ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಜಾಮ ಪದ ಬಳಕೆಗೆ ಶಿಕ್ಷೆ, ಕಾನೂನು ತರಲು ಆಗ್ರಹ

|
Google Oneindia Kannada News

ಬೆಂಗಳೂರು ಆಗಸ್ಟ್‌ 24: ಹಜಾಮ/ಅಜಾಮ ಪದವನ್ನು ಬಳಸಿ ಬೈಯುವರನ್ನು ಶಿಕ್ಷೆಗೆ ಒಳಪಡಿಸಲು ಅನುವು ಮಾಡಿಕೊಡುವ ಕಾನೂನು ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್‌ ಆಗ್ರಹಿಸಿದ್ದಾರೆ.

Recommended Video

ಡಿಕೆಶಿ ಗೂಂಡ ಪವೃತ್ತಿ ಬಿಡಬೇಕು..! | Oneindia Kannada

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಅವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿರುವ ಅವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಕ್ಷೌರಿಕ ಮುಟ್ಟದ ಜನರಿಲ್ಲ ಆದರೆ ನಮಗೆ ಸಾಮಾಜಿಕವಾಗಿ ಗೌರವ ದೊರೆಯುತ್ತಿಲ್ಲ.

Karnataka Salon Owners Demand Bring Law To Restrict Use Of Hajama Word


ಎಲ್ಲಾ ವರ್ಗದ ಭಯದ ನೆರಳಿನಲ್ಲಿ ಅಪಹಾಸ್ಯ, ಅವಮಾನ, ಹಿಂಸೆ, ನಿಂದನೆ ಹಾಗೂ ಎಲ್ಲಾ ವರ್ಗಗಳ ಬಾಯಿಯ ಬೈಗುಳದ ತುತ್ತಾಗಿ ಅಪಮಾನಕ್ಕೆ ಒಳಗಾಗಿ ಮಾನಸಿಕ ಹಿಂಸೆ ಅನುಭವಿಸಿಕೊಂಡು ಅಪಹಾಸ್ಯಕ್ಕೆ ತುತ್ತಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಬಡ ಕ್ಷೌರಿಕರ ನೆರವಿಗೆ ಸವಿತಾ ಸಮಾಜದ ನೆರವು: ಅಶ್ವಥ್‌ ನಾರಾಯಣರಿಂದ ಚಾಲನೆ ಬಡ ಕ್ಷೌರಿಕರ ನೆರವಿಗೆ ಸವಿತಾ ಸಮಾಜದ ನೆರವು: ಅಶ್ವಥ್‌ ನಾರಾಯಣರಿಂದ ಚಾಲನೆ

ಇಂತಹ ದಾರುಣ ಪರಿಸ್ಥಿತಿ ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಎನ್ನುವ ಸದುದ್ದೇಶದಿಂದ ಹಜಾಮ/ಅಜಾಮ ಪದವನ್ನು ಬಳಸಿ ಅಪಮಾನ ಮಾಡಿದರೆ ಅಂತಹವರನ್ನು ಶಿಕ್ಷೆಗೆ ಒಳಪಡಿಸುವಂತಹ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕಾನೂನು ಜಾರಿಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದರು.

Karnataka Salon Owners Demand Bring Law To Restrict Use Of Hajama Word

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಮತ್ತು ಬೆಂಗಳೂರು ನಗರ ಅಧ್ಯಕ್ಷ ಹೆಚ್‌.ಎನ್‌ ನರಸಿಂಹಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

English summary
Karnataka Salon reservation Association Savitha Samaja President M. B Shivakumar has demanded government to bring a law to restrict use of Hajama word.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X