ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 1 ರಿಂದ ಕರ್ನಾಟಕದಲ್ಲಿ 2ನೇ ಹಂತದ ಕೊರೊನಾ ಲಸಿಕೆ ಅಭಿಯಾನ,ನೀವು ತಿಳಿಯಬೇಕಾದ ಅಂಶಗಳು

|
Google Oneindia Kannada News

ಬೆಂಗಳೂರು,ಮಾರ್ಚ್ 1: ಕರ್ನಾಟಕದಲ್ಲಿ ಇಂದಿನಿಂದ(ಮಾರ್ಚ್ 1)ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣಾ ಅಭಿಯಾನ ಆರಂಭವಾಗಿದೆ. ಕರ್ನಾಟಕದ 31 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ.

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ದಾಟಿದ ದೀರ್ಘಕಾಲದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಹಾಗೆಯೇ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆಯಾಗಿದೆ.

ಮೋಸ ಹೋದ ಅನುಭವ,ಕೊರೊನಾ ಲಸಿಕೆ ದರ ಕುರಿತು ಕಿರಣ್ ಮಜುಂದಾರ್ ಷಾ ಆಕ್ರೋಶಮೋಸ ಹೋದ ಅನುಭವ,ಕೊರೊನಾ ಲಸಿಕೆ ದರ ಕುರಿತು ಕಿರಣ್ ಮಜುಂದಾರ್ ಷಾ ಆಕ್ರೋಶ

ಪ್ರತಿ ಕೇಂದ್ರದಲ್ಲಿ 200 ಮಂದಿಗೆ ಕೊರೊನಾ ಲಸಿಕೆ ಹಾಕಲಾಗುತ್ತದೆ. ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಸೋಮವಾರ,ಬುಧವಾರ,ಶುಕ್ರವಾರ ಹಾಗೂ ಶನಿವಾರ ಸೇರಿದಂತೆ ನಾಲ್ಕು ದಿನ,ಖಾಸಗಿ ಲಸಿಕಾ ಕೇಂದ್ರದಲ್ಲಿ ವಾರದ ಏಳು ದಿನವೂ ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಗುತ್ತದೆ.

ಕೊರೊನಾ ಲಸಿಕೆಗೆ ನೋಂದಣಿ ಹೇಗೆ?

ಕೊರೊನಾ ಲಸಿಕೆಗೆ ನೋಂದಣಿ ಹೇಗೆ?

Co-WIN app ಅಥವಾ cowin.gov.in ವೆಬ್‌ಸೈಟ್‌ ಹೋಗಿ

  • ಅಲ್ಲಿ ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಸಬೇಕು
  • ನಿಮಗೆ ಬರುವ ಒಟಿಪಿಯನ್ನು ನೊಂದಾಯಿಸಿದ ಬಳಿಕ ನಿಮ್ಮ ಖಾತೆ ತೆರೆಯಲಿದೆ
  • ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಖಾತೆಯನ್ನೂ ತೆರೆಯಬಹುದು
  • ಇದಾದ ಬಳಿಕ ನಿಗದಿತ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಿರಿ.
  • ಒಬ್ಬರಿಗೆ ಲಸಿಕೆ ನೀಡಲು 30 ನಿಮಿಷ ಬೇಕು. ಹೀಗಾಗಿ ಪ್ರತಿ ಸೆಷನ್ನಲ್ಲಿ 100 ಜನರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗುತ್ತದೆ.
ಏನೇನು ದಾಖಲೆಗಳು ಬೇಕು?

ಏನೇನು ದಾಖಲೆಗಳು ಬೇಕು?

ಲಸಿಕಾವಿತರಣೆ ಕಾರ್ಯಕ್ರಮದಲ್ಲಿ ಮೊದಲು ಹೆಸರು ನೋಂದಣಿ ಕಡ್ಡಾಯವಾಗಿದೆ. ಕೇಂದ್ರಗಲ್ಲಿ ರಿಜಿಸ್ಟ್ರೆಷನ್ ವ್ಯವಸ್ಥೆ ಇರುವುದಿಲ್ಲ. ಹೆಸರು ನೋಂದಾಯಿಸಲು ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್ಪೋರ್ಟ್, ಪೆನ್ಷನ್ ದಾಖಲೆಗಳು ಸೇರಿದಂತೆ ಒಟ್ಟು 12 ದಾಖಲೆಗಳ ಪೈಕಿ ಒಂದು ಕಡ್ಡಾಯವಾಗಿರಲಿದೆ.

ಲಸಿಕೆ ಆರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ

ಲಸಿಕೆ ಆರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ

ಲಸಿಕೆ ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿಲ್ಲ. ಭಾರತ್ ಬಯೋಟೆಕ್ ತಯಾರಿಸಿರುವ ಕೋವ್ಯಾಕ್ಸಿನ್ (Covaxin) ಮತ್ತು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ (Covishield) ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಯಾವ ವ್ಯಾಕ್ಸಿನ್ ಲಭ್ಯವಿದೆಯೋ, ಅದೇ ವ್ಯಾಕ್ಸಿನ್ ನೀಡಲಾಗುತ್ತದೆ. ಲಸಿಕೆ ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿಲ್ಲ.

ದೀರ್ಘಕಾಲದ ಸಮಸ್ಯೆಗಳು ಯಾವುವು?

ದೀರ್ಘಕಾಲದ ಸಮಸ್ಯೆಗಳು ಯಾವುವು?

  • ಹೃದಯ ಸಂಬಂಧಿ ಕಾಯಿಲೆ, ಕಳೆದ ಒಂದು ವರ್ಷದಿಂದೀಚೆಗೆ ಆಸ್ಪತ್ರೆಗೆ ದಾಖಲಾಗಿರುವವರು
  • ಹೃದಯ ಶಸ್ತ್ರ ಚಿಕಿತ್ಸೆಯಾಗಿರುವವರು
  • ಮಧುಮೇಹ
  • ಮೂತ್ರಕೋಶ,ಯಕೃತ್ತು ಕಸಿ ಮಾಡಿಸಿದವರು
  • ಎಚ್‌ಐವಿ

English summary
The health officials in Karnataka said that the second phase of COVID-19 vaccination will begin on March 1, Monday, following the Union government guidelines. The second phase of the COVID-19 vaccination will cover citizens above 60 years of age as well as citizens above 45 years of age with comorbidities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X