಭಿಸುವ ಮೊದಲು ಸೋಂಕು ನಿವಾರಕರಗಳನ್ನು /1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಬಳಸಿ ಸರ್ಕಾರದ ಮಾರ್ಗಸೂಚಿಯಂತೆ

-ಕಡ್ಡಾಯವಾಗಿ ಶುದ್ಧೀಕರಿಸುವುದು, ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೆ.

-ಶಾಲೆಗಳಲ್ಲಿ ಹಾಜರಾಗುವ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕಿದೆ.

-ಶಾಲೆಗೆ ಹಾಜರಾಗುವ ಎಲ್ಲಾ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಎಚ್ಚರಿಕೆವಹಿಸಬೇಕು.

Karnataka Schools To Reopen For Students Of classes LKG, UKG From November 8

-ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಹಾಗೂ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಹಾಗೂ 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್‌ಶೀಲ್ಡ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು

-ಮಕ್ಕಳಿಗೆ ಮನೆಯಿಂದಲೇ ಉಪಹಾರ, ಕುಡಿಯುವ ಶುದ್ಧ ನೀರನ್ನು ಕಳುಹಿಸುವಂತೆ ಎಲ್ಲಾ ಪೋಷಕರಿಗೂ ಕಡ್ಡಾಯವಾಗಿ ತಿಳಿಸಬೇಕು
-ಅವಶ್ಯಕತೆಗೆ ಅನುಸಾರವಾಗಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿನೀರಿನ ವ್ಯವಸ್ಥೆ ಮಾಡಬೇಕು

-ಮಕ್ಕಳು ಸೀನುವಾಗ/ಕೆಮ್ಮುವಾಗ ಬಾಯಿ/ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು
-ಯಾವುದಾದರೂ ಮಗುವಿಗೆ ಕೊರೊನಾ ದೃಢಪಟ್ಟಲ್ಲಿ ಶಾಲೆಯ ಉಳಿದ ಎಲ್ಲಾ ಮಕ್ಕಳಿಗೂ ಕೂಡ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು

Karnataka Schools To Reopen For Students Of classes LKG, UKG From November 8

ಅಂಗನವಾಡಿಗಳು 3-6 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿದಿನ ಎರಡು ಗಂಟೆಗಳ ಕಾಲ ತರಗತಿಗಳನ್ನು ನಡೆಸುತ್ತವೆ. ಇದೇ ನಿಯಮವು ಪ್ರಿಸ್ಕೂಲ್‌ಗಳಿಗೂ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ್ದ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್"ನಾನು ಬುಧವಾರ ಸಾರ್ವಜನಿಕ ಸೂಚನಾ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನವೆಂಬರ್ 8 ರಂದು ನಾವು ಪೂರ್ವ ಪ್ರಾಥಮಿಕ ಪುನರಾರಂಭಗೊಳ್ಳುವುದು 99% ಖಚಿತವಾಗಿದೆ" ಎಂದು ಹೇಳಿದ್ದರು.

ಐದು ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದ್ದು, ಅಂಗನವಾಡಿಗಳ ಪುನರಾರಂಭದ ಸುತ್ತೋಲೆಯಲ್ಲಿ ಮಕ್ಕಳಲ್ಲಿ ಮಾಸ್ಕ್ ಬಳಕೆಗೆ ಯಾವುದೇ ಸೂಚನೆಗಳಿಲ್ಲ ಎಂದು ಹೇಳಿದ್ದಾರೆ.

Recommended Video

ಧೋನಿಯ ಈ ಮಾತನ್ನು ಕೇಳಿದ್ದಿದ್ರೆ ಟೀಂ‌ ಇಂಡಿಯಾ ಪಾಕ್ ವಿರುದ್ಧ ಸೋಲ್ತಾನೆ ಇರ್ಲಿಲ್ಲ | Oneindia Kannada

ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಕೂಡ ಇದನ್ನು ಕಡ್ಡಾಯಗೊಳಿಸಲಾಗುವುದಿಲ್ಲ. ಆದಾಗ್ಯೂ, ಪೋಷಕರು ತಮ್ಮ ವಾರ್ಡ್‌ಗಳನ್ನು ಶಾಲೆಗೆ ಕಳುಹಿಸಲು ಒಪ್ಪಿಗೆಯ ಪತ್ರಗಳನ್ನು ಸಲ್ಲಿಸಲು ಕೇಳಲಾಗಿದೆ.

English summary
In Karnataka schools to reopen for students of classes LKG, UKG from November 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X